Sunday, 10 May 2015

ಭಾರತದ ಪ್ರ ಮುಖ ಘಟನಾವಳಿಗಳು.

*ಕ್ರಿ. ಪೂ.ಮುಖ್ಯಾಂಶಗಳು: 3000-1500 ಸಿಂಧು ಕಣಿವೆ ನಾಗರೀಕತೆ. 576 ಗೌತಮ ಬುದ್ಧನ ಜನನ 527 ಮಹಾವೀರನ ಜನನ 327-326 ಭಾರತದ ಮೇಲೆ ಅಲೆಕ್ಜಾಂಡರನ ದಾಳಿ. ಭಾರತ ಮತ್ತು ಯುರೋಪಿನ ನಡುವೆ ಭೂಮಾರ್ಗದ ಪ್ರಾರಂಭ 313 ಜೈನ ಸಂಪ್ರದಾಯದಂತೆ ಚಂದ್ರಗುಪ್ತ ಮೌರ್ಯನ ಸಿಂಹಾಸನ ಆರೋಹಣ 305 ಚಂದ್ರಗುಪ್ತ ಮೌರ್ಯನ ಎದುರು ಸೆಲ್ಯುಕಸನ ಸೋಲು. 273-232 ಅಶೋಕನ ಆಳ್ವಿಕೆ. 261 ಕಳಿಂಗ ವಿಜಯ. 145-101 ಶ್ರೀಲಂಕಾದ ಚೋಳ ರಾಜ ಎಲರನ ಆಳ್ವಿಕೆ. 58 ವಿಕ್ರ ಮ ಶಕೆಯ ಪ್ರಾರಂಭ. ** ಕ್ರಿ. ಶಕ. ಮುಖ್ಯಾಂಶಗಳು: 78 ಶಕ ಯುಗದ ಪ್ರಾರಂಭ. 120 ಕನಿಷ್ಕನ ಸಿಂಹಾಸನಾರೋಹಣ. 320 ಗುಪ್ತ ಯುಗ ಪ್ರಾರಂಭ. ಹಿಂದೂ ಭಾರತದ ಸುವರ್ಣಯುಗ. 380 ವಿಕ್ರಮಾದಿತ್ಯನ ಸಿಂಹಾಸನ ಆರೋಹಣ. 405-411 ಚೀನೀ ಯಾತ್ರಿಕ ಫಾಹಿಯಾನನ ಭೇಟಿ. 415 ಕುಮಾರ ಗುಪ್ತ- I ನ ಸಿಂಹಾಸನ ಆರೋಹಣ. 455 ಸ್ಕಂದ ಗುಪ್ತನ ಸಿಂಹಾಸನ ಆರೋಹಣ. 606-647 ಹರ್ಷವರ್ಧನನ ಆಳ್ವಿಕೆ . 712 ಅರಬರಿಂದ ಸಿಂಧ ಮೇಲೆ ಮೊದಲ ದಾಳಿ. 836 ಕನೋಜಿನ ರಾಜಾ ಭೋಜನ ಸಿಂಹಾಸನ ಆರೋಹಣ. 985 ರಾಜರಾಜ ಚೋಳ ನಸಿಂಹಾಸನ ಆರೋಹಣ. 998 ಸುಲ್ತಾನ ಮೊಹಮ್ಮದನ ಸಿಂಹಾಸನ ಆರೋಹಣ. ***ಕ್ರಿ. ..ಶ. 1000 – 1499: 1001 ಮಹಮ್ಮದ್ ಘಜನಿ ಯ ಭಾರತದ ಮೇಲಿನ ಮೊದಲ ದಾಳಿ. ಅವನಿಂದ ಪಂಜಾಬಿನ ರಾಜ ಜಯಪಾಲನ ಸೋಲು. 1025 ಘಜನಿ ಮಹಮ್ಮದನಿಂದ ಸೋಮನಾಥ ದೇವಾಲಯ ನಾಶ. 1191 ತರೈನನ ಮೊದಲ ಕದನ. 1192 ತರೈನನ ಎರಡನೆ ಕದನ. 1206 ಕುತುಬುದ್ದಿನ ಐಬಕ್ ನಿಂದ ದೆಹಲಿ ಸಿಂಹಾಸನ ಆರೋಹಣ. 1221 ಚಂಗೇಸ್ ಖಾನನಿಂದ ಭಾರತದ ಮೇಲೆ ದಾಳಿ(ಮಂಗೋಲರ ದಾಳಿ). 1236 ರಜಿಯಾ ಸುಲ್ತಾನಳಿಂದ ದೆಹಲಿಯಸಿಂಹಾಸನ ಆರೋಹಣ. 1240 ರಜಿಯಾ ಸುಲ್ತಾನಳ ಸಾವು. 1296 ಅಲ್ಲಾ ಉದ್ದೀನ್ ಖಿಲ್ಜಿಯ ಸಿಂಹಾಸನ ಆರೋಹಣ. 1316 ಅಲ್ಲಾ ಉದ್ದೀನ್ ಖಿಲ್ಜಿಯ ಸಾವು. 1325 ಮಹಮ್ಮದ ಬಿನ್ ತೊಘಲಕನ ಸಿಂಹಾಸನ ಆರೋಹಣ. 1327 ತುಘಲಕ್ರಿ ಂದ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ, ಅಲ್ಲಿಂದ ಡೆಕ್ಕೆನ್ ಗೆ ಬದಲಾವಣೆ. 1336 ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ. 1351 ಫಿರೋಜ್ ಷಾನ ಸಿಂಹಾಸನ ಆರೋಹಣ. 1398 ತೈಮೂರ್ ಲಂಗನಿಂದ ಭಾರತದ ಮೇಲೆ ದಾಳಿ. 1469 ಗುರುನಾನಕರ ಜನನ. 1494 ಬಾಬರ್ ಫರ್ಘಾನನ ಸಿಂಹಾಸನ ಆರೋಹಣ. 1497-98 ವಾಸ್ಕೊಡಗಾಮಾನ ಭಾರತದ ಮೊದಲ ಪ್ರ ವಾಸ( ಕೇಪ್ ಅಫ್ ಗುಡ್ ಹೋಪ್ ಮೂಲಕ ಭಾರತಕ್ಕೆ ಜಲಮಾರ್ಗದ ಅನ್ವೇಷಣೆ). ****ಕ್ರಿ .ಶ. 1500 – 1799: 1526 ಮೊದಲ ಪಾಣಿಪತ್ ಯುದ್ಧ. (ಬಾಬರ್ ಇಬ್ರಾಹಿಂ ಲೋಧಿಯನ್ನು ಸೋಲಿಸಿದ& ಮೊಘಲ ಸಾಮ್ರಾಜ್ಯಕ್ಕೆ ಅಡಿಪಾಯ). 1527 ಖಾನ್ಯಾ ಕದನ. (ಬಾಬರ್ ರಾಣಾ ಸಂಗನನ್ನು ಸೋಲಿಸಿದ). 1530ಬಾಬರನ ನಿಧನ ಮತ್ತು ಹುಮಾಯುನನಸಿಂಹಾಸನ ಆರೋಹಣ. 1539 ಷೇರ್ ಷಹ ಸೂರಿ ಹುಮಾಯುನನ್ನು ಸೋಲಿಸಿದ. ಮತ್ತು ಭಾರತದ ಸಾಮ್ರಾಟನಾದ. 1540 ಕನೋಜ್ ಕದನ. 1555ಹುಮಾಯೂನ್ ದೆಹಲಿಸಿಂಹಾಸನವನ್ನು ತಿರುಗಿ ವಶಪಡಿಸಿಕೊಂಡ. 1556ಎರಡನೆ ಪಾಣಿಪತ್ ಯುದ್ಧ . 1565 ತಾಳಿ ಕೋಟೆ ಕದನ. 1576 ಹಳದಿ ಘಾಟ್ ಯುದ್ಧ, ರಾಣ ಪ್ರ ತಾಪನನ್ನು ಅಕ್ಬರ ಸೋಲಿಸಿದ. 1582ಅಕ್ಬರನಿಂದ ದೀನ್-ಇ-ಲಾಹಿ ಸ್ಥಾಪನೆ. 1597 ರಾಣಪ್ರ ತಾಪ ನಿಧನ. 1600 ಈಸ್ಟ ಇಂಡಿಯಾ ಕಂಪನಿ ಸ್ಥಾಪನೆ. 1605 ಅಕ್ಬರನ ನಿಧನ ಮತ್ತು ಜಹಾಂಗೀಿರನ ಸಿಂಹಾಸನ ಆರೋಹಣ . 1606 ಗುರುನಾನಕ್ ದೇವನಿಗೆ ಮರಣ ದಂಡನೆ. 1611ನೂರ್ ಜಹಾ ಜೊತೆ ಜಹಾಂಗೀರ್ ಮದುವೆ. 1616ಜಹಾಂಗಿರ ಆಸ್ಥಾನಕ್ಕೆ ಸರ್ ಥಾಮಸ್ ರೋ ಭೇಟಿ. 1627 ಶಿವಾಜಿ ಜನನ ಮತ್ತು ಜಹಾಂಗಿರನ ನಿಧನ. 1628ಷಾಹಜಹಾನ್ ಭಾರತದ ಚಕ್ರ ವರ್ತಿಯಾದ. 1631 ಮಮ್ತಾಜ್ ಮಹಲಳ ನಿಧನ. 1634ಬ್ರಿಟಿಷರಿಗೆ ಭಾರತದಲ್ಲಿ ಬಂಗಾಳದಲ್ಲಿ ವ್ಯಾಪಾರಮಾಡಲು ಅನುಮತಿ. 1659ಔರಂಗಜೇಬನ ಸಿಂಹಾಸನ ಆರೋಹಣ. ಷಾಹಜಹಾನ್ ನ ಸೆರೆವಾಸ 1665ಔರಂಗಜೇಬನು ಶಿವಾಜಿಯನ್ನು ಸೆರೆಮನೆಗೆ ಹಾಕಿದ. 1666 ಷಾಹಜಹಾನ್ ನ ನಿಧನ. 1675ಸಿಕ್ಕರ ಒಂತ್ತನೆ ಗುರು ತೇಜಬಹದ್ದೂರನಿಗೆ ಮರಣ ದಂಡನೆ. 1680 ಶಿವಾಜಿಯ ನಿಧನ. 1707ಔರಂಗಜೇಬನ ನಿಧನ. 1708ಗುರು ಗೋಬಿಂದ ಸಿಂಗ್ ನಿಧನ. 1739 ನಾದಿರ್ ಷಾ ನ ಭಾರತದ ಮೇಲಿನ ದಾಳಿ. 1757 ಪ್ಲಾಸಿ ಕದನ. (ರಾಬರ್ಟ ಕ್ಲೈವ್ ನಿಂದ ಬ್ರಿಟಿಷರ ರಾಜ್ಯಾಡಳಿತದ ಸ್ಥಾಪನೆ). 1761 ಮೂರನೆ ಪಾಣಿಪತ್ ಯುದ್ದ &ಷಾ ಆಲಂ II ಭಾರತದ ಚಕ್ರವತಿಯಾಗುವನು. 1764 ಬಕ್ಸಾರ್ ಕದನ. 1765 ಭಾರತದ ಗವರ್ನರ್ ಆಗಿ ರಾರ್ಬಟ್ ಕ್ಲೈವ್ ನೇಮಕ. 1767-69 ಮೊದಲ ಮೈಸೂರು ಯುದ್ಧ . 1770 ಬಂಗಾಲದ ಮಹಾ ಕ್ಷಾಮ. 1780 ರಜ ರಣಜಿತ್ ಸಿಂಗ್ ಜನನ. 1780-84 ಎರಡನೆ ಮೈಸೂರು ಯುದ್.ಧ 1784 ಪಿಟ್ಸ್ ಇಂಡಿಯ ಕಾನೂನು. 1790-92 ಮೂರನೆ ಮೈಸೂರು ಯುದ್ಧ. 1793 ಬಂಗಾಲದ ಶಾಶ್ವತ ಒಪ್ಪಂದ / ಕರಾರು (ಸೆಟ್ಲಮೆಂಟ್). 1799 ನಾಲ್ಕನೇಯ ಮೈಸೂರು ಯುದ್ಧ. (ಟಿಪ್ಪು ಸುಲ್ತಾನನ ನಿಧನ). *****ಕ್ರಿ .ಶ.1800 – 1900 1802 ಬೆಸಿನ್ ಒಪ್ಪಂದ 1809 ಅಮೃತಸರ ಒಪ್ಪಂದ 1829 ಸತಿ ಸಹಗಮನದ ನಿಷೇಧ 1830 ಬ್ರಹ್ಮ ಸಮಾಜದ ಸ್ಥಾಪಕ ರಾಜ ರಾಮ ಮೋಹನ ರಾಯ್ ಇಂಗ್ಲೇಂಡಿಗೆ ಭೇಟಿ. 1833.ರಾಜರಾಮ ಮೋಹನ ರಾಯ್ ನಿಧನ. 1839 ಮಹರಾಜಾ ರಣಜಿತ ಸಿಂಗ್ ನ ನಿಧನ. 1839-42 ಮೊದಲ ಅಫ್ಘಾನ್ ಯುದ್ಧ. 1845-46 ಮೊದಲ ಆಂಗ್ಲೋ – ಸಿಖ್ ಯುದ್.ಧ 1852 ಎರಡನೆ ಅಂಗ್ಲೊ- ಬರ್ಮ ಯುದ್ಧ . 1853ಮೊದಲ ರೈಲು, ಬಾಂಬೆ ಮತ್ತು ಠಾಣೆ ನಡುವೆ ಮತ್ತು ಕಲ್ಕತ್ತಾದಲ್ಲಿ ಮೊದಲ ಟೆಲಿಗ್ರಾಫಿಕ್ ಲೈನು 1857 ಸಿಪಾಯಿದಂಗೆ ಅಥವ ಪ್ರ ಥಮ ಸ್ವಾತಂತ್ರ್ಯ ಸಂಗ್ರಾಮ. 1861ರವೀಂದ್ರನಾಥ ಟಾಗೋರ್ ಜನನ. 1869ಮಹಾತ್ಮ ಗಾಂಧಿ ಜನನ. 1885 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಸ್ಥಾಪನೆ. 1889ಜವಾಹರ್ ಲಾಲ್ ನೆಹರು ಜನನ. 1897ಸುಭಾಷ್ ಚಂದ್ರಬೋಸ್ ಜನನ. ******ಕ್ರಿ. .ಶ. 1900 - 1970 1904. ಟಿಬೆಟ್ ಯಾನ. 1905ಲಾರ್ಡ ಕರ್ಜನ್ ನಿಂದ ಬಂಗಾಳದ ಮೊದಲ ವಿಭಜನೆ. 1906 ಮುಸ್ಲಿಮ್ ಲೀಗ್ ಸ್ಥಾಪನೆ. 1911 . ದಿಲ್ಲಿ ದರ್ಬಾರು. ರಾಜ ಮತ್ತು ರಾಣಿಯರ ಭಾರತದ ಭೇಟಿ; ದಿಲ್ಲಿ ಭಾರತದ ರಾಜಧಾನಿ ಯಾಯಿತು. 1916. ಪ್ರ ಪಂಚದ ಮೊದಲ ಮಹಾಯುದ್ಧ ಪ್ರಾರಂಭ. 1916. ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಗಳಿಂದ ಲಖನೌ ಒಪ್ಪಂದಕ್ಕೆ ಸಹಿ. 1918. ಪ್ರ ಪಂಚದ ಮೊದಲ ಮಹಾಯುದ್ಧದ ಅಂತ್ಯ. 1919 ಮಂಟೆಗ್ಯೂ-ಚೆಲ್ಮ್ಸ ಸುಧಾರಣೆಯ ಜಾರಿ. ಅಮೃತಸರದಲ್ಲಿ ಜಲಿಯನ್ ವಾಲ ಬಾಗ್ ಹತ್ಯಾಕಾಂಡ. 1920 ಖಿಲಾಫತ್ ಚಳುವಳಿ ಪ್ರಾರಂಭ 1927ಸೈಮನ್ ಆಯೋಗದ ಬಹಿಷ್ಕಾರ. ರೇಡಿಯೋ ಪ್ರ ಸಾರ ಭಾರತದಲ್ಲಿ ಪ್ರಾರಂಭ. 1928 ಲಾಲಾ ಲಜಪತ ರಾಯ್ (ಪಂಜಾಬಿನ ಹುಲಿ) ನಿಧನ. 1929 ಲಾರ್ಡ ಓರ್ವಮ್ ನ ಒಪ್ಪಂದ, ಲಾಹೋರು ಕಾಂಗ್ರೆಸ್ಸಿನಲ್ಲಿ ಪೂರ್ಣ ಸ್ವಾತಂತ್ರ್ಯಕ್ಕೆ ತೀರ್ಮಾನ. 1930 ಸಾರ್ವಜನಿಕ ಅಸಹಕಾರ ಚಳುವಳಿ ಪ್ರಾರಂಭ; ಗಾಂಧೀಜಿಯವರಿಂದ ದಂಡಿ ಯಾ ತ್ರೆ ಪ್ರಾರಂಭ (ಏಪ್ರಿಲ್6, 1970 ). 1931 ಗಾಂಧಿ –ಇರ್ವಿನ್ ಒಪ್ಪಂದ 1935 ಭಾರತ ಸರ್ಕಾರದ ಕಾಯಿದೆಯ ರಚನ.ೆ 1937. ಪ್ರಾಂತೀಯ ಸ್ವಾಯತ್ತತೆ. ಕಾಂಗ್ರೆಸ್ ನಿಂದ ಮಂತ್ರಿಮಂಡಲ ರಚನೆ. 1939 ಎರಡನೆ ವಿಶ್ವ ಮಹಾ ಯುದ್ಧ ಪ್ರಾರಂಭ (ಸೆಪ್ಟಂಬರ್ I ). 1941 ರವೀಂದ್ರ ನಾಥ ಟ್ಯಾಗೋರ್ ನಿಧನ, ಭಾರತದಿಂದ ಸುಭಾಷ್ ಚಂದ್ರ ಬೋಸ್ ಪಲಾಯನ. 1942 ಭಾರತಕ್ಕೆ ಕ್ರಿ ಪ್ಸ್ ಆಯೋಗದ ಭೇಟಿ, ‘ಭಾರತ ಬಿಟ್ಟು ತೊಲಗಿ’ ಚಳುವಳಿ ಪ್ರಾರಂಭ (ಆಗಷ್ಟ್.8). 1943-44 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಪ್ರಾಂತೀಯ ಅಜಾದ್ ಹಿಂದ್ ಹುಕುಮತ್ ಮತ್ತು ಭಾರತೀಯ ರಾಷ್ಟ್ರೀಯ ಪಡೆ (INA/ಇಂಡಿಯನ್ ನ್ಯಾಷನಲ್ ಆರ್ಮಿ) ಯ ರಚನೆ. 1945 ಕೆಂಪು ಕೋಟೆಯಲ್ಲಿ ಇಂಡಿಯನ್ ನ್ಯಾಷನಲ್ ಅರ್ಮಿಯ ವಿಚಾರಣೆ, ಸಿಮ್ಲಾ ಒಪ್ಪಂದ, ಎರಡನೆ ವಿಶ್ವ ಮಹಾಯುದ್ಧ ಅಂತ್ಯ 1946 ಬ್ರಿಟಿಷ್ ಸಂಪುಟ ಸಮಿತಿಯ ಭಾರತದ ಭೇಟಿ; ಕೇಂದ್ರ ದಲ್ಲಿ ತಾತ್ಕಾಲಿಕ ಸರರ್ಕಾರದ ರಚನೆ . 1947ಭಾರತದ ವಿಭಜನೆ; ಭಾರತ ಪಾಕಿಸ್ತಾನ ಎಂಬ ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳ ನಿರ್ಮಾಣ. 1948 ಮಹಾತ್ಮ ಗಾಂಧಿಯವರ ಹತ್ಯೆ (ಜನವರಿ.30); ರಾಜರ ಆಧಿಪತ್ಯ ಅಂತ್ಯ.. 1949 ಕಾಶ್ಮೀರದಲ್ಲಿ ಕದನ ವಿರಾಮ.ಭಾರತ ಸಂವಿಧಾನಕ್ಕೆ ಸಹಿ ಮತ್ತು ಅಳವಡಿಕೆ (ನವಂಬರ್.26). 1950 ಭಾರತವು ಸಾರ್ವಭೌಮ ಸ್ವಾತಂತ್ರ ಗಣರಾಜ್ಯ (ಜನವರಿ.26) ಮತ್ತು ಭಾರತದ ಸಂವಿಧಾನವು ಜಾರಿಗೆ ಬಂದಿತು. 1951 ಮೊದಲ ಪಂಚ ವಾರ್ಷಿಕ ಯೋಜನೆ. ದೆಹಲಿಯಲ್ಲಿ ಮೊದಲ ಏಷಿಯನ್ ಕ್ರೀಡಾಕೂಟ. 1952 ಲೋಕಸಭೆಗೆ ಮೊದಲ ಸಾರ್ವಜನಿಕ (ಸಾಮಾನ್ಯ) ಚುನಾವಣೆ. 1953ತೇನ್ ಸಿಂಗ್ ನೋರ್ಕೆ ಮತ್ತು ಎಡಮಂಡ್ ಹಿಲೆರಿಯವರಿಂದ ಮೌಂಟ್ ಎವರೆಷ್ಟ ವಿಜಯ. 1956 ಎರಡನೆ ಪಂಚವಾರ್ಷಿಕ ಯೋಜನೆ ಪ್ರಾರಂಭ. 1957 ಎರಡನೆ ಸಾಮಾನ್ಯ ಚುನಾವಣೆ ಪ್ರಾರಂಭ, ದಶಮಾಂಶ ಪದ್ಧತಿಯ ನಾಣ್ಯಗಳ ಚಲಾವಣೆ ಪ್ರಾರಂಭ 1962 ಭಾರತಲ್ಲಿ ಮೂರನೆ ಸಾಮಾನ್ಯ ಚುನಾವಣೆ; ಭಾರತದ ಮೇಲೆ ಚೀನಾದ ದಾಳಿ (ಡಿಸೆಂಬರ್ 20 ). 1963 ನಾಗಾಲ್ಯಾಂಡ್ ಭಾರತದ 16ನೆ ರಾಜ್ಯವಾಯಿತು. 1964 ಜವಾಹರ ಲಾಲ್ ನೆಹರು ನಿಧನ. 1965ಭಾರತದ ಮೇಲೆ ಪಾಕಿಸ್ತಾನದ ದಾಳಿ. 1966 ತಾಷ್ಕೆಂಟ್ ಒಪ್ಪಂದ ; ಲಾಲ್ ಬಹದ್ದೂರ್ ಶಾಸ್ತ್ರಿ ನಿಧನ; ಭಾರತದ ಪ್ರಧಾನ ಮಂತ್ರಿಯಾಗಿ ಶ್ರೀಮತಿ. ಇಂದಿರಾಗಾಂಧಿ ಆಯ್ಕೆ. 1967. ನಾಲ್ಕನೆ ಸಾಮಾನ್ಯ ಚುನಾವಣೆ; ಭಾರತದ ಮೂರನೆ ರಾಷ್ಟ್ರಪತಿಯಾಗಿ ಡಾ. ಜಾಕೀರ್ ಹುಸೇನ್ ಆಯ್ಕೆ. 1969ಭಾರತದ ಉಪರಾಷ್ಟ್ರಪತಿಯಾಗಿ ವಿ.ವಿ. ಗಿರಿ . ಪ್ರ ಮುಖ ಬ್ಯಾಂಕುಗಳನ್ನು ರಾಷ್ಟ್ರಪತಿಗಳ ಸುಗ್ರೀವಾಜ್ಞೆಯ ಮೂಲಕ ರಾಷ್ಟ್ರೀಕರಣ . 1970.ಮೇಘಾಲಯವು ಸ್ವಯತ್ತ ರಾಜ್ಯವಾಯಿತು. ಕ್ರಿ...ಶ.1971 - 2004 1971 ಹಿಮಾಚಲ ಪ್ರದೇಶವು ರಾಜ್ಯವಾಯಿತು; ಭಾರತ-ಪಾಕಿಸ್ತಾನ ಯುದ್ಧ, ಬಾಂಗ್ಲಾ ದೇಶದ ಉದಯ. 1972 ಸಿಮ್ಲಾ ಒಪ್ಪಂದ; ಸಿ. ರಾಜಗೋಪಾಲಾಚಾರಿ ನಿಧನ. 1973 ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ. 1974 ಭಾರತದಿಂದ ಪರಮಾಣು ಸಾಧನದ ಸ್ಪೋಟ ; ಫಕ್ರುದ್ದಿನ ಅಲಿ ಅಹ್ಮದ್ ಐದನೆ ರಾಷ್ಟ್ರಪತಿಯಾಗಿ ಆಯ್ಕೆ. ಸಿಕ್ಕಿಂ ಭಾರತದ ಸಹ ರಾಜ್ಯವಾಯಿತು. 1975 ಭಾರತದಿಂದ ‘ಆರ್ಯಭಟ’ ಉಡಾವಣೆ; ಸಿಕ್ಕಿಂ ಭಾರತದ 22ನೆ ರಾಜ್ಯವಾಯಿತು; ತುರ್ತು ಪರಿಸ್ಥಿತಿ ಘೋಷಣೆ. 1976 ಭಾರತ ಮತ್ತು ಚೀನಾ ರಾಜತಾಂತ್ರಿಕ ಸಂಬಂಧ ಪುನರ್ ಸ್ಥಾಪನೆ. 1977ಆರನೆ ಸಾಮಾನ್ಯ ಚುನಾವಣೆ ;ಲೋಕಸಭೆಯಲ್ಲಿ ಜನತಾ ಪಕ್ಷಕ್ಕೆ ಬಹುಮತ; ನೀಲಂ ಸಂಜೀವ ರೆಡ್ಡಿಯವರು ಭಾರತದ ಆರನೆ ರಾಷ್ಟ್ರಪತಿಯಾಗಿ ಆಯ್ಕೆ. 1979 ಮೊರಾರ್ಜಿ ದೇಸಾಯಿ ಅವರಿಂದ ಪ್ರ ಧಾನಿ ಪದವಿಗೆ ರಾಜೀನಾಮೆ, ಚರಣಸಿಂಗ್ ಪ್ರ ಧಾನಿ, ಚರಣಸಿಂಗ್ ರಾಜೀನಾಮೆ( ಆಗಷ್ಟ್ 20 ) ಆರನೆ ಲೋಕಸಭೆ ವಿಸರ್ಜನೆ. 1980 ಏಳನೆ ಸಾಮಾನ್ಯ ಚುನಾವಣೆ; ಕಾಂಗ್ರೆಸ್( ಐ) ಅಧಿಕಾರಕ್ಕೆ; ಶ್ರೀಮತಿ. ಇಂದಿರಾ ಗಾಂಧಿಯವರಿಂದ ಪ್ರಧಾನಿಯಾಗಿ ಪ್ರ ಮಾಣ ವಚನ ಸ್ವೀಕಾರ; ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸಾವು, ಭಾರತದಿಂದ ರೋಹಿಣಿ ಉಪಗ್ರ ಹದಿಂದ ಕೂಡಿದ ಎಸ್ ಎಲ್ ವಿ ಯನ್ನು ಅಕಾಶಕ್ಕೆ ಉಡಾವಣೆ. 1982 ಏಷಿಯಾದ ಅತಿ ಉದ್ದನೆಯ ಸೇತುವೆಯ ಉದ್ಘಾಟನೆ ( ಮಾರ್ಚ 2 ); ಆಚಾರ್ಯ ಕೃಪಲಾನಿ ನಿಧನ ( ಮಾರ್ಚ 19). ಇನಸಾಟ್ 1 ಎ (INSAT.1A) ಉಡಾವಣೆ, ಗ್ಯಾನಿ ಜೈಲ್ ಸಿಂಗ್ ಭಾರತದ ರಾಷ್ಟ್ರಪತಿಯಾಗಿ ಆಯ್ಕೆ. (ಜೂಲೈ 15 ಗುಜರಾತ್ ಚಂಡಮಾರುತ (ಸೈಕ್ಲೋನ್) ನಲ್ಲಿ 500 ಕ್ಕೂ ಹೆಚ್ಚು ಸಾವು ( ನವಂಬರ್ 5); ಆಚಾರ್ಯ ವಿನೋಬಾ ನಿಧನ (ನವಂಬರ್ 15). IXನೇ ಏಷಿಯನ್ ಕ್ರೀ ಡಾಕೂಟದ ಉದ್ಘಾಟನೆ (ನವಂಬರ್ 19). 1983 ಹೊಸ ದೆಹಲಿಯಲ್ಲಿ ನಡೆದ ಸಿಎಚ್‌ಒಗಿಎಮ್ ( CHOGM). 1984 ಪಂಜಾಬಿನಲ್ಲಿ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ; ರಾಕೇಶ್ ಶರ್ಮ ಗಗನ ಯಾನ; ಶ್ರೀಮತಿ. ಇಂದಿರಾಗಾಂಧಿ ಹತ್ಯೆ . ಪ್ರ ಧಾನಿಯಾಗಿ ರಾಜೀವ್ ಗಾಂಧಿ. 1985ರಾಜೀವ್ –ಲೊಂಗೊವಾಲ್ ಒಪ್ಪಂದಕ್ಕೆ ಸಹಿ; ಸಂತ ಲೊಂಗೊವಾಲ್ ಹತ್ಯೆ.. ಪಂಜಾಬಿನಲ್ಲಿ ಚುನಾವಣೆ; ಅಸ್ಸಾಂ ಒಪ್ಪಂದ ; VII ನೇ ಪಂಚವಾರ್ಷಿಕ ಯೋಜನೆ ಪ್ರಾರಂಭ. 1986 ಮಿಜೋರಾಂ ಒಪ್ಪಂದ. 1987 ಆರ್. ವೆಂಕಟರಾಮನ್ ರಾಷ್ಟ್ರಪತಿ ಮತ್ತು ಶಂಕರದಯಾಳ್ ಶರ್ಮ ಉಪರಾಷ್ಟ್ರ ಪತಿಯಾಗಿ ಚುನಾಯಿತರಾದರು. ಬೋಫೋರ್ಸ್ ಗನ್ ಮತ್ತು ಫೇರ್ ಫ್ಯಾಕ್ಸ ಹಗರಣಗಳು. 1989 ಅಯೋಧ್ಯೆಯಲ್ಲಿ ರಾಮ ಶಿಲಾನ್ಯಾಸ ಪೂಜಾ; ಭಾರತದ ಮೊದಲ ಐ.ಆರ್.ಬಿ.ಎಂ (IRBM ‘ ಅಗ್ನಿ’ ಯಶಸ್ವಿಯಾಗಿ ಒರಿಸ್ಸಾದಿಂದ ಉಡಾವಣೆ (ಮೇ 22); ತ್ರಿಶೂಲ್ ಕ್ಷಿಪಣಿಯ ಪರೀಕ್ಷಾ ಪ್ರಯೋಗ (ಜೂನ್ 5); ಪೃಥ್ವಿ ಯಶಸ್ವಿ ಎರಡನೆ ಉಡಾವಣೆ (ಸೆಪ್ಟಂಬರ್ 27); ರಾಜೀವ್ ಸರ್ಕಾರಕ್ಕೆ ಚುನಾವಣೆಯಲ್ಲಿ ಸೋಲು ಮತ್ತು ರಾಜೀನಾಮೆ (ನವೆಂಬರ್.29); ಜವಾಹರ್ ರೋಜಗಾರ್ ಯೋಜನಾ ಪ್ರಾರಂಭ (ನವಂಬರ್.29); ರಾಷ್ಟ್ರೀಯ ರಂಗದ ನಾಯಕ ವಿ.ಪಿ. ಸಿಂಗ್ ಏಳನೆ ಪ್ರಧಾನ ಮಂತ್ರಿಯಾಗಿ ಪ್ರ ಮಾಣ ವಚನ ಸ್ವೀಕಾರ, ಹೊಸ ಸಂಪುಟದ ಪ್ರ ಮಾಣ ವಚನ (ಡಿಸೆಂಬರ್.2), ಒಂಬತ್ತನೆ ಲೋಕಸಭಾ ರಚನೆ. 1990 ಕೊನೆಯ ಕೊನೆಯ ಐ.ಪಿ.ಕೆ.ಎಫ್ (IPKF) ಮನೆಗೆ ವಾಪಸ್ಸು (ಮಾರ್ಚ 25); ಇಂಡಿಯನ್ ಏರ್ ಲೈನ್ ಎ-320 ಏರ್ ಬಸ್ ಅಫಘಾತ (14 ನೇ ಫಬ್ರವರಿ). ಜನತಾದಳ ವಿಭಜನೆ; ಬಿ ಜೆ ಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಸು , ಅಡ್ವಾನಿಯ ರಥ ಯಾತ್ರೆ ಮತ್ತು ಬಂಧನ. ಮಂಡಲ್ ವರದಿ ಅನುಷ್ಠಾನ, ವಿ. ಪಿ. ಸಿಂಗ್ ಘೋಷಣೆ, ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದಿಂದ ಅಯೋಧ್ಯೆಯಲ್ಲಿ ಹಿಂಸೆ. 1991 ಗಲ್ಫ್ ಯುದ್ಧ ಪ್ರಾರಂಭ (ಜನವರಿ. 17); ರಾಜೀವ ಗಾಂಧಿ ಹತ್ಯೆ(ಮೇ 21); X ಹತ್ತನೆ ಲೋಕಸಭಾ ರಚನೆ (ಜೂನ್ 20); ಪಿ.ವಿ. ನರಸಿಂಹ ರಾವ್ ಪ್ರ ಧಾನ ಮಂತ್ರಿಯಾದರು. 1992 ಭಾರತವು ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿತು (ಜನವರಿ. 29); ಭಾರತ ರತ್ನ ಮತ್ತು ಅಸ್ಕರ್ ವಿಜೇತ ಸತ್ಯಜಿತ್ ರೇ ನಿಧನ (ಏಪ್ರಿಲ್ 23); ಎಸ್ .ಡಿ. ಶರ್ಮ ರಾಷ್ಟ್ರಪತಿಯಾಗಿ ಚುನಾಯಿತರಾದರು (ಜೂಲೈ 25); ಐ ಎನ್ ಎಸ್ ಶಕ್ತಿ ಮೊದಲ ಭಾರತೀಯ ನಿರ್ಮಿತ ಜಲಾಂತರ್ಗಾಮಿ ಫೆಬ್ರವರಿ. 7 ರಂದು ಹೊರಬಂದಿತು. 1993 ಅಯೋಧ್ಯಯಲ್ಲಿ 67.33 ಎಕರೆ ಭೂಮಿ ಯನ್ನು ಸುಗ್ರೀವಾಜ್ಞೆಯ ಮೂಲಕ ವಶಪಡಿಸಿಕೊಳ್ಳಲಾಯಿತು (ಜನವರಿ 7); ಬೆಜೆಪಿಯ ಸಮಾವೇಶಕ್ಕೆ ಹೆಚ್ಚಿನ ಬಂದೋಬಸ್ತು. ಮುಂಬಯಿಯಲ್ಲಿ ಸರಣಿ ಬಾಂಬ ಸ್ಪೋಟದಿಂದ 300 ಸಾವು; ಇನ್ಸಾಟ್ 2 ಬಿ ಪೂರ್ಣ ಕಾರ್ಯಾರಂಭ; ಮಹಾರಾಷ್ಟ್ರದಲ್ಲಿ ಭೂಕಂಪ. 1994 ನಾಗರೀಕ ವಿಮಾನಯಾನದಲ್ಲಿ ಸರ್ಕಾರದ ಏಕಸ್ವಾಮ್ಯಕ್ಕೆ ಕೊನೆ. ಒಪ್ಪಂದದ ಬಗ್ಗೆ ಗದ್ದಲ; ಪ್ಲೇಗು ಕಾಣಿಸಿಕೊಂಡಿತು.;ಸುಷ್ಮಿತ ಸೇನ್ ಭುವನ ಸುಂದರಿ; ಐಶ್ವರ್ಯ ರೈ ವಿಶ್ವಸುಂದರಿ. 1995 ಮಾಯಾವತಿ ಉತ್ತರಪ್ರದೇಶದ ಮೊದಲ ದಲಿತ ಮುಖ್ಯ ಮಂತ್ರಿ. ಬಿ.ಜೆ.ಪಿ ಮಹಾರಾಷ್ಡ್ರ ಮತ್ತು ಗುಜರಾತನಲ್ಲಿ ಮತ್ತು ಜನತಾದಳ ಕರ್ನಾಟಕದಲ್ಲಿ, ಒರಿಸ್ಸಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಟಿ) ರಚನೆ. ಉತ್ತರಪ್ರದೇಶದಲ್ಲಿ ಮಾಯಾವತಿ ಸರ್ಕಾರದ ಪತನದ ನಂತರ ರಾಷ್ಟ್ರಪತಿ ಆಡಳಿತ. ಇನ್ಸಾಟ್2ಸಿ ಮತ್ತು ಐಆರ್ ಎಸ್ ಐ-ಸಿ ಉಡಾವಣೆ. 1996 ಹವಾಲಾ ಪ್ರಕರಣ, ಅನೇಕ ಮಂತ್ರಿಗಳ ಮತ್ತು ಪ್ರ ತಿ ಪಕ್ಷ ಧುರೀಣರ ಬಲಿ ತೆಗೆದು ಕೊಂಡಿತು: ಪಿ ಎಸ್ ಎಲ್ ವಿ ಡಿ 3 (PSLV D3) ಮಾರ್ಚ21 ರಂದು ಉಡಾವಣೆ. ಐ.ಆರ್.ಎಸ್.ಪಿ (IRSP-3) ಜೊತೆ ಬಾಹ್ಯಾಕಾಶ ಕಾರ್ಯಕ್ರ ಮದಲ್ಲಿ ಹೊಸ ಯುಗ ಪ್ರಾರಂಭ; ಹನ್ನೊಂದನೆ ಲೋಕಸಭಾ ಚುನಾವಣೆ ಏಪ್ರಿಲ್ ನಲ್ಲಿ . ಬಿ.ಜೆ.ಪಿ ಅತಿ ದೊಡ್ಡ ಪಕ್ಷ. 1997 ಭಾರತವು ಆಗಷ್ಟ 15, ರಂದು ತನ್ನ ಐವತ್ತನೆ ಸ್ವಾತಂತ್ರೋತ್ಸವ ಆಚರಿಸಿತು. 1998 ಮದರ್ ಥೆರೇಸಾ ನಿಧನ; ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರ ಧಾನ ಮಂತ್ರಿಯಾದರು. ಭಾರತವು ತನ್ನ ಎರಡನೆ ಪರಮಾಣು ಸಾಧನವನ್ನು ಸ್ಪೋಟಿಸಿತು (ಪೋಕ್ರಾನ್ II). 1999 ಇಂಡಿಯನ್ ಏರ್ ಲೈನ್ ವಿಮಾನ IC-814 ಅನ್ನು ಭಯೋತ್ಪಾದಕರು ಅಪಹರಣ ಮಾಡಿ ಅಫ್ಘನಿಸ್ತಾನದ ಕಂದಹಾರ್ ಗೆ ಡಿಸೆಂಬರು 24, 1999.ರಂದು ಒಯ್ದರು, ಒತ್ತೆಯಾಳುಗಳಾಗಿ ಇಟ್ಟುಕೊಂಡ ಪ್ರಯಾಣಿಕರನ್ನು ಬಿಡಿಸಿಕೊಳ್ಳಲು ಮೂವರು ಉಗ್ರಗಾಮಿಗಳನ್ನು ಸರ್ಕಾರವು ಬಿಡುಗಡೆ ಮಾಡಿತು. ಜೂನ್ 1999 ರಲ್ಲಿ ಸೆರೆ ಹಿಡಿದಿದ್ದ ಭಾರತಿಯ ಪೈಲೆಟ್ ಫ್ಲೈಟ್ ಲೆಫ್ಟಿನೆಂಟ್ ಕೆ. ನಚಿಕೇತ ಅವರನ್ನು ಎಂಟು ದಿನಗಳ ಸೆರೆವಾಸದ ನಂತರ ಬಿಡುಗಡೆ ಮಾಡಲಾಯಿತು; ಕಾರ್ಗಿಲ್ ವಿಭಾಗದಲ್ಲಿ ಹತೋಟಿ ಗಡಿರೇಖೆಯೊಳಗೆ ನುಸುಳಿದ ಪಾಕಿಸ್ತಾನಿಗಳನ್ನು ಹೊರ ಹಾಕಲು ಭಾರತಿಯ ಸೇನೆಯು ಆಪರೇಷನ್ ವಿಜಯ ಪ್ರಾರಂಭಿಸಿತು. ಭಾರತ ಕದನದಲ್ಲಿ ಜಯಶಾಲಿಯಾಯಿತು. 2000 ಅಮೇರಿಕಾದ (ಯೂ.ಎಸ್) ಅಧ್ಯಕ್ಷ ಬಿಲ್ ಕ್ಲಿಂಟನ್ ಮಾರ್ಚ 2000 ರಲ್ಲಿ ಭಾರತಕ್ಕೆ ಭೇಟಿ ನೀಡಿದರು. ಛತ್ತೀಸಘಡ, ಉತ್ತರಾಂಚಲ ಮತ್ತು ಝಾರ್ಖಂಡ್ ಎಂಬ ಮೂರು ಹೊಸ ರಾಜ್ಯಗಳು ರಚನೆಯಾದವು. ಭಾರತದ ಜನಸಂಖ್ಯೆಯು ಒಂದು ಬಿಲಿಯನ್ ಗಿಂತ ಹೆಚ್ಚಾಯಿತು. 2001 ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಜೂಲೈ2001 ರಲ್ಲಿ ಶೃಂಗ ಸಭೆ ನಡೆಯಿತು; ಅತ್ಯಂತ ಧಾರುಣ ನೈಸರ್ಗಿಕ ವಿಕೋಪವಾದ ಗುಜರಾತ್ ಭೂಕಂಪ ಜನವರಿ 2001 ರಲ್ಲಿ ಆಯಿತು; “ತೆಹಲ್ಕಾ.ಕಾಮ್; ಭಾರತೀಯ ಸೇನಾ ಅಧಿಕಾರಿಗಳು, ಮಂತ್ರಿಗಳು, ಅಧಿಕಾರಿಗಳು ಶಸ್ತ್ರಾಸ್ತ ಖರೀದಿಯಲ್ಲಿ ನಡೆಸುವ ಭ್ರಷ್ಟಾಚಾರವನ್ನು ತೋರಿಸುವ ವಿಡಿಯೋ ಟೇಪುಗಳನ್ನು ಮಾರ್ಚ 2001 ರಲ್ಲಿ ಪ್ರದರ್ಶಿಸಿತು; ಆರನೆ (ಸ್ವಾತಂತ್ರ್ಯ ಬಂದಾಗಿನಿಂದ ) ಭಾರತೀಯ ಜನಗಣತಿ ಮಾರ್ಚ 2001 ರಂದು ಮಕ್ತಾಯವಾಯಿತು. ಭಾರತದ ವಿದ್ಯುತ್ ಶಕ್ತಿ ವಿಭಾಗಕ್ಕೆ ಎನ್ರಾನ್ ಆಗಷ್ಟ 2001 ರಲ್ಲಿ ವಿದಾಯ ಹೇಳಿತು; ಜಿ.ಎಸ್.ಎಲ್.ವಿ (GSLV) ಯನ್ನು ಯಶಸ್ವಿಯಾಗಿ l ನೇ ಏಪ್ರಿಲ್ 2001 ರಲ್ಲಿ ಉಡಾವಣೆ ಮಾಡಲಾಯಿತು ಮತ್ತು ಪಿಎಸ್ ಎಲ್ ಸಿ-ಸಿ3 ಉಡಾವಣೆಯನ್ನು ಅಕ್ಟೋಬರ್ 2001 ರಲ್ಲಿ ಮಾಡಲಾಯಿತು. 2002 71-ವರ್ಷದ ಕ್ಷಿಪಣಿ ವಿಜ್ಞಾನಿ, ಅವುಲ್ ಪಕೀರ್ ಜೈನುಲ್ಲಬ್ದಿನ್ ಅಬ್ದುಲ್ ಕಲಾಂ ಭಾರತದ ರಾಷ್ಟ್ರ ಪತಿಯಾಗಿ ಚುನಾಯಿತರಾದರು; ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ದಾರುಣವಾದ ಗೋಧ್ರಾ ಘಟನೆ, ಕೋಮುಗಲಭೆಯು ಫೆಬ್ರವರಿ 27, 2002 ರಂದು ಗುಜರಾತಿನಲ್ಲಿ ನಡೆಯಿತು; ರಾಷ್ಟ್ರೀಯ ಜಲ ನೀತಿಯನ್ನು ಏಪ್ರೀಲ್ ನಲ್ಲಿ ಘೋಷಿಸಲಾಯಿತು. ಇದು ಜಲ ಸಂಪನ್ಮೂಲಗಳನ್ನು ಗರಿಷ್ಟ ಮತ್ತು ಸುಸ್ಥಿರ ಬಳಕೆಗೆ ಅನುವಾಗಿಸಲು ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವ ಗುರಿ ಹೊಂದಿದೆ. ಭಾರತವು ಸ್ಟ್ರಾಟಿಜಿಕ್ ಫೋರ್ಸಸ್ ಕಮ್ಯಾಂಡ್ (SFC) ಮತ್ತು ನ್ಯೂಕ್ಲಿಯರ್ ಕಮ್ಯಾಂಡ್ ಅಥಾರಿಟಿ (NCA) ರಚಿಸಿತು; ಏರ್ ಮಾರ್ಷಲ್ ತೇಜ ಮೋಹನ ಅಸ್ತಾನ ಅವರನ್ನು SFC ಯ ಮೊದಲ ಕಮ್ಯಾಂಡರ್ ಇನ್ ಛೀಫ್ ಆಗಿ ಹೆಸರಿಸಲಾಗಿದೆ; ಆಧುನಿಕ ಬಹು ಉದ್ಧೇಶಿತ ಉಪಗ್ರಹ, ಇನ್ಸಾಟ್-3A (INSAT-3A) ಅನ್ನು ಯಶಸ್ವಿಯಾಗಿ, ಫ್ರೆಂಚ್ ಗಯಾನದ ಕ್ವರೋದಿಂದ ಉಡಾಯಿಸಲಾಗಿದೆ. ಸಿ.ಬಿ.ಐ ಯು ಆರ್ಥಿಕ ಗುಪ್ತಚರವಿಭಾಗವನ್ನು ಬಿಳಿ ಕಾಲರ್ ಅಪರಾಧಗಳನ್ನು ಎದುರಿಸಲು ಜೂನ್ ನಲ್ಲಿ ರಚಿಸಿತು.; ಆಧುನಿಕ ಸಂವಹನ ಉಪಗ್ರಹ ಇನ್ಸಾಟ್-3E (INSAT-3 E) ಯನ್ನು ಯುರೋಪಿಯನ್ ರಾಕೆಟ್ ಮೂಲಕ ಫ್ರೆಂಚ್ ಗಯಾನಾದದಲ್ಲಿನ ಸ್ಪೇಸ್ ಪೋರ್ಟನಿಂದ ಡಿಸೆಂಬರ್ ತಿಂಗಳಲ್ಲಿ ಹಾರಿಸಲಾಯಿತು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಾಮಾನ್ಯ ಚುನಾವಣೆಯಲ್ಲಿ ಎನ್ ಡಿ ಎ (NDA) ಸರ್ಕಾರವನ್ನು ಸೋಲಿಸಿದವು. ಬಹಳ ಬೆಂಬಲ ವಿದ್ದರೂ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ. ಸೋನಿಯಾಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಡಾ. ಮನಮೋಹನ ಸಿಂಗ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ದು ಕೊಂಡು ಸರ್ಕಾರ ರಚಿಸಿದವು.
Source:Collected.

MSG BY: Deepak.S.G.(gklights).

No comments:

Post a Comment