Thursday, 26 October 2017

ಓದು ಕರ್ನಾಟಕ/READ KARNATAKA BRIEF INFORMATION

ನಮಸ್ಕಾರ ಗುರು ಬಾಂಧವರೇ, ಓದು ಕರ್ನಾಟಕ ಎಂಬ ಯೋಜನೆಯ ಅನುಷ್ಠಾನ ಪ್ರತಿ ಶಾಲೆಗಳಲ್ಲೂ ಆಗಬೇಕಾಗಿರುತ್ತದೆ. ಆದ ಕಾರಣ ಆ ವಿ‌ಷಯದ ಬಗ್ಗೆ ನಿಮಗೂ ತಿಳಿದಿರಬೇಕಾದದ್ದೂ ಅವಶ್ಯಕವಾಗಿದೆ. ಹಾಗಾಗಿ ಈ ವಿಡಿಯೋದಲ್ಲಿ ಓದು ಕರ್ನಾಟಕ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ತಾವೆಲ್ಲಾ ಈ ವಿಡಿಯೋ ನೋಡಿ ಓದು ಕರ್ನಾಟಕ ಯೋಜನೆಯ ಸ್ವರೂಪ,ಗುರಿ,ಉದ್ದೇಶಗಳು & ಇತರ ಚಟುವಟಿಕೆ ಮಾಹಿತಿ ನೋಡಬಹುದು. ಕೂಡಲೇ ಈ ವಿಡಿಯೋ ನೋಡಿ & ಈ ವಿಡಿಯೋ ಲಿಂಕ್ ಇತರರಿಗೂ ಶೇರ್ ಮಾಡಿ. ನಿಮಗೆ ಇಲಾಖಾ ಮಾಹಿತಿ ಪಡೆಯಲು ನನ್ನ ಯೂಟ್ಯೂಬ್ ಚ್ಯಾನಲ್ Deepak.S.Ganachari ಗೆ ಸಬಸ್ಕ್ರೈಬ್ ಆಗಿ & ಯೂಟ್ಯೂಬ್ ಅಲ್ಲಿ ಬೆಲ್ ಬಟನ್ ಒತ್ತುವ ಮೂಲಕ ನನ್ನ ಮುಂದಿನ ಎಲ್ಲಾ ಅಪಲೋಡ್ ಆಗುವ ವಿಡಿಯೋಗಳ ನೋಟೀಫಿಕೇ‌ಷನ ನಿಮ್ಮ ಮೊಬೈಲ್ ಮೇಲೆ ಪಡೆಯಿರಿ. ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

      https://youtu.be/aTsqLnyJL50

Thursday, 19 October 2017

CSAS Exams 2017(ಸಿ.ಎಸ್.ಎ.ಎಸ್.ಪರೀಕ್ಷೆ)

ಎಲ್ಲರಿಗೂ ನಮಸ್ಕಾರ. ‌2017 ರ ನವೆಂಬರ್ 3&4 ರಂದು ರಾಜ್ಯಾದ್ಯಂತ ಸರ್ಕಾರಿ & ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ ವರ್ಷ 4 ರಿಂದ 9ನೇ ತರಗತಿಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಿ‌.ಎಸ್.ಎ.ಎಸ್.ಪರೀಕ್ಷೆ (ಸಂ.ಮೌ-1) ನಡೆಯಲಿದ್ದು, ಅದರ ಕುರಿತಾಗಿ ಈ ಕಿರು ವಿಡಿಯೋ ತಯಾರಿಸಲಾಗಿದೆ. ಎಲ್ಲರೂ ಈ ವಿಡಿಯೋ ನೋಡಿ, ಪರೀಕ್ಷೆ ಬಗ್ಗೆ ಪೂರ್ಣ ವಿವರ ಪಡೆಯಿರಿ. ಈ ವಿಡಿಯೋದಲ್ಲಿ ಮುಖ್ಯವಾಗಿ ಪರೀಕ್ಷೆ ನಡೆಸುವ ಅಧಿಕಾರಿ ವರ್ಗದವರ ಕಾರ್ಯಗಳು, ಜಿಲ್ಲಾ&ತಾಲ್ಲೂಕು ‌ಹಂತದ ಅಧಿಕಾರಿಗಳ ಕಾರ್ಯಗಳು, ಶಾಲಾ ಹಂತದಲ್ಲಿ ಮುಖ್ಯ ಗುರುಗಳ ಕಾರ್ಯಗಳು, ಕೊಠಡಿ ಮೇಲ್ವಿಚಾರಕರ ಕಾರ್ಯಗಳು, ಶಾಲಾ ಹಂತದಲ್ಲಿ ಅವಲೋಕನಕಾರರ ಕಾರ್ಯಗಳು, ಎಸ್.ಡಿ.ಎಂ.ಸಿ.ಕಾರ್ಯಗಳು, ಎಲ್ಲಾ ಸಿ.ಆರ್.ಪಿ ರವರ& ಇತರ ಅಧಿಕಾರಿಗಳ ಕಾರ್ಯ& ಜವಾಬ್ದಾರಿಗಳನ್ನು ಪ್ರತ್ಯೇಕವಾಗಿ ತಿಳಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಸ್ವರೂಪ, ಪರೀಕ್ಷೆ ನಡೆಸುವ ಬಗೆ, ಪ್ರಶ್ನೆ ಪತ್ರಿಕೆ ಸ್ವರೂಪ, ಓ.ಎಮ್.ಆರ್.ತುಂಬುವ ವಿಧಾನ, ಪ್ರಶ್ನೆ ಪತ್ರಿಕೆ& ಓ.ಎಮ್.ಆರ್. ವಿತರಿಸುವ ವಿಧಾನ, ಪರೀಕ್ಷೆಯಲ್ಲಿ ಆಸನಗಳ ವ್ಯವಸ್ಥೆ& ಇತರ ಮುಂಜಾಗ್ರತಾ ಕಾರ್ಯಗಳು,ಪರೀಕ್ಷೆ ಮುಗಿದ ಮೇಲೆ ಓ.ಎಮ್.ಆರ್. ಬಂಡಲಿಂಗ್ ವಿಧಾನ&ಇತರ ವಿಷಯಗಳ ಸಂಪೂರ್ಣವಾದ ವಿವರ ತಿಳಿಸಲಾಗಿದೆ.

        ಹಾಗಾದರೆ ಮತ್ತೇಕೆ ತಡ? ಕೂಡಲೇ ವಿಡಿಯೋ ನೋಡಿ& ವಿಡಿಯೋ ಶೇರ್ ಮಾಡಿ& ಈ ಯೂಟ್ಯೂಬ್ ಚ್ಯಾನಲ್ ಗೆ ಸಬಸ್ಚ್ರೈಬ್ ಆಗಿ.
ಈ‌ ವಿಡಿಯೋ‌ ಲಿಂಕ್ ಅನ್ನು ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ, ನಿಮ್ಮ ಇಲಾಖಾ ಅಧಿಕಾರಿ/ಇತರರಿಗೆ ಕಳುಹಿಸಿ,ಅವರಿಗೂ ಈ ಮಾಹಿತಿ ಮುಟ್ಟುವಂತೆ ಮಾಡಿ. ಈ ಪರೀಕ್ಷೆಯನ್ನು ಸೂಸುತ್ರವಾಗಿ ನಡೆಸಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ.

ಇದು ಅಪಲೋಡ್ ಆದ ಕೇವಲ 3 ದಿನಗಳಲ್ಲಿ ಈ ವಿಡಿಯೋ 13,000+ ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.ಇದರ ಸದುಪಯೋಗ ಎಲ್ಲಾ ಶಿಕ್ಷಕ ವರ್ಗ ಪಡೆಯಲು ಕೋರುತ್ತೆನೆ.ಈ ವಿಡಿಯೋ ಲಿಂಕ ನಿಮ್ಮ ಫ್ರೆಂಡ್ಸ್ &ಇತರರಿಗೂ ಶೇರ್ ಮಾಡಿ.ನನ್ನ ಚ್ಯಾನಲ್‌ಗೆ ಕೂಡಲೆ ಉಚಿತವಾಗಿ ಸಬಸ್ಕ್ರೈಬ್ ಆಗಿ.ಬೆಲ್ ಬಟನ್ ಕ್ಲಿಕ್ ಮಾಡಿ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಸೆಲೆಕ್ಟ್ ಮಾಡಿ,ಕಾಪಿ ಮಾಡಿ ಯಾವುದಾದರೂ ಬ್ರೌಸರ್ ಅಲ್ಲಿ ಕ್ಲಿಕ್ ಮಾಡಿ ಸರ್ಚ ಮಾಡಿ.👇

https://youtu.be/F-AUPrzz3zE

ಇಲ್ಲದಿದ್ದರೆ,ನೇರವಾಗಿ ಯೂಟ್ಯೂಬ್ ಓಪನ್ ಮಾಡಿ, ಸರ್ಚ್ ಬಾರ್ ಅಲ್ಲಿ Deepak Ganachari ಅಂತ ಟೈಪ್ ಮಾಡಿ.ನನ್ನ ಚ್ಯಾನಲ್ ಎಲ್ಲಾ ವಿಡಿಯೋಗಳು ಕಾಣ ಸಿಗುತ್ತವೆ.ಅಲ್ಲಿ ನಿಮಗೆ ಯಾವ ವಿಡಿಯೋ ಬೇಕೋ ಆ ವಿಡಿಯೋ ಕ್ಲಿಕ್‌ಮಾಡಿ ನೋಡಿ & ಅಲ್ಲಿ ಕಾಣಸಿಗುವ 'ಸಬಸ್ಕ್ರೈಬ್' ಕೆಂಪು ಬಣ್ಣದ ಬಟನ್ ಪ್ರೆಸ್ ಮಾಡಿ&'ಬೆಲ್' ಐಕಾನ್ ಕೂಡ ಕ್ಲಿಕ ಮಾಡಿ.

(Subscribe 'Deepak Ganachari' YouTube channel to get more educational,knowledge based& entertaining videos on the go.Get fast notifications by subscribing now for all my uploads on YouTube.

*Video Created By:
Deepak S Ganachari.
CRP Bilwar.Tq Jewargi.
Mob No:9972073906.

*You may also follow me on my twitter by following- @gklights .
It is the GK channel on twitter.

*You may also see my blog by searching Deepak.S.Ganachari.blogspot.com or deepak's inforum .
It is helpful to CET aspirants/Competitive exam preparators,Job seekers&others.

*You may also send your request personally to me to get add into my GKLIGHTS whatsapp group. It is the GK channel for all.

Let's stay connected to all my social media accounts to get lighten your life by getting knowledge by all these means. Share my videos/any updates to your friends&others to a better cause in spreading knowledge.Be a good one.

         Thank you& all the best.

Sunday, 15 October 2017

Vishwas Kiran Programme 2017

ವಿಶ್ವಾಸ ಕಿರಣ ಕಾರ್ಯಕ್ರಮ 2017:

ಕಲಿಕೆಯಲ್ಲಿ ಹಿಂದುಳಿದ ಸರಕಾರಿ&ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ನೆರವಾಗಲು ‘ವಿಶ್ವಾಸ ಕಿರಣ’ದ ಹೆಸರಿನಲ್ಲಿ ದಸರಾ ರಜೆ ವೇಳೆ ವಿಶೇಷ ಬೋಧನಾ ತರಗತಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದೆ.ಈ ವಿಶೇಷ ಕಲಿಕಾ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಎಲ್ಲಾ ಮಕ್ಕಳಿಗೆ& ಹಿಂದುಳಿದ ವರ್ಗಗಳ ಮಕ್ಕಳಿಗೆ ವಿಶೇಷ ನೆರವು ಸಿಗಲಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ 204 ಬ್ಲಾಕ್ ಗಳ ಆಯ್ದ 612 ಕೇಂದ್ರಗಳಲ್ಲಿ 11/10/2017 ಬುಧವಾರದಿಂದ 9&10ನೇ ತರಗತಿಯ ಮಕ್ಕಳಿಗೆ 25 ದಿನಗಳ ವಿಶೇಷ ಬೋಧನಾ ತರಗತಿ ಆರಂಭವಾಗಿವೆ. ಈ ಕಾರ್ಯಕ್ರಮದಡಿ ಜೇವರ್ಗಿ ತಾಲ್ಲೂಕಿನ ವ್ಯಾಪ್ತಿಯ ಆಯ್ದ ಶಾಲೆಗಳಲ್ಲಿ ಕಲಿಕಾ ಶಿಬಿರ ಆಯೋಜಿಸಲಾಗಿದೆ. ಜೇವರ್ಗಿ, ಮಂದೆವಾಲ, ಯಡ್ರಾಮಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮದ ಅನುಷ್ಠಾನ ಆಗಿದ್ದು,ಈ ಪ್ರತಿ ಕೇಂದ್ರಕ್ಕೆ ಹತ್ತಿರದ ಸರ್ಕಾರಿ& ಅನುದಾನಿತ ಪ್ರೌಢಶಾಲೆಗಳಿಂದ 200 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

‘ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಇದಾಗಿದೆ.ಇಂಗ್ಲೀಷ್ , ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ರಜಾ ದಿನಗಳಂದು ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, 9&10ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕಲಿಕಾಂಶಗಳ ವಿಷಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವಲ್ಲಿ ಹಾಗೂ ಪರೀಕ್ಷೆಯನ್ನು ಎದುರಿಸುವಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಯುಕ್ತ ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ರಜೆ ವೇಳೆ ಸತತ 12 ದಿನಗಳ ಕಾಲ ವಿಶೇಷ ತರಗತಿ ಆಯೋಜಿಸಿ ವಿಷಯ ತಜ್ಞರಿಂದ ಪಾಠ ಹೇಳಿಸಲಾಗುತ್ತದೆ. ದಸರಾ ರಜೆ ಮುಗಿದ ನಂತರ ಮುಂದೆ ಸತತ 13 ಭಾನುವಾರ ವಿಶೇಷ ತರಗತಿ ಆಯೋಜಿಸಲಾಗುವುದು ಎಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಹೇಳಿಕೆ ಆಗಿದೆ.

2016-17ನೇ ಸಾಲಿನಿಂದ ವಿಶ್ವಾಸ ಕಿರಣ ಯೋಜನೆ ಜಾರಿಯಾಗಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕಳೆದ ವರ್ಷಕ್ಕಿಂತ ಶೇಕಡವಾರು ಹೆಚ್ಚಿನ ಫಲಿತಾಂಶ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಈ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.

ಸಾಮಾನ್ಯ ವರ್ಗದ ಮಕ್ಕಳಿಗೆ ಅವಕಾಶವಿಲ್ಲ: ‘ವಿಶ್ವಾಸಕಿರಣ’ದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ಮಕ್ಕಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದು ಸಾಮಾನ್ಯ ವರ್ಗದ ಮಕ್ಕಳ ಪೋಷಕರ ಆಕ್ಷೇಪಕ್ಕೆ ಕಾರಣವಾಗಿದೆ. ಜೊತೆಗೆ ಕಡು ಬಡವರು ನಿಗದಿತ ಸ್ಥಳದಲ್ಲಿ ನಡೆಯುವ ಈ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಆರ್ಥಿಕ ಹೊರೆಯಾಗುತ್ತಿದೆ ಎನ್ನುವ ಕೂಗು ಸಾರ್ವಜನಿಕರಿಂದ ಕೆಲವು ಜಿಲ್ಲೆಗಳಲ್ಲಿ ಕೇಳಿ ಬರುತ್ತಿದೆ&ಮಧ್ಯಾಹ್ನದ ಬಿಸಿಯೂಟ ವಿವಿಧ ಜಿಲ್ಲೆಗಳ ಕೆಲವು ಕೇಂದ್ರಗಳಲ್ಲಿ ಲಭ್ಯವಿಲ್ಲದ್ದು ಕೂಡ ಈ ಕಾರ್ಯಕ್ರಮಕ್ಕೆ ಸ್ವಲ್ಪ ಹಿನ್ನೆಡೆ ಮಾಡುತ್ತಿದೆ.

‘ಸಾಮಾನ್ಯ ವರ್ಗದ ಮಕ್ಕಳಲ್ಲೂ ಕಲಿಕೆಯಲ್ಲಿ ಹಿಂದುಳಿದವರು ಇದ್ದಾರೆ. ಕೆಲವು ಪೋಷಕರು ಮಕ್ಕಳನ್ನು ಮನೆ ಪಾಠಕ್ಕೆ ಕಳುಹಿಸುವಷ್ಟು ಆರ್ಥಿಕವಾಗಿ ಉತ್ತಮವಾಗಿಲ್ಲ. ಯೋಜನೆಯಡಿ ಅವರಿಗೂ ಕಲಿಕೆಗೆ ಅವಕಾಶ ಮಾಡಿಕೊಡವಂತಾಗಲಿ ಎಂದು ಅನೇಕರ ಕೂಗು ಕೇಳಿಬರುತ್ತಿದೆ. ‘ಸರ್ಕಾರವೇ ಮಕ್ಕಳ ನಡುವೆ ಈ ರೀತಿಯ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಹಲವು ಪಾಲಕರು ಬೇಸರ ವ್ಯಕ್ತಪಡಿಸುತ್ತಾರೆ.

ಮೂರು ವಿಷಯಗಳ ಬೋಧನೆ:
‘ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ತರಲಾಗಿದೆ. ಹೆಚ್ಚಿನ ಮಕ್ಕಳು ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಮೂರು ವಿಷಯಗಳ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲು ಮೊದಲ ದಿನ ಪರೀಕ್ಷೆ ನಡೆಸಲಾಗಿದೆ. ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದಿರುವುದನ್ನು ಗುರುತಿಸಲಾಗುತ್ತದೆ.

ಶಿಕ್ಷಕರಿಗೂ ಗೌರವಧನ:
‘ರಜೆ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ಪಾಠ ಬೋಧನೆಗೆ ಬರುವ ಶಿಕ್ಷಕರಿಗೆ ಪ್ರತಿ ತರಗತಿಗೆ 400ರೂ.ರಂತೆ 25 ತರಗತಿಗಳಿಗೆ 10,000ರೂ. ಸಹಾಯಧನವನ್ನು ಇಲಾಖೆ ನೀಡಲಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಜೊತೆಗೆ ಅನುದಾನರಹಿತ ಶಾಲೆಗಳ ಶಿಕ್ಷಕರನ್ನೂ ಈ ವಿಶೇಷ ತರಗತಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’.

ವಿಷಯ ಸಂಗ್ರಹ:
ಶ್ರೀ ದೀಪಕ.ಎಸ್.ಗಣಾಚಾರಿ.
    ಸಿ.ಆರ್.ಪಿ.ಬಿಳವಾರ
ತಾ:ಜೇವರ್ಗಿ. ಜಿ: ಕಲಬುರಗಿ.
ಮೊಬೈಲ್ ನಂ: 9972073906.

Note:
ನೀವು ನನ್ನ ಯೂಟ್ಯೂಬ್ ಚ್ಯಾನಲ್ Deepak Ganachari ಗೆ ಸಬಸ್ಕ್ರೈಬರ್ ಆಗಿ ಕೂಡ ಅನೇಕ ಮಾಹಿತಿಗಳನ್ನು ವೀಡಿಯೋ ಮೂಲಕ  ನೋಡಬಹುದು. ಧನ್ಯವಾದಗಳು.

Sunday, 1 October 2017

MAHATMA GANDHI JAYANTI 2024

#ಮಹಾತ್ಮ ಗಾಂಧಿ ಜನ್ಮ ದಿನಾಚರಣೆ#

      *ಪ್ರತಿವರ್ಷ ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.*

       *ಈ ಅಕ್ಟೋಬರ್ 2, 2024 ರಂದು ನಾವೆಲ್ಲಾ ಗಾಂಧೀಜಿಯವರ 155 ನೇಯ ಹುಟ್ಟುಹಬ್ಬ ಆಚರಿಸಲಿದ್ದೇವೆ/ಆಚರಿಸುತ್ತಿದ್ದೇವೆ.

     *ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಇಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಇದರ ಜೊತೆಗೆ ಇಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಕಾರಣ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇಧಿಸಿರುವುದು ಹೆಮ್ಮೆಯ ಸಂಗತಿಯು ಹೌದು.

    * ನಮಗೆಲ್ಲಾ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು. ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ.ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13ನೇಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ . 19ನೇಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ 2 ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಸಹ ಅವರನ್ನು ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ.ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು.1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ದಂಡಿ ಯಾತ್ರೆ ಕೂಡ ಒಂದು. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.'ಭಾರತ ಬಿಟ್ಟು ತೊಲಗಿರಿ'/ 'ಕ್ವಿಟ್ ಇಂಡಿಯಾ' ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿದರು.

     *ಸತ್ಯ ಮತ್ತು ಅಹಿಂಸೆ ಅವರ ಮುಖ್ಯ ತತ್ವಗಳು ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೇಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಇವರು 'ತರುಣ ಭಾರತ' (YOUNG INDIA) ಎನ್ನುವ ಆಂಗ್ಲಭಾಷಾ ವಾರಪತ್ರಿಕೆಯನ್ನು (1919 ರಿಂದ 1931 ರವರೆಗೆ)ಹೊರಡಿಸುತ್ತಿದ್ದರು. 'ಸತ್ಯದೊಂದಿಗೆ ನನ್ನ ಪ್ರಯೋಗಗಳು' (Experiments With My Truth) ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಮಹಾತ್ಮ ಗಾಂಧಿ ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು.

** ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.ಅವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ ಕೂಡ ಅವರ ಆದರ್ಶಗಳು ನಮ್ಮೆಲ್ಲರ ಮನಗಳಲ್ಲಿ ರಾರಾಜಿಸುತ್ತಿರುತ್ತವೆ. ಇಂತಹ ಅಪೂರ್ವ ಚೇತನರನ್ನು ಇಂದು ಪೂಜಿಸುವ ಮೂಲಕ ನಾವೆಲ್ಲಾ ಅವರ ಉತ್ತಮ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸೋಣ.ಧನ್ಯತೆ ಮೆರೆಯೋಣ.

* ರಘುಪತಿ ರಾಘವ ರಾಜರಾಮ್...
  ಪತಿತ ಪಾವನ ಸೀತಾರಾಮ್....
  ಈಶ್ವರ್ ಅಲ್ಲಾ ತೇರೆ ನಾಮ್
  ಸಬಕೋ ಸನ್ಮತಿ ದೇ ಭಗವಾನ್......

#Message By:
Deepak.S.Ganachari.
Admission of TEAM 'GKLIGHTS'.
CRP BILWAR.TQ JEWARGI.

Wednesday, 12 April 2017

ABOUT BESIGE SAMBRAM PROGRAMME

#About Besige Sambram# Besige Sambram is a newly introduced programme by the Educational Department of Karnataka for the students of 6th&7th standard.It is created for attracting children towards govt schools&have some basic learning&some fun in summer at schools with the current running mid day meal programme&Students hidden co curricular/cultural activities to be brought out during this programme. For every 25 student attendance, 1 assistant teacher(25:1) has allotted as a Sambeam Teacher at present school with existing HMs for MDM. If student attendance will exceed from every 25 , one more assistant teacher will depute again&so on.Today attended HMs&assistants for Besige Sambram training are fixed to this programme.All others remaining assistant/s are kept pending/in waiting list. If necessary they will be get a call from department to give service. This programme starts from 17/04/2017 &end up by 27/05/2017.This programme is framed with the help of 'PRATHAM' organisation&TLMs are printed at&provided by govt press.Each Besige Sambram school will get a grant of 1,000Rs.Each school have to create an awareness in public,parents, children,media(if possible) regarding this programme&Motive 6th&7th class students to join the programme. (Send must an MDM Message regularly on all working days as in regular format for attended students for all classes). It has programme schedule for 5weeks starting from 17/04/17 to 27/05/17.Every week has a unique& a meaningful topic.You will be provided all necessary Pre Printed Teaching Learning Materials&5weeks Topic matters will be given by the department.It is your creativeness to add more to these given activities if you wish to do more. *Topics for 5weeks are as follows: 1st week- Family. 2nd week-Water. 3rd week-Food. 4th week-Health&hygiene. 5th week-Environment. *Periods' Time table for Besige Sambram. 1st Period-9a.m.-9.15a.m (15min). 2nd Period-9.15a.m.-10a.m.(45min). Rest time-10a.m.-10.15a.m.(15min). 3rd Period-10.15a.m.-11a.m.(45min). 4th Period-11a.m.-11.45a.m.(45min). 5th Period-11.45a.m.-12p.m.(15min). Note: *Daily 5 periods. *1st&5th periods are of 15minutes each. *2nd,3rd&4th periods are of 45minutes each. *After 2nd Period,15minutes break on everyday. (On all 5weeks,First 5days are teaching days&6th day is treated as Fun-day/cultural activity day.It may include singing,dancing,drama,uni-simulation,craft,drawing, mimicry,pottery,story telling&etc activities). *Every Teaching Day Activities: •1st period is of Para Card Reading. •2nd period is of Reading a given paragraph/story.Discussing of questions in individual groups&finally giving answers for those questions individually. •3rd perod is of Applied Maths/solving problems which are in verbal form. •4th period is of Do-learn(Maadi Kali) activity. •5th period is of Rapid Maths(Fast calculations regarding basic Maths/arithmetic skills). *Teaching day with dates: •1st week:Apr-18,19,20,21,22&fun day on 24. •2nd week:Apr-25,26,27,28. Mar-2& fun day on 03. •3rd week:May-4,5,6,8,9&fun day on 11. •4th week-May-12,13,15,16,17&fun day on 18. •5th week-MY-19,20,22,23,24&fun day on 25. Extra days:May-26,27. *Govt. Holidays List during Summer Jollity Programme: •Apr-13(Sunday). •Apr-29(Basava Jayanti). •Apr-30(Sunday). •May-01(Labours Day). •May-10(Buddha Poornima). •May-14(Sunday). •May-21(Sunday). Note: •Take pre test only once for 6th&7th class students. •First take pre test for 6th&7th students who will arrive on 17/04/17& further take daywise pre test for new comers once on 18/04/17 ,19/04/17&20/04/17 as they will join the programme on whichever day. *Evaluate the pre test question paper cum answer paper with filling grids(boxes)only with a right tick mark for each answer for questions which are given below the test question paper. *Pre test&Pro test question paper details: Two series pre test question papers&two series pro test question papers are there for testing the basic knowledge of attended students of 6th&7th classes. *Give Consecutive Series of 1&2 for all attended students on pre test. (That means if 'x' is a first student, give him a series-1 pre test question paper&for next student 'y' give series-2 question paper&follow this question paper order consecutively). *Plz note, give the same series test question paper for both pre test&pro test for every attended students. Ex: If Ramesh(a one of student name of 6th/7th class) is pre tested with series-1 question paper in pre test must be given series-1 pro test question paper as a pro test question paper. *Marks Giving System: •If student wrote/read completely without any mistakes or either/with 2/3 mistakes will be considered for 2marks. •If students wrote/read answer incompletely or attended with more than 3 mistakes will be considered for 1 mark. •If students fails to answer/fails to read completely or not attempted at all will be considered for 0 mark. *Teacher should not give directly marks,fill only the marks grids among 0,1/2 with a right tick mark below the related grid/boxes where space is given for entering right tick mark for each question on bottom of pre test. *On 20/04/17 you must give the all pre test attended students statistics as in the prescribed format to your respective CRP with analysis of total number of students who have scored 0 marks,scored 1 marks& scored 2 marks. *Other Notes: Take the pro test on 26/05/17&evaluate those test papers with ticking the below/bottom grids among 0/1/2 marks as per students answer in pro-test question paper cum answer paper. Give the attended common students(students who will attend pre test as well as pro test are only considered as common students) statistics as in same pre described format. **************************************** Hope you all show interest into this Summer Jollity Programme (Besige Sambram Programme) by your heart&soul and will make your school as a model school for other schools. Contact your respective cluster CRPs'/trained CRPs' for Besige Sambram/BRPs'/ Nodal Officer if any doubts/if any clarification needed regarding Summer Jollity Programme.They will definitely facilitate/assist you with their proper guidance. #Finally Thanks to Respective *BEO Jewargi Mazar Hussain sir. *BRCC Jewargi Dr.Ningaraj Mulimani sir. *Nodal Officer BRP Ganapati sir to organize successful training for HMs&Assistants who have allotted for Summer Jollity Programme. Special thanks to all other BRPs&CRPs of Jewargi for supporting this programme& make today's training a grand successful with your valuable guidance&resource matters. *Thanks a lot to all by: Deepak S G.(CRP Bilwar). (Message created/initiated in interest of Summer Jollity Programme awareness to all)

Friday, 20 January 2017

Ambigara Chowadayya Jayanti 2024 Details

Ambigara  chowdayya.

ಅಂಬಿಗರ ಚೌಡಯ್ಯ ೧೨ ನೇ ಶತಮಾನದ ಬಸವಣ್ಣನ  ಸಮಕಾಲೀನ ಶರಣ. ಆತ ನದಿಯಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ. ಈತ ೨೭೯ ವಚನಗಳನ್ನು "ಅಂಬಿಗರ ಚೌಡಯ್ಯ" ಎಂಬ ತನ್ನ ಹೆಸರಿನ ಅಂಕಿತದಲ್ಲೇ ರಚಿಸಿರುವುದು ಒಂದು ವಿಶೇಷ.  

ಹಿನ್ನೆ ಲೆ :- ಅಂಬಿಗರ ಚೌಡಯ್ಯ ವಚನಗಳನ್ನು ಓದಿದವರಿಗೆ ಚೌಡಯ್ಯ ಒಬ್ಬ ಪ್ರಾಮಾಣಿಕ  ಹೋರಾಟಗಾರ , ನಿರ್ಭಿಡೆಯ ಮನುಷ್ಯ. ,ದುಡಿವ ವರ್ಗದವರ ದನಿಯಾಗಿ ವಚನಕಾರರಲ್ಲಿ  ವಿಶಿಷ್ಟಸ್ಥಾನ ಪಡೆದಾತ. ವಚನಕಾರರಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ ಇವರ ಬಗೆಗೆ ಹೆಚ್ಚು ಅಧ್ಯಯನ - ಸಾಹಿತ್ಯ ಸಮೀಕ್ಷೆ ನಡೆದಿವೆ, ಆದರೆ ಚೌಡಯ್ಯ - ಕಾಳವ್ವೆ - ಉರಿಲಿಂಗಪೆದ್ದಿ ಈ ಮೊದಲಾದ ಶೂದ್ರ ವಚನಕಾರರ ಬಗೆಗೆ ಹೆಚ್ಚಿನ ಅಧ್ಯಯನ, ವಿಮರ್ಶೆ ಆಗಿಲ್ಲ. ವಚನ ಚಳುವಳಿಯ ಮೂಲ ಪ್ರೇರಣೆಗೆ ಬಸವಣ್ಣ ಕಾರಣವಾದರೆ ಆ ಚಳುವಳಿಯನ್ನು ಜೀವಂತಗೊಳಿಸಿದವರು ಚೌಡಯ್ಯ  ಮೊದಲಾದ ದುಡಿವ ವರ್ಗದಿಂದ ಬಂದ ವಚನಕಾರರು. ಈ ಅಂಶವನ್ನು ಚರಿತ್ರೆ ಮರೆಯಲಾರದು. ಚೌಡಯ್ಯನ ನೇರ ಹಾಗೂ ನಿರ್ಭೀಡೆಯ ನುಡಿಗಳು ಭಕ್ತಿಯ ಅಮಲಿನ ಭಾವುಕರಿಗೆ ಕಟು ಎಂದೆನಿಸಿದರೂ ಅಲ್ಲಿ ದಟ್ಟ ಸತ್ಯವಡಗಿದೆ, ಪ್ರಾಮಾಣಿಕ ಅನುಭವವಿದೆ. ಇದನ್ನೆಲ್ಲಾ ಅರ್ಥೈಸಿಕೊಂಡಾಗ ವಚನಕಾರರ ಪ್ರಾಮುಖ್ಯತೆ ತಿಳಿಯುತ್ತದೆ. ಈ ದಿಸೆಯಲ್ಲಿ ಅಂಬಿಗರ ಚೌಡಯ್ಯನವರು ಗಮನಾರ್ಹರು.

ಚೌಡಯ್ಯನ ದೃಷ್ಟಿಯಲ್ಲಿ ಧರ್ಮ - ದೇವರು :                 ಚೌಡಯ್ಯ ಮೊದಲಾದ ವಚನಕಾರರು ಧರ್ಮದ ವ್ಯಾಖ್ಯೆಯನ್ನು ಸರಳಗೊಳಿಸಿದರು. ನರನಲ್ಲೇ ಹರನನ್ನು ; ವ್ಯಕ್ತಿಯಲ್ಲೇ ಶಕ್ತಿಯನ್ನು ಗುರುತಿಸುವದರ ಮೂಲಕ ದೇವರ ಕಲ್ಪನೆಯನ್ನೇ ಬದಲಾಯಿಸಿದರು. ವೀರಶೈವ ಧರ್ಮವನ್ನೇ ಅವರು ಆರಿಸಿಕೊಂಡರೂ ಅದಕ್ಕೊಂದು ಹೊಸ ತಿರುವು ತಂದುಕೊಟ್ಟರು. ಹುಟ್ಟಿನಿಂದ ಲಿಂಗಾಯತರಾಗಿದ್ದ ಮಾತ್ರ ವೀರಶೈವರು ಎಂಬ ಹಳೆಯ ವಿಚಾರವನ್ನು ಬಿಟ್ಟು; ಅಲ್ಲಿದ್ದ ಸಂಪ್ರದಾಯವನ್ನು ಅಲ್ಲಗಳೆದು ಹುಟ್ಟಿನಿಂದ ಯಾವದೇ ಮತದವರಾಗಿದ್ದರೂ ಆಚಾರ, ವಿಚಾರದಿಂದ ಲಿಂಗಾಯತರಾದವರನ್ನು ಶರಣರು ವೀರಶೈವರೆಂದು ಕರೆಯುವದರ ಮೂಲಕ ವೀರಶೈವ ಧರ್ಮದ ವ್ಯಾಪ್ತಿಯನ್ನು ಹೆಚ್ಚಿಸಿದರು.                

ಚೌಡಯ್ಯನವರು ಇಂತಹ ವಿಷಯದಲ್ಲಿ ಬಹಳ ನಿರ್ಭಿಡೆ ವ್ಯಕ್ತಿ. "ಕಟ್ಟಿದ ಲಿಂಗವನ್ನು ಬಿಟ್ಟು  ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಮೆಟ್ಟು ತೆಗೆದುಕೊಂಡು ಹೊಡೆಯೆಂದು" ಖಾರವಾಗಿ ಹೇಳುತ್ತಾರೆ. ಧರ್ಮನಿಷ್ಟೆ ಚೌಡಯ್ಯನವರಲ್ಲಿ ಗಾಢವಾಗಿತ್ತು. ಅವರ ವಿಚಾರಧಾರೆ ಬೆಳೆದಂತೆಲ್ಲಾ ಅದು ಇನ್ನೂ ವಿಶಾಲವಾಗುತ್ತ ಹೋಯಿತು. ಆದ್ದರಿಂದಲೇ ಅವರು ಹಿಂದಿದ್ದ ಧರ್ಮಗಳಲ್ಲಿಯ ಪೊಳ್ಳುತನವನ್ನು ಬಯಲುಮಾಡಿ ಅಖಂಡವಾದ ಮಾನವ ಧರ್ಮದ ಕಡೆ ಕರೆದೊಯ್ದರು.ಚೌಡಯ್ಯ  ಮೊದಲಾದ ವಚನಕಾರರು ಮೂರ್ತಿ ಪೂಜಕರಲ್ಲ. ಹಾಗೆಂದಾಕ್ಷಣ ಅವರು ನಿರಾಕಾರವನ್ನೂ ಪೂಜಿಸುವುದಿಲ್ಲ. ಪರಮಾತ್ಮನ ಆಕಾರವನ್ನೇ ಜೀವಾತ್ಮನಲ್ಲಿ ಗುರುತಿಸಿ ಇಷ್ಟಲಿಂಗದ ಕುರುಹಿನ ಮೂಲಕ ಅರಿವು ಕಂಡುಕೊಳ್ಳುವದು ಮುಖ್ಯ ಉದ್ದೇಶ . ಹೆಚ್ಚಿನ ಮಾಹಿತಿ: ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ.ಇಲ್ಲಿ ಮೂಡಿರುವ ಪದಗಳಿಗೆ ಯಾವುದೋ ದಿವ್ಯ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ. ಆದರೆ ಒಡಲಾಳದಲ್ಲೆಲ್ಲೋ ಸದಾಶಯವೊಂದರ ವ್ಯರ್ಥ ಆಧಾರ ಇದೆ ಎನ್ನುವುದನ್ನು ನಿರಾಕರಿಸುವುದಕ್ಕೆ ಸ್ವಲ್ಪ ಕಷ್ಟ ಅನಿಸುತ್ತದೆ. ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ. ಇಂತಹ ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಂಡರೆ ಆತನ ಆಶಯ, ಧಾಟಿ ನಮಗೆ ಅರ್ಥವಾದೀತು. “ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ” “ಕಂತೆ ತೊಟ್ಟವ ಗುರುವಲ್ಲ ಕಾವಿ ಹೊತ್ತವ ಜಂಗಮನಲ್ಲ ಶೀಲ ಕಟ್ಟಿದವ ಶಿವಭಕ್ತನಲ್ಲ ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ ಹೌದೆಂಬವನ ಬಾಯಿ ಮೇಲೆ ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ” “ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ ನಮ್ಮ ಅಂಬಿಗರ ಚೌಡಯ್ಯ” “ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ನೋಡಿರೆಂದನಮ್ಮಂಬಿಗರ ಚೌಡಯ್ಯ” “ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ ಪರದೇಶಕ್ಕೆ ಹೋಗಿ ಬಳಲದಿರು! ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ! ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ” ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ. ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು ಅಂಬಿಗರ ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ. ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತ:ಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ. ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲಾ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ. ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.

ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ. ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ 1968ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಬೇಧಗಳು ಚೌಡಯ್ಯನ ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ. ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ. ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.

MSG Collected By:
GKLIGHTS(Deepak.S.G) A.M.
GMPS Udachan.Tq Afzalpur.