★ ಭಾರತದ ಭೌಗೋಳಿಕ ಪರಿಚಯ:-
★ ಭಾರತವು ಹಿಂದೂಮಹಾಸಾಗರದಲ್ಲಿ ಚಾಚಿಕೊಂಡಿರುವ ಪರ್ಯಾಯ ದ್ವೀಪ.
*ಇದು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ನೆಲೆಗೊಂಡ ಅತೀ ದೊಡ್ಡ ಪರ್ಯಾಯ ದ್ವೀಪ.
*.ಭೂಖಂಡದ ಉತ್ತರಾರ್ಧ ಗೋಳದ ಪೂರ್ವಭಾಗದಲ್ಲಿದೆ.
★ ಭಾರತವು 32,87,263 ಚ.ಕಿ.ಮೀ. ವಿಸ್ತೀರ್ಣ (ಇದು ಕಾಶ್ಮೀರದ ಪಾಕ್ ಆಕ್ರ ಮಿತ ಪ್ರ ದೇಶ (Pok) ಹಾಗೂ ಚೀನಾದಿಂದ ಆಕ್ರಮಿತವಾಗಿರುವ ಅಕ್ ಸಾಯ್ ಚೀನ್ (Aksai Chin) ಪ್ರ ದೇಶಗಳನ್ನು ಸೇರಿ) ಹೊಂದಿದೆ.
— ಜಗತ್ತಿನ 7ನೇ ದೊಡ್ಡ ರಾಷ್ಟ್ರವಾಗಿದೆ.
— ಒಟ್ಟು ಭೂಭಾಗದಲ್ಲಿ ಭಾರತದ ಪಾಲು 2.47ರಷ್ಟು .
★ ಇದು ಉತ್ತರ ದಕ್ಷಿಣವಾಗಿ 3,214 ಕಿ.ಮೀ ಇದೆ.
— ಉತ್ತರದ ಕೊನೆಯ ತುದಿ:
ಇಂದಿರಾ ಕೋಲ್ (ಜಮ್ಮು ಕಾಶ್ಮೀರ).
— ದಕ್ಷಿಣದ ಕೊನೆಯ ಭೂ ತುದಿ: ಕನ್ಯಾಕುಮಾರಿ (ತಮಿಳುನಾಡು).
★ ಪೂರ್ವ ಪಶ್ಚಿಮವಾಗಿ 2,933 ಕಿ.ಮೀ ಇದೆ.
— ಪೂರ್ವದ ಕೊನೆಯ ತುದಿ-
ಕಿರಬಟಿ (ಅರುಣಾಚಲ ಪ್ರ ದೇಶ).
— ಪಶ್ಚಿಮದ ಕೊನೆಯ ತುದಿ:
ಗುಹಾರಮೋತಿ (ಗುಜರಾತ್).
★ ಭಾರತದ ಅತ್ಯಂತ ಎತ್ತರವಾದ ಪ್ರದೇಶ:
K2.
— ಭಾರತದ ಅತ್ಯಂತ ತಗ್ಗಾದ ಪ್ರದೇಶ:
ಕೇರಳದ ಕುಟ್ಟನಾಡ.
— ಭಾರತದ ದೊಡ್ದ ಸರೋವರ:
ಚಿಲ್ಕಾ ಸರೋವರ.
★ ಭಾರತವು ರಾಜಕೀಯವಾಗಿ 29 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, 1 ದೇಶದ ರಾಜಧಾನಿ ಪ್ರ ದೇಶಗಳನ್ನು ಹೊಂದಿದೆ.
*ಭೌಗೋಳಿಕವಾಗಿ ಅತೀ ದೊಡ್ದ ರಾಜ್ಯಗಳು: ರಾಜಸ್ಥಾನ, ಮಧ್ಯ ಪ್ರ .ದೇಶ, ಮಹಾರಾಷ್ಟ್ರ.
*ಭೌಗೋಳಿಕವಾಗಿ ಚಿಕ್ಕ ರಾಜ್ಯಗಳು:
ಗೋವಾ, ಸಿಕ್ಕಿಂ, ತ್ರಿಪುರಾ, ನಾಗಾಲ್ಯಾಂಡ್.
*ಜನಸಂಖ್ಯೆಯಲ್ಲಿ ಅತೀ ದೊಡ್ದ ರಾಜ್ಯ: ಉತ್ತರಪ್ರದೇಶ.
*ಜನಸಂಖ್ಯೆಯಲ್ಲಿ ಅತೀ ಚಿಕ್ಕ ರಾಜ್ಯ:
ಸಿಕ್ಕಿಂ.
*ಜನಸಾಂದ್ರ ತೆಿಯಲ್ಲಿ ದೊಡ್ದ ರಾಜ್ಯ:
ಬಿಹಾರ.
*ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯ:
ಅರುಣಾಚಲ ಪ್ರ ದೇಶ.
*ಭೌಗೋಳಿಕವಾಗಿ ದೇಶದ ಅತೀ ದೊಡ್ದ ಕೇಂದ್ರಾಡಳಿತ ಪ್ರದೇಶ:
ಅಂಡಮಾನ್ ಮತ್ತು ನಿಕೋಬಾರ್.
*ಭೌಗೋಳಿಕವಾಗಿ ದೇಶದ ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ:
ಲಕ್ಷದ್ವೀಪ.
*ದೇಶದ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 'ರಾಜ್ಯದ ಸ್ಥಾನಮಾನ'(Statehood) ಪಡೆದ ಕೇವಲ ಎರಡು ಕೇಂದ್ರಾಡಳಿತ ಪ್ರದೇಶಗಳು:
1)ದೆಹಲಿ. 2) ಪಾಂಡಿಚೇರಿ.
*ಪ್ರಸ್ತುತ ಭಾರತದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ: 640 (2011 ರ ಜನಗಣತಿಯ ಪ್ರಕಾರ).
*ಅತಿ ಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯ: ಉತ್ತರ ಪ್ರದೇಶ (71).
*ಅತಿ ಕಡಿಮೆ ಜಿಲ್ಲೆಗಳನ್ನು ಹೊಂದಿರುವ ರಾಜ್ಯ: ಗೋವಾ (2).
*ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ದೊಡ್ದ ಜಿಲ್ಲೆ:
ಗುಜರಾತ್ ರಾಜ್ಯದ ಕಚ್ (Kachchh) (46,000 ಚ.ಕಿ.ಮೀ).
*ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ಚಿಕ್ಕ ಜಿಲ್ಲೆ:
ಪಾಂಡಿಚೇರಿಯ 'ಮಾಹೆ'(Mahe)
(9 ಚ.ಕಿ.ಮೀ).
(Courtesy: http://www.spardhaloka.blogspot.com).
No comments:
Post a Comment