Wednesday, 6 May 2015

National Flag,Anthem&Emblem of India Details

ರಾಷ್ಟ್ರ ಲಾಂಛನ, ಧ್ವಜ, ಚಿಹ್ನೆ, ಗೀತೆ :-
✔ ನಮ್ಮ ರಾಷ್ಟ್ರ ಧ್ವಜವು ಮೂರು ಬಣ್ಣಗಳಿಂದ ಕೂಡಿದೆ.
ಮೇಲಿನ ಕಡು ಕೇಸರಿ ಬಣ್ಣವು ನಿಸ್ವಾರ್ಥ ಹಾಗೂ ತ್ಯಾಗವನ್ನು ಸಂಕೇತಿಸುತ್ತದೆ.
ಮಧ್ಯದ ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ಧತೆ
ಪ್ರ ತೀಕವಾಗಿದೆ.
ಕೆಳಗಿನ ಹಸಿರು ಬಣ್ಣವು ಸಸ್ಯಶಾಮಲೆಯಾದ ಭೂಮಿಯ ಸಂಕೇತ. ಕೃಷಿ, ಕೈಗಾರಿಕೆಗಳ ಸಮೃದ್ಧಿಯ ಗುರುತು.
✔ ರಾಷ್ಟ್ರ ಧ್ವ ಜವನ್ನು ಪಿಂಗಾಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.
✔ ಅಶೋಕ ಚಕ್ರ ವು ಸಾರಾನಾಥ ಅಶೋಕ ಸ್ಥಂಭದಲ್ಲಿರುವ ಚಕ್ರದ ಪ್ರತೀಕವಾಗಿದೆ. ಇದು ಧರ್ಮ
ಚಕ್ರವಾಗಿದೆ.ಅಲ್ಲದೆ ನಿರಂತರ ಚಲನೆಯ ಪ್ರತೀಕವು ಹೌದು.
✔ ರಾಷ್ಟ್ರ ಲಾಂಛನ ಸಾರಾನಾಥದ ಸಿಂಹ ಬೋಧಿಗೆ. ಇದರಲ್ಲಿ 4 ಸಿಂಹಗಳಿವೆ, ಇದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರ ವಿದೆ. ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹ ಇವುಗಳ ಚಿತ್ರವಿದೆ.
✔ ಸರ್ಕಾರವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರ ಲಾಂಛನದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ‘ಸತ್ಯಮೇವ ಜಯತೆ’ (ಸತ್ಯವೊಂದೆ ಗೆಲ್ಲುತ್ತದೆ) ಯನ್ನು ಮಂಡೂಕ ಉಪನಿಷತ್ತಿನಿಂದ ಪಡೆಯಲಾಗಿದೆ.
✔ ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರವೀಂದ್ರನಾಥ ಠಾಗೋರ ರವರು 1911 ರಲ್ಲಿ ಬಂಗಾಳಿ ಭಾಷೆಯಲ್ಲಿ ರಚಿಸಿದರು.
✔ ರಾಷ್ಟ್ರಗೀತೆಯು ಐದು ದೀರ್ಘ ವೃತ್ತಗಳಲ್ಲಿದೆ. ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿಧಾನ ಸಭೆಯು 24 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡಗಳು.(48-52 seconds).
✔ ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನವಾಧ ಸ್ಥಾನ ಪಡೆದಿರುವ ‘ವಂದೇ ಮಾತರಂ’ ರಾಷ್ಟ್ರಸ್ತವ್ಯ ಎನಿಸಿದೆ.
✔ ವಂದೇ ಮಾತರಂವನ್ನು ರಚಿಸಿದವರು ಬಂಕಿಮಚಂದ್ರ ಚಟರ್ಜಿ, ಇದನ್ನು ಆನಂದ ಮಠ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಸ್ವಾತಂತ್ರ್ಯ ಪೂರ್ವದ ರಾಷ್ಟ್ರಗೀತೆ ಎನ್ನುವರು.
✔ ನಮ್ಮ ರಾಷ್ಟ್ರೀಯ ಪ್ರಾಣಿ-ಹುಲಿ,
ರಾಷ್ಟ್ರೀಯ ಪಕ್ಷಿ-ನವಿಲು,
ರಾಷ್ಟ್ರೀಯ ಹೂ- ತಾವರೆ(ಕಮಲ).
✔ ಭಾರತ ಸರ್ಕಾರವು 1957 ಮಾರ್ಚ 22 ರಲ್ಲಿ ರಾಷ್ಟ್ರೀಯ ಪಂಚಾಂಗವನ್ನು ಜಾರಿಗೆ ತಂದಿತು.
✔ ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದವರಲ್ಲಿ ಮೇಘನಾದ ಸಹಾ ರವರ ಪಾತ್ರ ಪ್ರಮುಖ.ನಮ್ಮ ರಾಷ್ಟ್ರೀಯ ಪಂಚಾಂಗದಲ್ಲಿ ಶಕ ವರ್ಷವನ್ನು ಅಳವಡಿಸಿಕೊಳ್ಳಲಾಗಿದೆ. ಶಕ ವರ್ಷವು ಕ್ರೈಸ್ತ ವರ್ಷಕ್ಕಿಂತ 78 ವರ್ಷಗಳ ನಂತರ ಪ್ರಾರಂಭವಾಗುವುದು.
✔ ರಾಷ್ಟ್ರೀಯ ಪಂಚಾಂಗದಲ್ಲಿ ವರ್ಷದ ಮೊದಲ ತಿಂಗಳು ಚೈತ್ರಮಾಸ.
✔ ಶಕ ವರ್ಷಾರಂಭವು ಸಾಮಾನ್ಯವಾಗಿ ಮಾರ್ಚ 22 ರಂದು &ಅಧಿಕ ವರ್ಷದಲ್ಲಿ ಮಾತ್ರ ಮಾರ್ಚ 21 ರಂದು.
✔ 1950 ಜನವರಿ 26 ರಂದು ಭಾರತ ಗಣರಾಜ್ಯದ ಸಂವಿಧಾನ ಜಾರಿಗೆ ಬಂದಿದೆ.

About Karnataka:
✔ ಕರ್ನಾಟಕದ ಏಕೀಕರಣ 1956 ನವೆಂಬರ 1 (ಮೊದಲ ಹೆಸರು ಮೈಸೂರು ರಾಜ್ಯ).
✔ 1973 ನವೆಂಬರ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು.
✔ ಸ್ವಾಮಿ ವಿವೇಕಾನಂದರ ಜನ್ಮ ದಿನ ಅಂದೆ ಜನೇವರಿ 12 ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವರು.

MSG BY GKLIGHTS(Deepak.S.G).

Tuesday, 5 May 2015

GKLIGHTS 5

GKLIGHTS QUESTIONS&ANSWERS:

*Bharatadalli Rashtrapati Aalwikeyannu Jaarigolisuva Kalam-356.

*Asia&Europe Eradu Khandagalannu Samparka Kalpisuva Jagattin Ati Aalawad Nerinolagina Modal Surang Marg-Marmary(13.6k.m./29-10-2013, Turkey).

*Greek Deshad Jnyanad Pitamah-Aristotle.

*Kodal Sangamad Lingayat Panchamasaali Peeth Kodamaduva 2014 ne Saalin Basava Krishri Prashastige Bhajanaradavaru-Medha Patkar.

*Mahileyar Mele Maneyalli Aaguva Himse/ Dourjanyadinda Samrakshisuva Kanoonu Jaariyad Varsh-2006.

*Panchayat Raj Vyavaste Bagge Rachisalad Pratham Samiti- Balvantray Mehta Samiti.

#Revolutions#

*Hasiru Kranti(Green Revolution)
=Aahar Dhanyagal,Indhan,Shakti Utpadane.

*Shweta Kranti(White Revolution) =Haalu/Milk Utpadane.

*Neeli Kranti(Blue Revolution) =Meenu(Fish)/Sagarotpann Utpadane.

*Haladi Kranti(Yellow Revolution)
=Oil seeds/enne beejagal utpadane.

*Kempu Kranti(Red Revolution) =Tomoto/Meat(Mamsa) Utpadane.

*Suvarna Kranti(Golden Revolution) =Hannugal/Totagaarike.

*Belli Kranti(Silver Revolution) =Motte(Eggs) utpadane.

*Dundu Kranti(Round Revolution) =Aaloogadde(Potato) utpadane.

*Boodu Kranti(Grey Revolution) =Rasagobbar(Fertilizers) production.

*Gulabi Kranti(Pink Revolution) =Irulli/Aoushadhi utpadane.

*Kandu Kranti(Black/Brown Revolution) =Asaampradayik Shakti utpadane
(Non Conventional Energy Production).

Message BY:
Deepak.S.G.

Thursday, 30 April 2015

MATHS TRICK FOR 12

MATHS TRICK:
Multiply any large number by 12 mentally in seconds. To multiply any number by 12, just double the last digit& thereafter double each digit and add it to its neighbour.
EX: 21314 * 12 =  255768.
Lets break it into simple steps:

Step 1: 021314 * 12 =  _____8.
(Double of Last Digit 4= 8 ).

Step 2: 021314 * 12 =  ____68.
(Now Double 1= 2, and add it to 4, 2+4=6).

Step 3: 021314 * 12=   ___768.
(Now Double 3=6, and add it to 1, 6+1=7).

Step 4: 021314 * 12=   __5768.
(Now Double 1=2, and add it to 3, 2+3=5).

Step 5: 021314 * 12=   _55768.
(Now Double  2=4, and add it to 1, 4+1=5).

Step 6: 021314 * 12=   255768.
(Now Double 0=0, and add it to 2, 0+2=2).

So your final answer of 21314*12 = 255768.

MSG BY: DEEPAK.S.G(GKLIGHTS).

SOURCE: GATHERED FROM 'MATHS TRICKS WEBSITES'.

Thursday, 23 April 2015

ವಿಶ್ವ ಪುಸ್ತಕ ದಿನದ ಕುರಿತು ಒಂದು ಲೇಖನ

ಇಂದು (23 ಏಪ್ರೀಲ್ 2015) ವಿಶ್ವ ಪುಸ್ತಕ ದಿನ!

ಪುಸ್ತಕ ಎಂದಾಕ್ಷಣ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಹೇಳಿದ ಅದ್ಭುತ ಮಾತು ನೆನಪಿಗೆ ಬರುತ್ತದೆ. ಅದೇನೆಂದರೆ, " ಈ ಜಗತ್ತು ಕಂಡಿರುವ ಮನುಷ್ಯ ನಿರ್ಮಾಣದ ಅತ್ಯಂತ ಗಮನಾರ್ಹ ಸೃಷ್ಟಿಯೆಂದರೆ ಪುಸ್ತಕಗಳು. ಏನು ಅಳಿದರೂ ಪುಸ್ತಕಗಳು ಬದುಕಿ ಉಳಿದಿರುತ್ತವೆ. ಮನುಷ್ಯ ಕಟ್ಟಿರುವುದು ಯಾವುದೂ ಸ್ಥಿರವಾಗಿ ನಿಲ್ಲುವುದಿಲ್ಲ. ಕೀರ್ತಿ ಸ್ತಂಭಗಳು ಕುಸಿದು ಬೀಳುತ್ತವೆ, ರಾಷ್ಟ್ರಗಳು ನಾಶಗೊಳ್ಳುತ್ತವೆ. ನಾಗರಿಕತೆಗಳಿಗೆ ವೃದ್ಧಾಪ್ಯ ಬಂದು ಅವೂ ಸತ್ತು ಹೋಗುತ್ತವೆ, ಆದರೆ ಪುಸ್ತಕಗಳಿಗೆ ಸಾವು ಬರುವುದಿಲ್ಲ ." ಪಾಪು ಅವರದು ಎಷ್ಟೊಂದು ಅದ್ಭುತ ನುಡಿಯಲ್ಲವೇ?

ಹಿನ್ನೆಲೆ:
1923ರ ಏಪ್ರಿಲ್ 23ರಂದು ಸ್ಪೇನ್‌ನಲ್ಲಿ ಮಿಗೆಲ್‌ದ ಸೆರ್ವಾಂಟಿಸ್ ನಿಧನರಾದರು. ವಿಶ್ವ ಸಾಹಿತ್ಯಕ್ಕೆ 'ಡಾನ್ ಕ್ವಿಕ್ಸೋಟ್‌' ಕೊಟ್ಟ ಅಮರ ಲೇಖಕನಾತ. ಅವರ ಗೌರವಾರ್ಥವಾಗಿ ಆ ದಿನ ಪುಸ್ತಕ ದಿನವನ್ನಾಗಿ ಸ್ಪೇನ್‌ನ ಪುಸ್ತಕ ವ್ಯಾಪಾರಿಗಳು, ಪ್ರ ಕಾಶಕರು 1923ರಿಂದಲೇ ಆಚರಿಸಲಾರಂಭಿಸಿದರು. ಕಾಕತಾಳೀಯವೆಂಬಂತೆ ಅದೇ ದಿನ ಶೇಕ್ಸ್‌ಪಿಯರನ ಜನ್ಮದಿನವೂ,  ಮರಣ ದಿನವೂ ಹೌದು. ಹಾಗಾಗಿ ಪ್ರ ತಿ ಏಪ್ರಿಲ್ 23 ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುವಂತೆಯೂ, ಪುಸ್ತಕದ ಕುರಿತು, ಲೇಖಕರ ಕುರಿತು, ಗ್ರಂಥ ಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವಂತೆಯೂ, ಓದಿನ ಅಭಿರುಚಿ  ಪುಸ್ತಕ ಪ್ರೀತಿ ಬೆಳೆಸುವಂತಹ ದಿನವನ್ನಾಗಿ ಆಚರಿಸುವಂತೆಯೂ ವಿಶ್ವ ಸಂಸ್ಥೆ ಕರೆ ನೀಡಿದೆ. 1995ರ ಏಪ್ರಿಲ್ 23ರಿಂದ ಈ ಪುಸ್ತಕ ದಿನ ವಿಶ್ವಾದ್ಯಂತ ಆಚರಣೆಯಲ್ಲಿದೆ.

ವಾಸ್ತ ವತೆ:
ಲೋಕವೇನೋ ಸೃಷ್ಟಿಯಾಯಿತು. ಆ ಸೃಷ್ಟಿ ಪಿರಮಿಡ್‌ನ ತುದಿಯಲ್ಲಿ ಮಾನವನದೂ ಸೃಷ್ಟಿಯಾಯಿತು. ಪರಿಪೂರ್ಣತೆಗೆ ಆ ಮಾನವ ಇನ್ನೊಂದು ಲೋಕವನ್ನು ಸೃಷ್ಟಿಸಿಕೊಂಡ - ಅದೇ ಪುಸ್ತಕ ಲೋಕ. ಹೌದು, ಜಗತ್ತಿನ ಸಂಸ್ಕೃತಿ, ನಾಗರಿಕತೆಗಳಿಗೆ ಪುಸ್ತಕ ಸಂಸ್ಕೃತಿಯೇ ಬುನಾದಿ. ಪುಸ್ತಕ ಸ್ವರೂಪ ಕಂಡುಹಿಡಿದ ಆ ವಿಜ್ಞಾನಿಗೆ ಮೊದಲು ನಮಸ್ಕರಿಸೋಣ. ಪುಸ್ತಕಗಳಿವೆಯೆಂದೇ ನಾವು ಜಗತ್ತನ್ನೂ, ಅದು ವಿಕಾಸಗೊಂಡ ಬಗೆಯನ್ನೂ ಬಲ್ಲೆವು. ಜ್ಞಾನದ ದೀವಿಗೆ ಸದಾ ಬೆಳಗುತ್ತಿರುವುದೇ ಪುಸ್ತಕಗಳಿಂದ. ಪುಸ್ತಕಗಳೇ ಇರದಿದ್ದರೆ ಅಕ್ಷರಗಳಿಗೆ ಅರ್ಥವಾದರೂ ಎಲ್ಲಿರುತ್ತಿತ್ತು? ಲೋಕದ ಜ್ಞಾನವೇನಿದ್ದರೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಮಾತ್ರ ದೊರೆತೀತು ಎಂಬ ಭಾವನೆ ಸಲ್ಲದು. ಮನೆಯಲ್ಲೊಂದು ಗ್ರಂ ಥಾಲಯವಿಟ್ಟುಕೊಂಡರೆ ಸಮೃದ್ಧ ಜ್ಞಾನವೇ ಅಲ್ಲಿರುತ್ತದೆ. ಗಾಳಿಯಾಡಲು, ಬೆಳಕು ಬೀರಲು ಕಿಟಕಿಗಳಿರುವಂತೆ, ಜ್ಞಾನ ನೀಡಲು ಮನೆಯಲ್ಲಿ ಪುಸ್ತಕಗಳಿರಲೇ ಬೇಕು. ಅಡುಗೆ ಮನೆ, ರೆಫ್ರಿಜರೇಟರ್‌ಗಳೇನಿದ್ದರೂ ನಮ್ಮ ದೈಹಿಕ ಆಹಾರಗಳನ್ನು ಒದಗಿಸಲು. ಆದರೆ, ಅದಕ್ಕಿಂತ ಅಥವಾ ಅದರಷ್ಟೇ ಮುಖ್ಯ ನಮಗೆ ನಮ್ಮ ಮನೆಯ ಪುಟ್ಟ ಗ್ರಂಥಾಲಯವೂ ಆಗಬೇಕು. ಪುಸ್ತಕಗಳ ಓದಿನ ಪರಿಣಾಮ ಮನೆ ಮಂದಿಯ ಮೇಲೆ ಆದಂತೆ, ಮನೆಯ ಪುಟಾಣಿಗಳಿಗೂ ಓದಿನ ರುಚಿ ಅಂಟುತ್ತದೆ. ಆ ಅಭಿರುಚಿಯಿಂದಲೇ ನಮ್ಮ ಭಾವ ಸಂಸ್ಕಾರಗೊಳ್ಳುತ್ತದೆ. ಕ್ರಾಂತಿಯ ವಿಚಾರ ಒತ್ತಟ್ಟಿಗಿರಲಿ, ಪುಸ್ತಕಗಳಿಂದ ಭಾವ ಸಂಸ್ಕಾರವಂತೂ ಖಂಡಿತ ಆಗುತ್ತದೆ. ಯಾರೇ ದೊಡ್ಡ ಸಾಧಕರನ್ನು ನೆನಪಿಸಿಕೊಳ್ಳಿ. ಪಂಡಿತ ವಿದ್ವಾಂಸರಂತೂ ಸರಿಯೇ ಸರಿ. ವಿಜ್ಞಾನಿಯೋ, ಸಾರ್ವಜನಿಕ ನಾಯಕನೋ, ದೊಡ್ಡ ಉದ್ಯಮಿಯೋ, ಅತ್ಯುತ್ತಮ ಶಿಕ್ಷಕನೋ, ಉತ್ಕೃಷ್ಟ ವಕೀಲನೋ, ಅತ್ಯುತ್ತಮ ವೈದ್ಯನೋ  ಹೀಗೆ ಸಮಾಜಕ್ಕೆ ಒಳಿತನ್ನು ಮಾಡಿಹೋದ, ಮಾಡುತ್ತಿರುವ ಯಾರನ್ನೇ ಗಮನಿಸಿ, ಆತ ಖಂಡಿತವಾಗಿಯೂ ಅತ್ಯುತ್ತಮ ಓದುಗನಾಗಿರುತ್ತಾನೆ. ಓದಿ ಓದಿಯೇ ಆತ ಸಾಧಕನಾಗಿರುತ್ತಾನೆ. ಜಗತ್ತಿನ ದೊಡ್ಡ ಶ್ರೀಮಂತ, ಸಾಫ್ಟ್‌ವೇರ್ ತಂತ್ರಜ್ಞ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಒಂದು ಸಂದರ್ಶನದಲ್ಲಿ ಅವರು ಹೇಳಿದ್ದೇನು ಗೊತ್ತೇ? 'ಎಲ್ಲಿಯೇ ಹೋಗುವಾಗಲೂ ನನ್ನ ಬ್ರೀಫ್‌ಕೇಸ್ ತುಂಬ ಪುಸ್ತಕಗಳನ್ನಿಟ್ಟುಕೊಂಡಿರುತ್ತೇನೆ. ವಿಮಾನ ಎಷ್ಟೇ ತಡವಾಗುವ ಪ್ರ ಸಂಗ ಬಂದರೂ, ಯಾರಿಗೇ ಆಗಲಿ ಕಾಯಬೇಕಾದ ಸಂದರ್ಭ ಒದಗಿದರೂ ನನಗೆ ನಷ್ಟವೆನಿಸುವುದಿಲ್ಲ. ಏಕೆಂದರೆ, ಅಂತಹ ಎಲ್ಲ ಸಂದರ್ಭಗಳಲ್ಲೂ ನನ್ನ ಕೈಯಲ್ಲಿ ಪುಸ್ತಕ ಇದ್ದೇ ಇರುತ್ತದೆ' ಎಂದು. ಓದಲು ಬಾರದ ನಿರಕ್ಷರಿಗೂ, ಓದುವ ಹವ್ಯಾಸವೇ ಇರದ ಸಾಕ್ಷರಿಗೂ ವಿಶೇಷ ವ್ಯತ್ಯಾಸವಿಲ್ಲ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ. ಓದದೇ ನಾವು ಬೆಳೆಯಲಾರೆವು. ಯಾವ ವೃತ್ತಿಯಲ್ಲಿದ್ದರೂ ಸರಿ, ದಿನ ದಿನವೂ ಬೆಳೆಯುತ್ತಿರಬೇಕು. ನಿನ್ನೆಗಿಂತ ಇಂದಿನ ನಮ್ಮ ಮೌಲ್ಯ ಹೆಚ್ಚಾಗುತ್ತಿರಬೇಕು. ಪ್ರ ತಿದಿನವೂ ನಾವು ಅಪ್‌ಡೇಟ್ ಆಗುತ್ತಿರಬೇಕು. ಜ್ಞಾನ ಶ್ರೀಮಂತಿಕೆಯಲ್ಲಿ, ಔದಾರ್ಯದಲ್ಲಿ, ಮಾನವತೆಯಲ್ಲಿ ನಾವು ಏರುತ್ತಲೇ ಇರಬೇಕು. ಜಗತ್ತಿನ ಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇಂದಿನ ವಿಜ್ಞಾನ-ತಾಂತ್ರಿಕತೆಯಿಂದಾಗಿ, ಪ್ರ ತಿ ಐದು ವರ್ಷಕ್ಕೆ ಜಗತ್ತಿನ ಜ್ಞಾನ ದ್ವಿಗುಣಗೊಳ್ಳುತ್ತಿದೆಯಂತೆ. ತಾಂತ್ರಿಕತೆಯಂತೂ ಪ್ರ .ತಿ ಒಂದೂವರೆ ವರ್ಷಕ್ಕೆ ಹಳೆಯದಾಗುತ್ತಿದೆಯಂತೆ. ನಾವು ಓದಿ ತಿಳಿದುಕೊಳ್ಳದೇ ಹೋದರೆ, ಮುಂದೊಂದು ದಿನ ನಾವು ನಗಣ್ಯರೆನಿಸಿಬಿಡುತ್ತೇವೆ.

      ಇಂದು ಬಹಳಷ್ಟು  ಜನರ ಗೊಣಗಾಟವೆಂದರೆ, 'ಓದಿಗೆ ಸಮಯವೇ ಇಲ್ಲ. ನಮ್ಮ ಕೆಲಸದ ಹೊರೆಯೇ ಸಾಕಷ್ಟಿರುವಾಗ ಓದಲು ಪುರುಸೊತ್ತಾದರೂ ಎಲ್ಲಿರುತ್ತದೆ?' ಎಂಬುದು. ಇದು ಓದಿನ ರುಚಿ ತಿಳಿಯದ ಹೆಡ್ಡನಾಡುವ ಮಾತುಗಳು. ಓದಿನ ಮೌಲ್ಯವರಿಯದ ಮೂಢನ ಮಾತು. ಸೋಮಾರಿಯೊಬ್ಬನ ಸಮರ್ಥನೆಯ ನುಡಿಗಳಿವು. ಓದುವ ಚಟ ಅಂಟಿಸಿಕೊಂಡ  ಮನುಷ್ಯನು ಪ್ರ   ತಿದಿನ ಓದದೆ ಸಮಾಧಾನಪಡಲಾರ. ಓದದೇ ನಿದ್ದೆ ಹೋಗಲಾರ. 'ಅನ್ ಟು ದಿ ಲಾಸ್ಟ್‌' ಗಾಂಧೀಜಿಯವರ ಮೇಲೆ ಗಾಢ ಪರಿಣಾಮ ಬೀರಿದ ಕೃತಿಯಂತೆ. ಪ್ರ ತಿಯೊಬ್ಬ ದೊಡ್ಡ ವ್ಯಕ್ತಿಯೂ ಪುಸ್ತಕಗಳಿಂದ ಪ್ರ ಭಾವಿತರಾದವರೇ. ಪುಸ್ತಕಗಳಿಂದಲೇ ದೊಡ್ಡವರಾದವರು. ಅದನ್ನು ಅರಿಯದ ದುರಂತ ಇಂದು ನಮ್ಮೆದುರಿಗಿದೆ. ನಮ್ಮ ಹಿಂದಿನ ರಾಜಕಾರಣಿಗಳೂ ಪುಸ್ತಕ ಓದುತ್ತಿದ್ದರು. ರಾಜಾಜಿ- ರಾಧಾಕೃಷ್ಣನ್ ಅವರಂಥವರ ಮಾತು ಬಿಡಿ, ನಮ್ಮ ರಾಜ್ಯದ ನಿಜಲಿಂಗಪ್ಪ-ಅರಸು-ರಾಮಕೃಷ್ಣ ಹೆಗಡೆ ಮುಂತಾದವರು ವಿಪುಲ ಓದುಗರಾಗಿದ್ದರು. ರಾಜಕಾರಣದಿಂದ ಸರಿದ ನಂತರವೂ ಅವರ ಬದುಕನ್ನು ವಿಸ್ತರಿಸಿದ್ದು ಪುಸ್ತಕಗಳೇ. ಆ ವ್ಯತ್ಯಾಸ ಈಗಿನ ರಾಜಕಾರಣಿಗಳಲ್ಲಿ ಗುರುತಿಸಬಹುದು. ಅಂತೆಯೇ ದಿನದಿನವೂ, ಪ್ರ ತಿ ಪಾಠದ ಮೊದಲೂ ಓದಲೇಬೇಕಾದ ಶಿಕ್ಷಕರೂ ಓದುತ್ತಿಲ್ಲ. ಓದಿ ಬೆಳೆಯುತ್ತಿಲ್ಲ. ಅದರ ಪರಿಣಾಮವನ್ನು ಅವರು ತಯಾರಿಸಿ ಹೊರಹಾಕುತ್ತಿರುವ ಉತ್ಪಾದನೆಯಲ್ಲಿ ಕಾಣುತ್ತಿದ್ದೇವೆ. ಓದಿನ ರುಚಿ ಮೊತ್ತ ಮೊದಲಿಗೆ ಬೆಳೆಸಬೇಕಾದವರು ಪಾಲಕರು. ನಂತರ ಖಂಡಿತವಾಗಿಯೂ ಶಿಕ್ಷಕರು. ಇಂದಿನ ದಿನಗಳಲ್ಲಿ ಈ ಇಬ್ಬರೂ ಬೇರೆ ಹವ್ಯಾಸಗಳಿಗೆ ಅಂಟಿಬಿಟ್ಟಿರುವುದು ನಾವು ನೋಡುತ್ತಿದ್ದೇವೆ. ಅದು ಹಾಗಾಗಬಾರದು. ಪುಸ್ತಕಗಳೊಂದಿಗಿರುವವನು ಎಂದಿಗೂ ಒಬ್ಬಂಟಿಯಾಗಿರಲಾರ. ತನ್ನ ಅಪೂರ್ಣತೆಯನ್ನು ಓದಿನ ಮೂಲಕ ತುಂಬಿಕೊಳ್ಳಬಹುದು. ಜ್ಞಾನಕ್ಕೆ ಸರಿಸಮ ಯಾವುದೂ ಇಲ್ಲವೆಂದು ಋಷಿವಾಣಿ ಹೇಳುತ್ತದೆ. ಪುಸ್ತಕಗಳೊಂದಿಗೆ ಇರುವಾತ ಕಾಲಾತೀತವಾದ ಮನುಷ್ಯ ಚೇತನದೊಂದಿಗೆ ಇರುವಂತೆ ಎಂದು ನಂಬಿದ ಗ್ರಂಥಪಾಲಕರೊಬ್ಬರು - ಕೆ.ಎಸ್. ದೇಶಪಾಂಡೆ- ತಾವು ವಿನ್ಯಾಸ ಮಾಡಿದ ಗ್ರಂಥಾಲಯಕ್ಕೆ Timeless spirit of Man' ಎಂದು ಹೆಸರಿಸಿದ್ದಾರೆ. ಸಾರ್ಥಕ ಗಿಡಮರಗಳ ಫಲಕ್ಕೆ ಆಯುರ್ಮಿತಿಯಿದೆ. ಗ್ರಂಥಾಲಯಗಳ ಪ್ರಭಾವಕ್ಕೆ ಪರಿಮಿತಿ ಇರಲಾರದು. ಓದು ಬಲ್ಲವನೇ ತತ್ವಜ್ಞಾನಿ  ತತ್ವಜ್ಞಾನಿಯೇ ರಾಜನಾಗಬೇಕು ಎಂಬ ಪ್ಲೇಟೋನ ನಿಲುವಿನಲ್ಲಿ ಅರ್ಥವಿದೆ. ಈಗಿನ ಅನುಕೂಲಸ್ಥರು ಪುಸ್ತಕಗಳನ್ನು ಓದುವ ಉತ್ಕೃಷ್ಟ ಹವ್ಯಾಸದಿಂದ ದೂರವಾಗುತ್ತಿದ್ದಾರೆ. ನಾಗರಿಕತೆ ಬೆಳೆಯದಿದ್ದಾಗ ನಿರಕ್ಷರತೆ ಇತ್ತು. ಈಗ ನಾಗರಿಕತೆ ಬೆಳೆದಿದೆ  ಸಾಂಸ್ಕೃತಿಕ ಅನಾಗರಿಕತೆ ಉಳಿದುಬಿಟ್ಟಿದೆ. ಸಾಂಸ್ಕೃತಿಕವಾಗಿ ನಾವು ವಿದ್ಯಾವಂತ ನಿರಕ್ಷರಿಗಳಾಗುತ್ತಿರುವುದು ಈಗಿನ ದೊಡ್ಡ ದುರಂತವಾಗಿದೆ. ಹಾಗಾಗದಿರಲಿ. ಪುಸ್ತಕಗಳನ್ನು ಹಚ್ಚಿಕೊಳ್ಳೋಣ. ಈ ದಿನ ಒಂದು ಕನ್ನಡದ/ಬೇರೆ ಭಾಷೆಯ ಒಳ್ಳೆಯ ಪುಸ್ತಕ ಓದೋಣ.

     ತಮ್ಮೆಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆಯ
             ಹಾರ್ದಿಕ ಶುಭಾಶಯಗಳು.

Monday, 20 April 2015

BASAVA JAYANTI 2024

ಬಸವ ಜಯಂತಿ ಪ್ರಯುಕ್ತ  ಬಸವಣ್ಣನವರ ಕುರಿತು ಲೇಖನ:


ಎಲ್ಲರಿಗೂ 26/04/2024 ರಂದು ಶ್ರೀ ಬಸವಣ್ಣನವರ 891 ನೇ ಜಯಂತಿಯ ಹಾರ್ದಿಕ ಶುಭಾಶಯಗಳು.

ಬಸವಣ್ಣನವರು  ಒಬ್ಬ ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಗಳು ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರ & ಸಾಧನೆಗಳನ್ನೂ ಕಾಣಬೇಕಾಗಿದೆ.

ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ ಹೀಗೆ ಪುನಾರಚಿಸಬಹುದು. ಕಾಲ ಸುಮಾರು 12 ನೇ ಶತಮಾನ(1134). ಹುಟ್ಟಿದ್ದು ಬಾಗೇವಾಡಿಯಲ್ಲಿ (ಇಂಗಳೇಶ್ವರ ಅಂತಲೂ ಕೆಲವರ ಊಹೆ).ಈಗ ಅದು ಬಿಜಾಪುರ ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಸುಪ್ರಸಿದ್ಧ ಅಗ್ರಹಾರವಾಗಿತ್ತು. ತಂದೆ ಅದರ ಅಧಿಪತಿ -ಮಾದರಸ(ಮಾದಿರಾಜ). ತಾಯಿ- ಮಾದಲಾಂಬೆ. ದೇವರಾಜ -ಅಣ್ಣ,.ನಾಗಮ್ಮ -ಅಕ್ಕ. .ಬಾಗೇವಾಡಿಯ ಪ್ರಸಿದ್ಧ ದೈವ- ಬಸವೇಶ್ವರನ ಅನುಗ್ರಹದಿಂದ ನಂದೀ ವ್ರತದ ಫಲವಾಗಿ ಇವರು ಜನಿಸಿದರು ಎನ್ನಲಾಗಿದೆ. ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿದ ಕುತೂಹಲ ಜಾಣ್ಮೆ ಜಾಗೃತಿಗಳನ್ನು ವ್ಯಕ್ತಪಡಿಸತೊಡಗಿದರು. ಎಂಟರ ಪ್ರಾಯದಲ್ಲೆ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಒರೆ ಹಚ್ಚುವ ಪ್ರೌಢ ವಿಚಾರ ಸರಣಿ ಇವರಲ್ಲಿ ಗೋಚರವಾಯಿತು. ಉಪನಯನವನ್ನು ಒಪ್ಪದೆ ತಿರಸ್ಕರಿಸಿ ನಡೆದರೆಂದು ಕೆಲವು ಪುರಾಣಕರ್ತೃಗಳು ಹೇಳಿದರೆ, ಉಪನಯನವಾದ ಕೆಲವು ಕಾಲಾನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದು ಹರಿಹರ ಕವಿ ಹೇಳುತ್ತಾನೆ. ಅದೇನೇ ಇರಲಿ, ವೈದಿಕ ಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ ಅದರಿಂದ ಸಮಾಜದಲ್ಲಿ ಉಂಟಾದ ಮೇಲು ಕೀಳುಗಳನ್ನೂ ಇವರು ಒಪ್ಪಿಕೊಳ್ಳಲಾರದೇ ಹೋದರೆಂಬುದಂತೂ ಸತ್ಯ.. ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸುವುದಕ್ಕಾಗಿ ಯಜ್ಞೋಪವೀತವನ್ನು ಕಿತ್ತು ಹಾಕಿದ್ದರಿಂದ ಬಹಿಷ್ಕೃತರಾಗಿ ಹುಟ್ಟೂರನ್ನು ಬಿಟ್ಟು ಅಕ್ಕ -ನಾಗಮ್ಮನೊಡನೆ ಸಂಗಮ ಕ್ಷೇತ್ರಕ್ಕೆ ಹೋದರು. ಈ ವೇಳೆಗೆ ಆಕೆಗೆ ಮದುವೆಯಾಗಿದ್ದು ಅವಳ ಪತಿ -ಶಿವಸ್ವಾಮಿ ಬಹುಶಃ ಸಂಗಮದವನೇ ಆಗಿದ್ದಂತೆ ತೋರುತ್ತದೆ. ಆ ಕಾಲದಲ್ಲಿ ಸಂಗಮ ಕ್ಷೇತ್ರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಅದರ ಸ್ಥಾನಪತಿಗಳಾದ ಜಾತವೇದ ಮುನಿ ಅಥವಾ ಈಶಾನ್ಯ ಗುರುಗಳು ಸಂಗಮೇಶ್ವರ ಸ್ವಾಮಿಗಳೆಂದು ಪ್ರಸಿದ್ಧರಾಗಿದ್ದರು. ಅವರ ಸಮ್ಮುಖದಲ್ಲಿ ದೀಕ್ಷಾ ವಿಧಿಯೊಡನೆ ಇವರ ವಿದ್ಯಾಭ್ಯಾಸ ಹನ್ನೆರಡು ವರ್ಷ ನಡೆಯಿತು. ಕೃಷ್ಣಾ ಮಲಪ್ರಭಾ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ, ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ಒಪ್ಪವೀಯಿತು. ಹರಿತವಾದ ಬುದ್ಧಿಗೆ ಸಾಣೆ ಹಿಡಿದಂತಾಯಿತು. ಕಳಚೂರ್ಯ ಬಿಜ್ಜಳನ ಬಳಿ ದಂಡ ಧೀಶನಾಗಿದ್ದ ಇವರ ಸೋದರಮಾವ-ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಇವರಿಗೆ ಮದುವೆ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ನೂತನ ದಂಪತಿಗಳನ್ನು ಸಂಗಮದಿಂದ ಮಂಗಳವಾಡಿಗೆ ಹೋಗ ಹೇಳಿದರು. ಇವರ ಜೊತೆ ಶಿವಸ್ವಾಮಿ ನಾಗಮ್ಮರೂ ಹೊರಟರು. ಮಂಗಳವಾಡಕ್ಕೆ ಬಂದ ಮೇಲೆ ಬಸವಣ್ಣ ಗಂಗಾಂಬಿಕೆಯ ಜೊತೆಗೆ ನೀಲಲೋಚನೆ (ನೀಲಾಂಬಿಕೆ)ಯನ್ನೂ ಮದುವೆಯಾಗಬೇಕಾಯಿತು. ನೀಲಾಂಬಿಕೆ ಬಿಜ್ಜಳನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು. ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಆತನ ಸಾಕು ತಂಗಿಯಾಗಿ ಬೆಳೆದವಳು. ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪಕಾಲದಲ್ಲಿಯೆ ರಾಜ್ಯ ಭಂಡಾರದ ಮಂತ್ರಿಯಾದ ಬಲದೇವರು ದೈವಾಧೀನರಾಗಲು ಅವರ ಸ್ಥಾನಕ್ಕೆ ಬಸವಣ್ಣನವರನ್ನೇ ನೇಮಕ ಮಾಡಲಾಯಿತು. ರಾಜ್ಯದ ಭಂಡಾರಿಯಾದ ಬಸವಣ್ಣ ಕ್ರಮೇಣ ಅಂತರಂಗದ ಸಾಧನೆಯಿಂದಾಗಿ ಭಕ್ತಿ ಭಂಡಾರಿಯೂ ಆದರು. ಅಲ್ಲದೆ ತನ್ನ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕರಕ ಭಾವನೆಗಳಿಗೆ ಅನುಸಾರ ಸಾಮಾಜಿಕ ಕ್ರಾಂತಿಗೂ ಕೈ ಹಾಕಿದರು. ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೆ ಅಂದಿನ ರಾಜಕೀಯದಲ್ಲಿ ಬದಲಾವಣೆ ತಲೆದೋರಿತು. ಚಾಲುಕ್ಯ ಅರಸು ದುರ್ಬಲನಾಗಿದ್ದುದರಿಂದ ಸಾಮಂತ ಬಿಜ್ಜಳ ತಾನೇ ಚಕ್ರವರ್ತಿಯಾಗಿ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ಆಗ ಬಸವಣ್ಣನವರು ಇಡೀ ರಾಜ್ಯದ ಮಹಾಭಂಡಾರಿಯಾದರು. ಬಸವಣ್ಣನವರ ಅಧಿಕಾರ ಕ್ಷೇತ್ರವೂ ಧಾರ್ಮಿಕ ಕ್ಷೇತ್ರವೂ ವ್ಯಾಪಕಗೊಂಡವು. ಸುಮಾರು ೧೨ ವರ್ಷಗಳ ಕಾಲ ಕಲ್ಯಾಣ ಬಸವಣ್ಣನವರ ಕಾರ್ಯ ಕ್ಷೇತ್ರವಾಗಿತ್ತು. ಈ ಅಲ್ಪಾವಧಿಯಲ್ಲಿ ಇವರು ಸಾಧಿಸಿದ ಪರಿಣಾಮ, ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದದು.ಬಸವಣ್ಣನವರು ಇಡೀ ಯುಗವನ್ನು ಎಚ್ಚರಿಸಿದ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಚುಂಬಕ ಗಾಳಿಯಂತೆ ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆದು ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ ಅವರ ವಿಚಾರಮಂಥನದಿಂದ ಧರ್ಮದ ನವನೀತವನ್ನು ತೆಗೆದರು. ಅಲ್ಲಮಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ತಿತ್ತವೂ ಬಸವಶಕ್ತಿಗೆ ಮಣಿದು ಕಲ್ಯಾಣದಲ್ಲಿ ಕೆಲವು ಕಾಲ ಅನುಭವಮಂಟಪವನ್ನು ನಿರ್ದೇಶಿಸಿತು. ಬಸವಣ್ಣನವರ ಕ್ರಾಂತಿಕಾರಕ ಭಾವನೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಅವರನ್ನು ಪದಚ್ಯುತಗೊಳಿಸಲು ಆ ಪರಂಪರೆಯ ಅನುಯಾಯಿಗಳು ಹೊಂಚಿದರು. ಬಸವಣ್ಣನವರು ರಾಜ್ಯಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವನೆಂದು ದೂರಿ ಬಿಜ್ಜಳನಲ್ಲಿಗೆ ಇತರ ಅನೇಕ ಆರೋಪಗಳನ್ನು ಕೊಂಡೊಯ್ದರು. ಅವೆಲ್ಲವೂ ವ್ಯರ್ಥವಾದವು. ಆದರೆ ಅಸ್ಪೃಶ್ಯರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸನ ಮಗಳಿಗೂ ವಿವಾಹ ಮಾಡಿದಾಗ ಅದನ್ನು ಅಂದಿನ ಸಮಾಜ ಅರಗಿಸಿಕೊಳ್ಳಲಾರದೆ ಹೋಯಿತು. ವರ್ಣಸಂಕರವಾಯಿತೆಂದು ಸಂಪ್ರದಾಯಸ್ಥರು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆ ವಿಧಿಸುವಂತಾಯಿತು. ಅದಾದ ಸ್ವಲ್ಪ ಕಾಲದಲ್ಲಿಯೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಈ ಬೆಳವಣಿಗೆಗಳಿಂದ ಬೇಸರಗೊಂಡು ಮೊದಲೇ ಕಲ್ಯಾಣವನ್ನು ಬಿಟ್ಟಿದ್ದ ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಹೋಗಿ ಕೂಡಲ ಸಂಗಮನಲ್ಲಿ ಐಕ್ಯರಾದರು. ಇದು ಸುಮಾರು ೧೧೬೭-೬೮ರಲ್ಲಿ ಸಂಭವಿಸಿರಬೇಕೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಇದು ಒಂದು ರೀತಿಯಲ್ಲಿ ವಿವಿಧ ಪುರಾಣಗಳು ಚಿತ್ರಿಸಿದಂತೆ ಪಾವನ ಎನಿಸಿರುವ ಬಸವಣ್ಣನವರ ಜೀವನ ಕಥೆಯ ರೂಪರೇಷೆ.

ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಇವರ ಅಂತರಂಗದ ಕಥೆ. ಇವರ ವಚನಗಳಲ್ಲಿ ಅದರ ಉಜ್ವಲ ಚಿತ್ರ ಮೂಡಿದೆ. ತ್ರಿವಿಧ ದಾಸೋಹದಿಂದ ಷಟ್ ಸ್ಥಲದ ನಿಚ್ಚಣಿಕೆ ಏರಿ ಲಿಂಗಾಂಗ ಸಾಮರಸ್ಯದ ನಿಲವಿಗೇರಿದುದನ್ನು ಅಲ್ಲಿ ಕಾಣಬಹುದು. ಅಂತೆಯೇ ಇವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗು ಹರಿದು ಸರ್ವತ್ರ ಮಾನ್ಯವಾಗಿ ನಿಲ್ಲಬಲ್ಲ ಅಸಾಧಾರಣತೆಯನ್ನೂ ಜೀವಂತಿಕೆಯನ್ನೂ ಪಡೆದಿವೆ. ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಮುಖ್ಯ ತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಬಾರದು. ಅಂಥ ನೈತಿಕ ಜೀವನವನ್ನೂ ಸಾಮಾಜಿಕ ಸಮತೆಯನ್ನೂ ಸಾಧಿಸುವ ಸಾಹಸ ಅವರದು. ಹರಳಯ್ಯ, ,ಮಾದಾರ ಧೂಳಯ್ಯ, , ಡೋಹರ ಕಕ್ಕಯ್ಯ, ,ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ತ್ವದ ಆಶ್ರಯ ಪಡೆದು ಶರಣರಾದರು., ಅನುಭಾವಿಗಳಾದರು, ವಚನಕಾರರಾದರು; ಬಸವಣ್ಣನವರ ಮಹದಾಶೆಯ ಸಾಕಾರ ಮೂರ್ತಿಗಳಾದರು. ತಮಗಿಂತ ಹಿಂದಿನಿಂದಲೂ ಪ್ರಚಲಿತವಿದ್ದ ವೀರಶೈವ ಮತವನ್ನು ಅನೇಕ ಪರಿಷ್ಕರಣೆಗಳೊಂದಿಗೆ ಇತರ ನೂರಾರು ವಚನಕಾರರ ಜೊತೆ ಸೇರಿ ಪ್ರಚಾರ ಮಾಡಿದವರು ಬಸವಣ್ಣನವರು. ಬಸವಣ್ಣನವರ ಕಾಯಕದ ಕಲ್ಪನೆ ಇದೆಲ್ಲವನ್ನೂ ಸಾಧಿಸುವ ಸಮಗ್ರ ಜೀವನ ದರ್ಶನವನ್ನು ಒಳಗೊಳ್ಳುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವೇ ಅಲ್ಲದೆ ಸಮಾಜಕ್ಕೂ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ಅಲ್ಲದೆ ಈ ಕಾಯಕ ತತ್ತ್ವದ ಇನ್ನೊಂದು ಅಂಶವೆಂದರೆ ವ್ಯಕ್ತಿ ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧನಾಗಬೇಕು. ಅಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು. ಗಾಂಧೀಜಿ ಒತ್ತಿ ಹೇಳಿದ ಅಸಂಗ್ರಹ ತತ್ತ್ವ ಇಲ್ಲಿ ಕಂಡುಬರುತ್ತದೆ. ಇದು ಧಾರ್ಮಿಕ ಸಮತೆಗೂ ತಳಹದಿಯಾಗಿ ಸ್ತ್ರೀಪುರುಷರೆಂಬ ಭೇದವನ್ನು ಅಳಿಸಿ ಹಾಕಿತು. ಅಕ್ಕಮಹಾದೇವಿ, ಮಹಾದೇವಮ್ಮ, ಲಕ್ಕಮ್ಮ , ಲಿಂಗಮ್ಮ , ಗಂಗಾಬಿಕೆ, ನೀಲಾಂಬಿಕೆ ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ಜ್ವಲ ಸಾಕ್ಷಿಯಾಗಿದ್ದಾರೆ. ವ್ಯಕ್ತಿ ಸ್ವತಃ ಪೂಜಾ ಕೈಂಕರ್ಯ ಸಲ್ಲಿಸಬೇಕೆಂಬುದು ಇವರ ಧಾರ್ಮಿಕ ಆಚರಣೆಯ ಇನ್ನೊಂದು ಮುಖ್ಯ ಅಂಶ. ತನ್ನ ಉದ್ಧಾರವನ್ನು ತಾನೇ ಕಂಡುಕೊಳ್ಳಬೇಕು. ಒಬ್ಬನ ಪರವಾಗಿ ಇನ್ನೊಬ್ಬ ಪೂಜೆ ಸಲ್ಲಿಸುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ ಎಂಬುದು ಅವರ ವಾದ.ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧ ಶ್ರ ದ್ಧೆಯನ್ನೂ ಖಂಡಿಸಿದರು. ಒಟ್ಟಿನಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ ಧಾರ್ಮಿಕ ಸ್ವಾತಂತ್ಯ್ರಕ್ಕೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಯಿತು. ಕನ್ನಡ ಭಾಷೆ ಇವರ ವಚನಗಳಿಂದ ಅಪೂರ್ವವಾದ ಒಂದು ಶಕ್ತಿಯನ್ನೂ , ಶ್ರೀಮಂತಿಕೆಯನ್ನೂ ಪಡೆಯಿತು. ಮಾತು ಮಾಣಿಕ್ಯದ ದೀಪ್ತಿಯಾಯಿತು., ನುಡಿದುದೇ ಧರ್ಮವಾಯಿತು. ಇವರ ವ್ಯಕ್ತಿತ್ವ ಕಾಲದೇಶಗಳ ಪರಿಮಿತಿಯನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನು ಬೆಳೆಯುವ ಯುಗಪ್ರ ವರ್ತಕ ಶಕ್ತಿಯಾಗಿ ಪರಿಣಮಿಸಿದೆ. ಬಸವಣ್ಣನವರ ಶಕ್ತಿಯ ಮೂಲ ಇವರ ಅಪಾರ ಭಕ್ತಿಭಾವ, ಕೂಡಲ ಸಂಗಮ ದೇವನಲ್ಲಿಯ ಅನನ್ಯ ಶರಣಭಾವ, ಜಂಗಮಸೇವೆಯೇ ಲಿಂಗಸೇವೆ ಎಂಬ ದಿವ್ಯಭಾವ. ಇವರು ಜ್ಞಾನವೈರಾಗ್ಯಗಳ ಮಹತ್ತ್ವವನ್ನು ಅಲ್ಲಗೆಳೆಯದಿದ್ದರೂ ಭಕ್ತಿಗೆ ಪ್ರಾಧಾನ್ಯ ನೀಡಿದರು. ಶಿವಾನುಭವ ಮಂಟಪ ಇದಕ್ಕೆ ಉಜ್ವಲ ನಿದರ್ಶನ. ಅದರ ಖ್ಯಾತಿಯನ್ನು ತಿಳಿದ ಎಷ್ಟೋ ಮಂದಿ ಶಿವಶರಣರು ನಾಡಿನ ಒಳಗಿನಿಂದಲ್ಲದೆ ನಾಡಿನ ಹೊರಗಿನಿಂದಲೂ ಅಲ್ಲಿ ಸೇರಿದರು. ಅದು ಆಚಾರ, ವಿಚಾರ ಎರಡಕ್ಕೂ ಕೇಂದ್ರಸ್ಥಾನವಾಯಿತು. ಚೆನ್ನಬಸವ, ವೈರಾಗ್ಯನಿಧಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ಜೀವಜ್ಯೋತಿಗಳು ಅಲ್ಲಿಕಂಗೊಳಿಸಿದರು. ಸಹಸ್ರಾರು ಶಿವಶರಣರು ವರ್ಣ ಭೇದವಿಲ್ಲದೆ ಮೇಲು ಕೀಳೆಂಬ ಭಾವನೆ ತಾಳದೆ ಸಮಾನತೆಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. “ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವೆರೆದು ಆಚಾರವೆಂಬ ಬತ್ತಿಗೆ ಬಸವನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಾ ಶಿವನ ಪ್ರಕಾಶ. ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯ ಶಿವಶರಣರು. ಬಸವಣ್ಣನವರ ಬೋಧೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿದೆ.ಸಾಮಾನ್ಯರಿಗೂ ಅರ್ಥವಾಗುವ ವಚನ ಸಾಹಿತ್ಯ ಪ್ರವಾಹ ಆ ಕಾಲದಲ್ಲಿ ತುಂಬಿ ಹರಿಯಿತು. ಈ ವಚನಗಳು ಜಿಜ್ಞಾಸುಗಳಿಗೆ ಮುಮುಕ್ಷುಗಳಿಗೆ ಮತ್ತು ಸಾಹಿತ್ಯೋಪಾಸಕರಿಗೆ ದಾರಿದೀಪಗಳಂತಿವೆ.
ನಡೆ ನುಡಿಗಳ ಸಾಮರಸ್ಯ ಸೂಚಿಸುವ ಈ ವಚನ ಕಾಲವನ್ನು ಮೆಟ್ಟಿನಿಲ್ಲುವಂಥದು.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗವೆಚ್ಚಿ ಅಹುದೆನಬೇಕು
ನುಡಿಯೊಳಗೆ ನಡೆಯದಿದ್ದರೆ ಕೂಡಲ ಸಂಗಮನೆಂತೊಲಿವನಯ್ಯ..

ಇವರು ಮಹಾನುಭಾವರ ಪಂಕ್ತಿಯಲ್ಲಿ ನಿಲ್ಲತಕ್ಕವರು. ಇವರ ಭಕ್ತಿ ಬತ್ತಲಾರದ ತೊರೆ. ಮಾನವನ ಶ್ರೇಯಸ್ಸಿಗೂ ಪ್ರೇಯಸ್ಸಿಗೂ ಮೇಲ್ಪಂಕ್ತಿಯಾಗಿ ನಿಂತ ಹಿರಿಯ ಚೇತನ ಇವರದು. ಬಸವಣ್ಣನವರ ಸುಮಾರು ೧೪೦೦ ವಚನಗಳು ಸಿಕ್ಕಿವೆ. ಇವರು ಕನ್ನಡ ಭಾಷೆಯನ್ನೂ ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯತೆಗಳಿರಬಹುದು ಎಂಬುದನ್ನು ತೋರಿಸಿದರು. ಕವಿ ಮನೋಭಾವದಿಂದ ಕೂಡಿದ ಇವರ ವಚನಗಳು ಉಪಮೆ ರೂಪಕಾಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.

            (ಮಾಹಿತಿ: ಸಂಗ್ರಹಿತ ).

MSG BY:
Deepak.S.Ganachari. AM
GMPS UDACHAN. TQ AFZALPUR