ವಿಶ್ವಾಸ ಕಿರಣ ಕಾರ್ಯಕ್ರಮ 2017:
ಕಲಿಕೆಯಲ್ಲಿ ಹಿಂದುಳಿದ ಸರಕಾರಿ&ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ನೆರವಾಗಲು ‘ವಿಶ್ವಾಸ ಕಿರಣ’ದ ಹೆಸರಿನಲ್ಲಿ ದಸರಾ ರಜೆ ವೇಳೆ ವಿಶೇಷ ಬೋಧನಾ ತರಗತಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದೆ.ಈ ವಿಶೇಷ ಕಲಿಕಾ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಎಲ್ಲಾ ಮಕ್ಕಳಿಗೆ& ಹಿಂದುಳಿದ ವರ್ಗಗಳ ಮಕ್ಕಳಿಗೆ ವಿಶೇಷ ನೆರವು ಸಿಗಲಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ 204 ಬ್ಲಾಕ್ ಗಳ ಆಯ್ದ 612 ಕೇಂದ್ರಗಳಲ್ಲಿ 11/10/2017 ಬುಧವಾರದಿಂದ 9&10ನೇ ತರಗತಿಯ ಮಕ್ಕಳಿಗೆ 25 ದಿನಗಳ ವಿಶೇಷ ಬೋಧನಾ ತರಗತಿ ಆರಂಭವಾಗಿವೆ. ಈ ಕಾರ್ಯಕ್ರಮದಡಿ ಜೇವರ್ಗಿ ತಾಲ್ಲೂಕಿನ ವ್ಯಾಪ್ತಿಯ ಆಯ್ದ ಶಾಲೆಗಳಲ್ಲಿ ಕಲಿಕಾ ಶಿಬಿರ ಆಯೋಜಿಸಲಾಗಿದೆ. ಜೇವರ್ಗಿ, ಮಂದೆವಾಲ, ಯಡ್ರಾಮಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮದ ಅನುಷ್ಠಾನ ಆಗಿದ್ದು,ಈ ಪ್ರತಿ ಕೇಂದ್ರಕ್ಕೆ ಹತ್ತಿರದ ಸರ್ಕಾರಿ& ಅನುದಾನಿತ ಪ್ರೌಢಶಾಲೆಗಳಿಂದ 200 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
‘ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಇದಾಗಿದೆ.ಇಂಗ್ಲೀಷ್ , ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ರಜಾ ದಿನಗಳಂದು ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, 9&10ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕಲಿಕಾಂಶಗಳ ವಿಷಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವಲ್ಲಿ ಹಾಗೂ ಪರೀಕ್ಷೆಯನ್ನು ಎದುರಿಸುವಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಯುಕ್ತ ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ರಜೆ ವೇಳೆ ಸತತ 12 ದಿನಗಳ ಕಾಲ ವಿಶೇಷ ತರಗತಿ ಆಯೋಜಿಸಿ ವಿಷಯ ತಜ್ಞರಿಂದ ಪಾಠ ಹೇಳಿಸಲಾಗುತ್ತದೆ. ದಸರಾ ರಜೆ ಮುಗಿದ ನಂತರ ಮುಂದೆ ಸತತ 13 ಭಾನುವಾರ ವಿಶೇಷ ತರಗತಿ ಆಯೋಜಿಸಲಾಗುವುದು ಎಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಹೇಳಿಕೆ ಆಗಿದೆ.
2016-17ನೇ ಸಾಲಿನಿಂದ ವಿಶ್ವಾಸ ಕಿರಣ ಯೋಜನೆ ಜಾರಿಯಾಗಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕಳೆದ ವರ್ಷಕ್ಕಿಂತ ಶೇಕಡವಾರು ಹೆಚ್ಚಿನ ಫಲಿತಾಂಶ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಈ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.
ಸಾಮಾನ್ಯ ವರ್ಗದ ಮಕ್ಕಳಿಗೆ ಅವಕಾಶವಿಲ್ಲ: ‘ವಿಶ್ವಾಸಕಿರಣ’ದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ಮಕ್ಕಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದು ಸಾಮಾನ್ಯ ವರ್ಗದ ಮಕ್ಕಳ ಪೋಷಕರ ಆಕ್ಷೇಪಕ್ಕೆ ಕಾರಣವಾಗಿದೆ. ಜೊತೆಗೆ ಕಡು ಬಡವರು ನಿಗದಿತ ಸ್ಥಳದಲ್ಲಿ ನಡೆಯುವ ಈ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಆರ್ಥಿಕ ಹೊರೆಯಾಗುತ್ತಿದೆ ಎನ್ನುವ ಕೂಗು ಸಾರ್ವಜನಿಕರಿಂದ ಕೆಲವು ಜಿಲ್ಲೆಗಳಲ್ಲಿ ಕೇಳಿ ಬರುತ್ತಿದೆ&ಮಧ್ಯಾಹ್ನದ ಬಿಸಿಯೂಟ ವಿವಿಧ ಜಿಲ್ಲೆಗಳ ಕೆಲವು ಕೇಂದ್ರಗಳಲ್ಲಿ ಲಭ್ಯವಿಲ್ಲದ್ದು ಕೂಡ ಈ ಕಾರ್ಯಕ್ರಮಕ್ಕೆ ಸ್ವಲ್ಪ ಹಿನ್ನೆಡೆ ಮಾಡುತ್ತಿದೆ.
‘ಸಾಮಾನ್ಯ ವರ್ಗದ ಮಕ್ಕಳಲ್ಲೂ ಕಲಿಕೆಯಲ್ಲಿ ಹಿಂದುಳಿದವರು ಇದ್ದಾರೆ. ಕೆಲವು ಪೋಷಕರು ಮಕ್ಕಳನ್ನು ಮನೆ ಪಾಠಕ್ಕೆ ಕಳುಹಿಸುವಷ್ಟು ಆರ್ಥಿಕವಾಗಿ ಉತ್ತಮವಾಗಿಲ್ಲ. ಯೋಜನೆಯಡಿ ಅವರಿಗೂ ಕಲಿಕೆಗೆ ಅವಕಾಶ ಮಾಡಿಕೊಡವಂತಾಗಲಿ ಎಂದು ಅನೇಕರ ಕೂಗು ಕೇಳಿಬರುತ್ತಿದೆ. ‘ಸರ್ಕಾರವೇ ಮಕ್ಕಳ ನಡುವೆ ಈ ರೀತಿಯ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಹಲವು ಪಾಲಕರು ಬೇಸರ ವ್ಯಕ್ತಪಡಿಸುತ್ತಾರೆ.
ಮೂರು ವಿಷಯಗಳ ಬೋಧನೆ:
‘ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ತರಲಾಗಿದೆ. ಹೆಚ್ಚಿನ ಮಕ್ಕಳು ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಮೂರು ವಿಷಯಗಳ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲು ಮೊದಲ ದಿನ ಪರೀಕ್ಷೆ ನಡೆಸಲಾಗಿದೆ. ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದಿರುವುದನ್ನು ಗುರುತಿಸಲಾಗುತ್ತದೆ.
ಶಿಕ್ಷಕರಿಗೂ ಗೌರವಧನ:
‘ರಜೆ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ಪಾಠ ಬೋಧನೆಗೆ ಬರುವ ಶಿಕ್ಷಕರಿಗೆ ಪ್ರತಿ ತರಗತಿಗೆ 400ರೂ.ರಂತೆ 25 ತರಗತಿಗಳಿಗೆ 10,000ರೂ. ಸಹಾಯಧನವನ್ನು ಇಲಾಖೆ ನೀಡಲಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಜೊತೆಗೆ ಅನುದಾನರಹಿತ ಶಾಲೆಗಳ ಶಿಕ್ಷಕರನ್ನೂ ಈ ವಿಶೇಷ ತರಗತಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’.
ವಿಷಯ ಸಂಗ್ರಹ:
ಶ್ರೀ ದೀಪಕ.ಎಸ್.ಗಣಾಚಾರಿ.
ಸಿ.ಆರ್.ಪಿ.ಬಿಳವಾರ
ತಾ:ಜೇವರ್ಗಿ. ಜಿ: ಕಲಬುರಗಿ.
ಮೊಬೈಲ್ ನಂ: 9972073906.
Note:
ನೀವು ನನ್ನ ಯೂಟ್ಯೂಬ್ ಚ್ಯಾನಲ್ Deepak Ganachari ಗೆ ಸಬಸ್ಕ್ರೈಬರ್ ಆಗಿ ಕೂಡ ಅನೇಕ ಮಾಹಿತಿಗಳನ್ನು ವೀಡಿಯೋ ಮೂಲಕ ನೋಡಬಹುದು. ಧನ್ಯವಾದಗಳು.
No comments:
Post a Comment