Sunday, 15 May 2022

ಶೈಕ್ಷಣಿಕ ವರ್ಷ 2022-23

      ಶೈಕ್ಷಣಿಕ ವರ್ಷ 2022-23

ಪಾಲಕ&ಪೋಷಕ ಬಂಧುಗಳೇ, 2022-23 ನೇ ಸಾಲಿನ ಶಾಲಾ ದಾಖಲಾತಿ ಈಗಾಗಲೇ ಆರಂಭವಾಗಿವೆ.  ದಿನಾಂಕ 15/05/2022 ರಿಂದ 2022-23 ರ ಹೊಸ ಶೈಕ್ಷಣಿಕ ವರ್ಷವನ್ನು ಕರ್ನಾಟಕ ಸರ್ಕಾರ 'ಕಲಿಕಾ ಚೇತರಿಕೆಯ ವರ್ಷ' ಎಂದು ಘೋಷಿಸಿದೆ. ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಮಕ್ಕಳಲ್ಲಿ ಕಲಿಕಾ ನ್ಯೂನತೆ ಉಂಟಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ವರ್ಷ ಹಿಂದಿನ 2 ವರ್ಷಗಳಲ್ಲಿ ಮಗು ಕಲಿಯಬೇಕಿದ್ದ ಅತಿ ಅಗತ್ಯವಾದ ಕಲಿವಿನ ಫಲಗಳನ್ನು ಮತ್ತು ಈ ವರ್ಷ ಕಲಿಯಬೇಕಾದ ಕಲಿವಿನ ಫಲಗಳ ಸಬಲೀಕರಣ/ದೃಢತೆಯನ್ನು ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಉಂಟು ಮಾಡಲಾಗುವುದು.ಹಾಗಾಗಿ ಮಗುವನ್ನು ತುರ್ತಾಗಿ ಶಾಲೆಗೆ ಸೇರಿಸಿ.ನಿಮ್ಮ ಅರ್ಹ ವಯಸ್ಸಿನ ಮಗು ನಮ್ಮ ಊರಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಬೇಕು.ಇದರ ಪ್ರಯೋಜನ ಪಡೆಯಬೇಕು.ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕಾಗಿದೆ.

 ನಿಮ್ಮ ಮಗು ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಲಾಭಗಳಲ್ಲಿ ಮುಖ್ಯವಾದವುಗಳನ್ನು ಇಲ್ಲಿ ತಿಳಿಸಲಾಗಿದೆ.

1) ಉಚಿತವಾದ ಶಿಕ್ಷಣ.

2) ಪ್ರತಿಭಾವಂತ ಮತ್ತು ಕ್ರಿಯಾಶೀಲ ಶಿಕ್ಷಕ/ಕಿಯರಿಂದ ಉತ್ತಮ ಬೋಧನೆ.

3) ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.

4) ಉಚಿತವಾದ ಸಮವಸ್ತ್ರಗಳು.

5) ಉಚಿತವಾದ ಪಠ್ಯಪುಸ್ತಕಗಳು.

6) ಉಚಿತವಾದ ಕಂಪ್ಯೂಟರ್ ಶಿಕ್ಷಣ.

7) ವಾರದ 5 ದಿನ ಕ್ಷೀರಭಾಗ್ಯ.

8) ಉತ್ತಮ ಕಂಪನಿಯ 1 ಜೊತೆ ಶೂ&2 ಜೊತೆ ಸಾಕ್ಸ್.

9) ವಿದ್ಯಾರ್ಥಿ ವೇತನ.

10) ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.

11) ಗ್ರಂಥಾಲಯ ಸೌಲಭ್ಯ.

12) ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ.

13) ಸುಸಜ್ಜಿತ ಕೊಠಡಿಗಳು.

14) ನವೀನ ಬೋಧನೋಪಕರಣಗಳ ಮೂಲಕ ಪಾಠ ಬೋಧನೆ.

15) ಉತ್ತಮ ಆಟದ ಮೈದಾನ&ಅನೇಕ ಕ್ರೀಡಾ ಸಾಮಗ್ರಿಗಳ ಸೌಲಭ್ಯ.

16) ಉಚಿತ ಆನ್ಲೈನ್ ಕಲಿಕಾ ಚಟುವಟಿಕೆಗಳ ಆಯೋಜನೆ.

17) ನಲಿ-ಕಲಿ ಮೂಲಕ ಬೋಧನೆ.

18) 1ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ. 

19) ಪ್ರತಿಭಾ ಕಾರಂಜಿ ಕ್ರೀಡಾಕೂಟ ಆಯೋಜನೆ.

20) CCE ಮೂಲಕ ಬೋಧನೆ.

21) TLM ಮೂಲಕ ಬೋಧನೆ.

22) ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ.

23) ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.

24) ಶಾಲಾ ಮಟ್ಟದಲ್ಲಿ ಕಾಲ ಕಾಲಕ್ಕೆ ರಸಪ್ರಶ್ನೆ ಕಾರ್ಯಕ್ರಮಗಳ ಆಯೋಜನೆ.

25) ವಿವಿಧ ಆಟೋಟಗಳ ಆಯೋಜನೆ.

26) ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ.

27) ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯದಲ್ಲಿ ಮಕ್ಕಳ ಆಸಕ್ತಿ ಬೆಳೆಸುವುದು& ತೊಡಗಿಸುವುದು.

28) ಮೌಲ್ಯಶಿಕ್ಷಣ.

29) ಮಕ್ಕಳಿಂದಲೇ ಸುಂದರ ಶಾಲಾ ತೋಟ ನಿರ್ಮಾಣ.

30) ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.

31) ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.

32) ಕಾಲ ಕಾಲಕ್ಕೆ ಶಿಕ್ಷಕರಿಗೆ ಇಲಾಖೆಯಿಂದ ತರಬೇತಿ.ಅದರ ಮೂಲಕ ಶಿಕ್ಷಕರ ಕಲಿಕಾ ವಿಧಾನಗಳಲ್ಲಿ ಅಗತ್ಯ ಬದಲಾವಣೆ.

33) ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು SATS ತಂತ್ರಾಂಶದ ಕಡ್ಡಾಯ ಬಳಕೆ.

34) ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಚೇತರಿಕೆಯಲ್ಲಿ ಕಾರ್ಯಕ್ರಮದಡಿಯಲ್ಲಿ ಪರಿಹಾರ ಬೋಧನೆ ನಡೆಸಲಾಗುವುದು.

35) ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಮರ್ಪಕ ಅನುಷ್ಠಾನ.

36) ಶಾಲಾ ಸಂಸತ ರಚನೆಯ ಮೂಲಕ ಪ್ರಜಾಪ್ರಭುತ್ವದ ಪರಿಚಯ.

37) ಶಾಲೆ ಉಸ್ತುವಾರಿಗಾಗಿ SDMC ರಚನೆಯ ಗುರಿ.

38) ವಿವಿಧ ಸಂಘಗಳ ರಚನೆಯ ಮೂಲಕ‌ ಮಕ್ಕಳಲ್ಲಿ ಜಾಗೃತಿ.

39) ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.

40) ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಮಾನವೀಯ ಗುಣಗಳ ಸ್ಪಂದನೆ ಇತ್ಯಾದಿಗಳ ನೈಜ ಅನುಭವ.

41)ವಾರದಲ್ಲಿ 3 ದಿನ ಮಕ್ಕಳಿಗೆ ಮೊಟ್ಟೆ/ಬಾಳೆಹಣ್ಣು ವಿತರಣೆ.

42)ಆಸಕ್ತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೇಸಿಕ್ ಸಂಗೀತಾಭ್ಯಾಸ ನೀಡಲಾಗುವುದು.


    ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ ಕೋಟಾದ ಸೌಲಭ್ಯ, ಗ್ರಾಮಾಂತರ ಕೋಟಾದ ಸೌಲಭ್ಯ ...ಹೀಗೆ ಇಷ್ಟೊಂದು ವಿವಿಧ ಸೌಲಭ್ಯಗಳನ್ನು ನೀಡುವ ನಮ್ಮ ಊರಿನ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಕೂಡಲೇ ಸೇರಿಸಿ ಮತ್ತು ಆ ಮಕ್ಕಳ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ & ಅವರ ಉಜ್ವಲ ಭವಿಷ್ಯಕ್ಕೆ ನಮ್ಮೊಂದಿಗೆ ಸಹಕರಿಸಿ.

    ಕಳೆದ ಶೈಕ್ಷಣಿಕ ವರ್ಷ 2021-22 ನೇ ಸಾಲಿನಲ್ಲಿ ಮಾದರಿ ಆದರ್ಶ ಶಾಲೆ ಪ್ರಶಸ್ತಿಗೆ ಸ.ಮಾ.ಪ್ರಾ.ಶಾಲೆ ಉಡಚಾಣ ಭಾಜನವಾಗಿದೆ. ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಿರುವ ಶಾಲೆ ನಮ್ಮದು. ಹಾಗಾಗಿ ಉಡಚಾಣ&ಅಕ್ಕಪಕ್ಕದ ಗ್ರಾಮಗಳ ಊರಿನ ಎಲ್ಲಾ ಪ್ರಜ್ಞಾವಂತ ಪಾಲಕರ/ಪೋಷಕರ ಗ್ರೂಪ್ ಗಳಿಗೆ ಇದನ್ನು ಶೇರ್ ಮಾಡಿ. ಸರಕಾರಿ ಶಾಲೆಗಳನ್ನು ನೈಜ  ಕಲಿಕೆಯ ಕೇಂದ್ರಗಳನ್ನಾಗಿ ಮಾಡಲು ಪುಟ್ಟ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ. ನಮ್ಮ ಈ ಸರ್ಕಾರಿ ಶಾಲೆಗೆ ಸೇರುವ ಮಗು ಉತ್ತಮ ಗುಣಮಟ್ಟದ& ಸ್ಪರ್ಧಾತ್ಮಕ ಶಿಕ್ಷಣ ಪಡೆಯಲಿದೆ ಎನ್ನುವ ಭರವಸೆ ನಮ್ಮದು.

AWARNESS MESSAGE BY:

ದೀಪಕ. ಎಸ್.ಗಣಾಚಾರಿ. ವಿಜ್ಞಾನ ಶಿಕ್ಷಕರು ಮತ್ತು 

ಸ.ಮಾ.ಪ್ರಾ.ಶಾಲೆ ಉಡಚಾಣ ಶಾಲೆಯ ಮು.ಗು& ಸಮಸ್ತ ಶಿಕ್ಷಕ ಸಿಬ್ಬಂದಿ ವರ್ಗ.

Tuesday, 10 May 2022

LOAN CALC

1,00,000+15,000+6,000
=1,21,000
 Total tagondu hana (loan+personal).

Loan hakisida date: 01/10/2021.

Yella hanakku baddi haki eeg lekka helutiddene.

Adaralli 1,21,000*2%=2,420 Rs per month simple Interest.

Nov1, 2021 kke 1st Month interest:2,420 Rs.aytu. (Idannu kooda 25 day late aagi kattidare interest. So interest count aagide).

Omme maatra 25,000 pay madiddare. Haagagi,
1,21,0000-25,000=96,000 Rs remaining amount.

96,000*2%=1,920 per month Simple interest.
Dec 1, 2021 rinda May 1, 2022 ravarege 6 months ge Simple interest.

1920*6months=11,520 Rs.
Simple Interest.

Haagagi 96,000 asalu+ 2,420 modal tingala Interest +11,520 (illiyavaregina nanatarada tingulugala Interest)=1,09,940 Rs.

*Round up maadi helodaadre neevu May 1 2022kke pay madisabekada vattu hana=1,10,000/-Rs.*

Eeg 8,000Rs matte kai saalavaagi tegedukondiddiri.

Total eeg pay madabekada hana=1,18,000/-Rs.

(May 1, 2022 kke Loan renewal madisidare kodabekada hana= 1,18,000+10,000=1,28,000Rs).

**Ivattu May 1,2022 ra varegina interest hana 10,000 Rs&loan renewal advance interest hana 10,000 Rs&monne tagonda 8,000 Rs yella seri vattu 28,000 Rs amount Jewargiyalli illave nanage direct aagi ivatte 11am olage phone pay maadisi.

Ondu vele Nlnimma loan ivatte close madstini annodadare vattu 1,10,000+8,000+2,000(15 dinagala interest)=1,20,000 Rs pay madisi.

Ivattu July 1 kke lekka helodadare,
1,2000*2/100=2400Rs per month interest for June-2022.
Like that gor July-2022,interest is 2400Rs.
So July 1, 2022 kke pay madabekada vattu hana= 1,20,000+2400+2400= 1,24,800 Rs.