Thursday, 17 October 2019

Chandira Tanda Hunnime Ratri-Lyrics

ಹೆಣ್ಣು: ಚಂದಿರ ತಂದ.. ಹುಣ್ಣಿಮೆ ರಾತ್ರಿ..
ಗಾಳಿಯು ತಂದ.. ತಣ್ಣನೆ ರಾತ್ರಿ..
ಹಾಯಾಗಿ ನಾ ಮಲಗಿರಲು...
ಆ ದಿಂಬು ಹಾಸಿಗೆ..ನನ ನೂಕಿತು..
ಈ ನನ್ನ ನಲ್ಲನ..ಕೂಗೆಂದಿತು..
ಆ ದಿಂಬು ಹಾಸಿಗೆ.. ನನ ನೂಕಿತು..
ಈ ನನ್ನ ನಲ್ಲನ..ಕೂಗೆಂದಿತು..

ಗಂಡು: ಚಂದಿರ ತಂದ.. ಹುಣ್ಣಿಮೆ ರಾತ್ರಿ..
ಗಾಳಿಯು ತಂದ.. ತಣ್ಣನೆ ರಾತ್ರಿ..
ಹಾಯಾಗಿ ನಾ ಮಲಗಿರಲು..
ಈ ನನ್ನ ಮಂಚವು ಮಾತಾಡಿತು..
ನಿನ್ನನ್ನು ಆಚೆಗೆ ನೂಕೆಂದಿತು...
ಈ ನನ್ನ ಮಂಚವು..ಮಾತಾಡಿತು...
ನಿನ್ನನ್ನು ಆಚೆಗೆ ನೂಕೆಂದಿತು...

ಹೆಣ್ಣು: ಏನು ತೊಂದರೆ..ಅಲ್ಲಿ ಬಂದರೆ..ಸೇವೆ ಮಾಡುವೆನು..
ಹೂವನು ಹಾಸಿ.. ನಿನ್ನ ಮಲಗಿಸಿ.. ಲಾಲಿ ಹಾಡುವೆನು..
ಗಂಡು: ಮೈಯ ಮುಟ್ಟದೆ..ಕೈಯ ಎಳೆಯದೇ..
ದೂರ ನಿಲ್ಲುವೆಯಾ.. 
ನನ್ನ ನೆಮ್ಮದಿ..ಹಾಳು ಮಾಡದೆ
ಹೊರಗೆ.. ಹೋಗುವೆಯಾ..
ಹೆಣ್ಣು: ಭಾರಿ ಬ್ರಹ್ಮಚಾರಿ ನೀನು..ಬಲ್ಲೆಯೆಲ್ಲಾ..
ಗಂಡು:  ಹೆಣ್ಣೇ ನಿನ್ನ ಆರೋಗ್ಯ.. ಸರಿಯಾಗಿಲ್ಲ..
ಹೆಣ್ಣು: ಪ್ರೀತಿ ಎಂದರೆ ಗೊತ್ತೇ ಇಲ್ಲ.
ಗಂಡು: ನನಗೆ ಪ್ರೀತಿಯೇ ಬೇಕಾಗಿಲ್ಲ
ಹೆಣ್ಣು: ಬೇಡವೆಂದರೂ.. ನಾ.. ಬಿಡುವುದೇ ಇಲ್ಲಾ ..
ಗಂಡು: ಅಯ್ಯೋ. .ಚಂದಿರ ತಂದ.. ಹುಣ್ಣಿಮೆ ರಾತ್ರಿ..
ಗಾಳಿಯು ತಂದ.. ತಣ್ಣನೆ ರಾತ್ರಿ..
ಹಾಯಾಗಿ ನಾ ಮಲಗಿರಲು...
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನೂಕೆಂದಿತು.
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನೂಕೆಂದಿತು...
ಹೆಣ್ಣು: ಆ ದಿಂಬು ಹಾಸಿಗೆ ನನ ನೂಕಿತು..
ಈ ನನ್ನ ನಲ್ಲನ ಕೂಗೆಂದಿತು..

ಗಂಡು: ಅತ್ತೆ ಕಂಡರೆ.. ಮಾವ ಬಂದರೆ.. 
ಮಾನ ಹೋಗುವುದು
ಅಪ್ಪನು ರೇಗಿ.. ಗದರಿಸಿದಾಗ.. ಏನು ಹೇಳುವುದು..
ಹೆಣ್ಣು: ಏಕೆ ಹೆದರುವೆ..ಕದವ ಹಾಕುವೆ.. ಏನು ಕೇಳಿಸದು..
ಸದ್ದು ಮಾಡದೆ.. ದೀಪಾ ಆರಿಸು.. ಏನು ಕಾಣಿಸದು..
ಗಂಡು: ಅಯ್ಯೊ ನಿನ್ನಾ...
ನಿನ್ನ ಹೆಣ್ಣು ಅಂದೋರಿಗೆ.. ಬುದ್ದಿ ಇಲ್ಲಾ... 
ಹೆಣ್ಣು: ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಗಂಡು: ಕೋಪ ಬಂದರೆ ಸುಮ್ಮನಿರಲ್ಲಾ..
ಹೆಣ್ಣು: ಆಗಲೇ ನೀನು.. ಚೆನ್ನಾ ನಲ್ಲಾ 
ಗಂಡು: ಅಯ್ಯೋ..ಏನು ಮಾಡಲಿ.. ಆ ದೇವರೇ ಬಲ್ಲ..
ಹೆಣ್ಣು: ಚಂದಿರ ತಂದ..ಹುಣ್ಣಿಮೆ ರಾತ್ರಿ..
ಗಾಳಿಯು ತಂದ.. ತಣ್ಣನೆ ರಾತ್ರಿ..
ಹಾಯಾಗಿ ನಾ ಮಲಗಿರಲು.. 
ಆ ದಿಂಬು ಹಾಸಿಗೆ.. ನನ ನೂಕಿತು..
ಈ ನನ್ನ ನಲ್ಲನ.. ಕೂಗೆಂದಿತು..
ಈ ನನ್ನ ಮಂಚವು ಮಾತಾಡಿತು...
ನಿನ್ನನ್ನು ಆಚೆಗೆ ನೂಕೆಂದಿತು....

Ellelli Nodali - Naa Ninna Mareyalare Lyrics.

Ellelli Nodali - Naa Ninna Mareyalaare Lyrics.



ಗಂಡು:ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..
ಕಣ್ಣಲ್ಲಿ..ತುಂಬಿರುವೆ.. ಮನದಲಿ ಮನೆ ಮಾಡಿ..ಆಡುವೆ..

ಹೆಣ್ಣು :ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..
ಕಣ್ಣಲ್ಲಿ..ತುಂಬಿರುವೆ.. ಮನದಲಿ ಮನೆ ಮಾಡಿ..ಆಡುವೆ..

ಗಂಡು:ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..


ಗಂಡು: ಆ ಕೆಂಪು ತಾವರೆ.. ಆ ನೀರಿಗಾದರೆ..
ಈ ಹೊನ್ನ ತಾವರೆ.. ನನ್ನಾಸೆಯಾಸರೆ...
ಹೆಣ್ಣು :  ಆ....
ಗಂಡು: ಆ.....ಆ ಆ ಆ ..
ಹೆಣ್ಣು: ಆ.....ಆ ಆ ಆ ಆ ಆ ಆ ಆ  ..
ಮಿಂಚೆಂಬ ಬಳ್ಳಿಗೆ.. ಮೇಘದ ಆಸರೆ.. 
ಈ ಹೆಣ್ಣ ಬಾಳಿಗೆ..ನಿನ್ನ ತೋಳಿನಾಸರೆ..
ಗಂಡು: ಯುಗಗಳೇ ಜಾರಿ.. ಉರುಳಿದರೇನು..
ಹೆಣ್ಣು: ನಾನೇ ನೀನು.. ನೀನೆ ನಾನು.. 
ಗಂಡು: ಆದ ಮೇಲೆ..ಬೇರೆ ಏನಿದೆ....

ಹೆಣ್ಣು: ಎಲ್ಲೆಲ್ಲಿ ನೋಡಲಿ..
ಗಂಡು: ನಿನ್ನನ್ನೇ ಕಾಣುವೆ..
ಹೆಣ್ಣು: ಕಣ್ಣಲ್ಲಿ..ತುಂಬಿರುವೆ.. ಮನದಲಿ ಮನೆ ಮಾಡಿ..ಆಡುವೆ.. 
ಗಂಡು: ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..

ಹೆಣ್ಣು: ರವಿಯನ್ನು ಕಾಣದೆ.. ಹಗಲೆಂದು ಆಗದು..
ನಿನ್ನನ್ನು ನೋಡದೆ.. ಈ ಪ್ರಾಣ ನಿಲ್ಲದು..
ಗಂಡು: ಕಡಲನ್ನು ಸೇರದ.. ನದಿಯೆಲ್ಲಿ ಕಾಣುವೆ..
ನಿನ್ನನ್ನು ಸೇರದೆ.. ನಾ ಹೇಗೆ ಬಾಳುವೆ..
ಹೆಣ್ಣು: ವಿರಹದ ನೋವ ಮರೆಯಲಿ ಜೀವ
ಗಂಡು: ಹೂವು ಗಂಧ ಸೇರಿದಂತೆ 
ಹೆಣ್ಣು: ಪ್ರೇಮದಿಂದ ನಿನ್ನ ಸೇರುವೆ...

ಗಂಡು: ಎಲ್ಲೆಲ್ಲಿ ನೋಡಲಿ..
ಹೆಣ್ಣು: ನಿನ್ನನ್ನೇ ಕಾಣುವೆ..
ಗಂಡು&ಹೆಣ್ಣು: ಕಣ್ಣಲ್ಲಿ: ..ತುಂಬಿರುವೆ..
 ಮನದಲಿ ಮನೆ ಮಾಡಿ..ಆಡುವೆ.. 
ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..
ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..
ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..
ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೆ..

Wednesday, 16 October 2019

Kabhi Bhula Kabhi Yaad Kiya-Sapne Sajan ke Lyrics

Kabhi Bhoola Kabhi Yaad Kiya:Sapne Sajan Ke.

F: Mere...pyar mein...
Mere...intezar mein..
Sach sach kaho tum ne kya kiya..

M: Kabhi bhoola kabhi yaad kiya..
Kabhi bhoola.. kabhi yaad kiya..
Kabhi bhoola kabhi yaad kiya...
Kabhi bhoola kabhi yaad kiya..

Mere.. pyar mein..
Mere.. intezar mein..
Sach sach kaho dil ne kya kiya..

F: Kabhi bhoola kabhi yaad kiya..
Kabhi bhoola kabhi yaad kiya..
Kabhi bhoola kabhi yaad kiya...
Kabhi bhoola kabhi yaad kiya. 

F: Ni Sa..Ni Sa Pa./ Ni Sa..Ni Sa Pa..

Pa Pa Pa/ Re Ma Pa Ma/ 
Re Ni/ Sa Re/ Sa Re Ma ..

Pa Pa Pa/ Re Ma Pa Ma/ 
Re Ni/ Sa Re/ Sa Re Sa. 

M: Sar pe mere haath rakha tu..
Mujhako bata ek baar..
Kaise kate tere din..
Kaise kati teri raat..
F: Kuch mai jali..Kuch dil jalaa..
Khud pe nahi..Koi bas chala..
Aur bataon kya saajan..
Bechain dil ka mai haal...
Pal pal.. tere liye royi..
Mere...deedar mein..
Sajna mere pyar mein..
Sach sach kaho.. Tum ne kya kiya..
M: Kabhi bhoola kabhi yaad kiya..
Kabhi bhoola kabhi yaad kiya..
Kabhi bhoola kabhi yaad kiya..
Kabhi bhoola kabhi yaad kiya..

F: Jeena nahi hai mujhe to..
Nazron se ab door ho ke..
Sab kuch bhoolana hai mujhko..
Teri mohabbat mein kho ke..
M: Meri zindagi..meri jaan tu..
Meri bekhudi..armaan tu..
Sunn le meri jaan-e-janaa..
Inn dhadakano ki sadaa..
Ab naa judaa kabhi hona...
Mere.. iqrar mein..
Sajni mere pyar mein..
Sach sach kaho dil ne kya kiya..
M&F: Kabhi bhoola kabhi yaad kiya..
Kabhi bhoola kabhi yaad kiya..
Kabhi bhoola kabhi yaad kiya..
Kabhi bhoola kabhi yaad kiya..

Noorondu Nenapu Edeyaladinda:Bandhan Lyrics

ನೂರೊಂದು ನೆನಪು: ಬಂಧನ.
ನೂರೊಂದು ನೆನಪು..ಎದೆಯಾಳದಿಂದ..
ಹಾಡಾಗಿ ಬಂತು.. ಆನಂದದಿಂದ..
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು.. ಆನಂದದಿಂದ..
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು.. ಆನಂದದಿಂದ..
ಸಿಂಧೂರ ಬಿಂದು.. ನಗಲಮ್ಮ ಎಂದು..
ಎಂದೆಂದೂ.. ಇರಲಮ್ಮ.. ಈ ದಿವ್ಯ ಬಂಧ..
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು..ಆನಂದದಿಂದ.. ॥
 
ಒಲವೆಂಬ ಲತೆಯು.. ತಂದಂತ ಹೂವು..
ಮುಡಿಯೇರೆ ನಲಿವು..ಮುಡಿಜಾರೆ ನೋವು..
ಕೈಗೂಡಿದಾಗ, ಕಂಡಂಥ ಕನಸು..
ಅದೃಷ್ಟದಾಟಾ..ತಂದಂಥ ಸೊಗಸು.. 
ಪ್ರೀತಿ ನಗುತಿರಲಿ..ಬಾಳು ಬೆಳಗಿರಲಿ.. 
ಪ್ರೀತಿ ನಗುತಿರಲಿ.. ಬಾಳು ಬೆಳಗಿರಲಿ..
ನೀವೆಂದು ಇರಬೇಕು ಸಂತೋಷದಿಂದಾ.. ॥೧॥
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು.. ಆನಂದದಿಂದ..
 
ತುಟಿ ಮೇಲೆ ಬಂದಂತ..ಮಾತೊಂದೆ ಒಂದು..
ಎದೆಯಲ್ಲಿ ಉಳಿದಿದ್ದು..ಮುನ್ನೂರ ಒಂದು..
ಮೂರು ಗಂಟಲ್ಲಿ..ಈ ಬಾಳ ನಂಟು..
ಕೇಳಿ ಪಡೆದಾಗ.. ಸಂತೋಷವುಂಟು..
ನಿನ್ನ ಹರುಷದಲಿ..ನನ್ನಾ ಉಸಿರಿರಲಿ..
ನಿನ್ನ ಹರುಷದಲಿ.. ನನ್ನಾ ಉಸಿರಿರಲಿ..
ನನ್ನೆಲ್ಲ ಹಾರೈಕೆ.. ಈ ಹಾಡಿನಿಂದಾ.. ॥೨॥
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು.. ಆನಂದದಿಂದ..
ಸಿಂಧೂರ ಬಿಂದು.. ನಗಲಮ್ಮ ಎಂದು..
ಎಂದೆಂದು ಇರಲಮ್ಮ.. ಈ ದಿವ್ಯ ಬಂಧ..
ನೂರೊಂದು ನೆನಪು.. ಎದೆಯಾಳದಿಂದ..
ಹಾಡಾಗಿ ಬಂತು ಆನಂದದಿಂದ..ಆನಂದದಿಂದ..ಆನಂದದಿಂದ..

Akashadinda Dharegilida Rambhe-Bayaludari Lyrics

ಆಕಾಶದಿಂದ ಧರೆಗಿಳಿದ ರಂಭೆ.

ಚಿತ್ರ: ಚಂದನದ ಗೊಂಬೆ 

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ..ಇವಳೇ..ಚಂದನದ ಗೊಂಬೆ.,
ಇವಳೇ..ಇವಳೇ..ಚಂದನದ ಗೊಂಬೆ,
ಚೆಲುವಾದ ಗೊಂಬೆ..ಚಂದನದ  ಗೊಂಬೆ..

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ
ಆ ದೇವರೇ..ಕಾಣಿಕೆ.. ನೀಡಿದಾ..,
ನನ್ನಾ ಜೊತೆ ಮಾಡಿದ...ಹಾ.. ಆಹಾ.......  

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೊಂಬೆ..
ಇವಳೇ ಇವಳೇ ಚಂದನದ ಗೊಂಬೆ..
ಚೆಲುವಾದ ,ಚಂದನದ ಗೊಂಬೆ ...

ನಡೆವಾಗ ನಿನ್ನಾ,ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ.. ಕಂಡೆನು..ಸೋತೆನು..
ನಿನ್ನಾ ಸೆರೆಯಾದೆನು...ಹಾ.. ಆಹಾ.......

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ..ಇವಳೇ.. ಚಂದನದ ಗೊಂಬೆ..
ಇವಳೇ..ಇವಳೇ.. ಚಂದನದ ಗೊಂಬೆ..
ಚೆಲುವಾದ ಗೊಂಬೆ ...ಚಂದನದ ಗೊಂಬೆ...
ಚಂದನದ ಗೊಂಬೆ...ಚಂದನದ ಗೊಂಬೆ....
ಚಂದನದ ಗೊಂಬೆ ....