ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29ನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನ’ವನ್ನಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಆಚರಿಸುತ್ತಾ ಬರುತ್ತಿದೆ.
ಕುವೆಂಪು – ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
(ಡಿಸೆಂಬರ್ 29, 1904 – ನವೆಂಬರ್ 11, 1994) – ಕನ್ನಡವು ಪಡೆದ ಅತ್ಯುತ್ತಮ ಕವಿ, ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಪ್ರಥಮ ವ್ಯಕ್ತಿ. ‘ವಿಶ್ವ ಮಾನವ’ ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು.'ಮನುಜ ಮತ,ವಿಶ್ವ ಪಥ' ಎಂದು ಸಾರಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-ಕಿಶೋರ ಚಂದ್ರವಾಣಿ. ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು.
ಡಿಸೆಂಬರ್ 29, 1904,ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದರು.
ತಂದೆ-ವೆಂಕಟಪ್ಪಗೌಡ. ತಾಯಿ- ಸೀತಮ್ಮ.
ಇವರು ಕುಪ್ಪಳಿ(ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ ‘ಮಹಾರಾಜಾ’ ಕಾಲೇಜಿನಲ್ಲಿ ಓದಿದ ಇವರು ಮೊದಲು ಇಲ್ಲಿಯೇ 1929ರಲ್ಲಿ ಉಪನ್ಯಾಸಕರಾಗಿ (lecturer) ವೃತ್ತಿ ಆರಂಭಿಸಿದರು. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (assistant professor)ಕಾರ್ಯ ನಿರ್ವಹಿಸಿದರು.ನಂತರ ಮತ್ತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ, ಉಪ ಕುಲಪತಿಯಾಗಿ ನಿವೃತ್ತರಾದರು(1960).
ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ (30 April 1937 ರಲ್ಲಿ ಮದುವೆ). ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ).
#ಪ್ರಶಸ್ತಿಗಳು,ಪುರಸ್ಕಾರಗಳು&ವಿಶೇಷಗಳು:
ಕುಪ್ಪಳಿಯಲ್ಲಿ ಕುವೆಂಪು ಮನೆ (ಈಗ ವಸ್ತು ಸಂಗ್ರಹಾಲಯವಾಗಿದೆ).
ಇವರು 1957 ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ –(ಶ್ರೀರಾಮಾಯಣ ದರ್ಶನಂ) (1955).
ಪದ್ಮಭೂಷಣ (1958).
ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್.
‘ರಾಷ್ಟ್ರಕವಿ’ ಪುರಸ್ಕಾರ (1964).
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (1966).
ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (1968).
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವಡಿ.ಲಿಟ್ (1969).
ಪಂಪ ಪ್ರಶಸ್ತಿ (1988).
ಪದ್ಮವಿಭೂಷಣ (1989).
ಕರ್ನಾಟಕ ರತ್ನ (1992).
ಪದ್ಮ ಭೂಷಣ (1958).
#ಪ್ರಮುಖ ಕೃತಿಗಳು.
*ಕವನ ಸಂಕಲನಗಳು- ಕೊಳಲು,ಪಾಂಚಜನ್ಯ,ನವಿಲು,ಪಕ್ಷಿಕಾಶಿ,ಅನಿಕೇತನ,
ಚಂದ್ರ ಮಂಚಕೆ ಬಾ ಚಕೋರಿ &etc.....
*ಕಾದಂಬರಿಗಳು- ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು &etc......
*ನಾಟಕಗಳು- ಶೂದ್ರ ತಪಸ್ವಿ, ಬೆರಳ್ ಗೆ ಕೊರಳ್,ರಕ್ತಾಕ್ಷಿ, ಬಿರುಗಾಳಿ, ಯಮನ ಸೋಲು&etc....
ಇತರ ಕೃತಿಗಳು- ಶ್ರೀರಾಮಾಯಣಂ ದರ್ಶನ್ಂ, ಸನ್ಯಾಸಿ ಮತ್ತು ಇತರ ಕೃತಿಗಳು&etc.....
*ಆತ್ಮ ಚರಿತ್ರೆ- ನೆನಪಿನ ದೋಣಿಯಲಿ.
#ಸಾರಸ್ವತ ಲೋಕದ ಪ್ರತಿಕ್ರಿಯೆಗಳು ಜ್ಞಾನಪೀಠ ಪ್ರಶಸ್ತಿ ಉಲ್ಲೇಖ ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ ಕಾವ್ಯಮೀಮಾಂಸೆಯ ಯಾವೊಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು – ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು.
ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.
‘ವಿಶ್ವ ಮಾನವ’ ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದ ವ್ಯಕ್ತಿಯ ಹುಟ್ಟಿದ ದಿನವಾದ ಇಂದು ರಾಜ್ಯದ ಎಲ್ಲ ಶಾಲಾ–ಕಾಲೇಜುಗಳಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಪ್ರತಿವರ್ಷದಂತೆ ಈ ವರ್ಷವೂ ವಿಚಾರಗೋಷ್ಠಿ ಹಮ್ಮಿಕೊಳ್ಳಲು ಆದೇಶಿಸಿದೆ.
ಮಾಹಿತಿ: ದೀಪಕ್ .ಎಸ್ .ಗಣಾಚಾರಿ.
ಸ ಶಿ. ಸ.ಮಾ.ಪ್ರಾ.ಶಾಲೆ ಉಡಚಣ ,ತಾ//ಅಫಜಲಪೂರ.