Thursday, 26 October 2017

ಓದು ಕರ್ನಾಟಕ/READ KARNATAKA BRIEF INFORMATION

ನಮಸ್ಕಾರ ಗುರು ಬಾಂಧವರೇ, ಓದು ಕರ್ನಾಟಕ ಎಂಬ ಯೋಜನೆಯ ಅನುಷ್ಠಾನ ಪ್ರತಿ ಶಾಲೆಗಳಲ್ಲೂ ಆಗಬೇಕಾಗಿರುತ್ತದೆ. ಆದ ಕಾರಣ ಆ ವಿ‌ಷಯದ ಬಗ್ಗೆ ನಿಮಗೂ ತಿಳಿದಿರಬೇಕಾದದ್ದೂ ಅವಶ್ಯಕವಾಗಿದೆ. ಹಾಗಾಗಿ ಈ ವಿಡಿಯೋದಲ್ಲಿ ಓದು ಕರ್ನಾಟಕ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ತಾವೆಲ್ಲಾ ಈ ವಿಡಿಯೋ ನೋಡಿ ಓದು ಕರ್ನಾಟಕ ಯೋಜನೆಯ ಸ್ವರೂಪ,ಗುರಿ,ಉದ್ದೇಶಗಳು & ಇತರ ಚಟುವಟಿಕೆ ಮಾಹಿತಿ ನೋಡಬಹುದು. ಕೂಡಲೇ ಈ ವಿಡಿಯೋ ನೋಡಿ & ಈ ವಿಡಿಯೋ ಲಿಂಕ್ ಇತರರಿಗೂ ಶೇರ್ ಮಾಡಿ. ನಿಮಗೆ ಇಲಾಖಾ ಮಾಹಿತಿ ಪಡೆಯಲು ನನ್ನ ಯೂಟ್ಯೂಬ್ ಚ್ಯಾನಲ್ Deepak.S.Ganachari ಗೆ ಸಬಸ್ಕ್ರೈಬ್ ಆಗಿ & ಯೂಟ್ಯೂಬ್ ಅಲ್ಲಿ ಬೆಲ್ ಬಟನ್ ಒತ್ತುವ ಮೂಲಕ ನನ್ನ ಮುಂದಿನ ಎಲ್ಲಾ ಅಪಲೋಡ್ ಆಗುವ ವಿಡಿಯೋಗಳ ನೋಟೀಫಿಕೇ‌ಷನ ನಿಮ್ಮ ಮೊಬೈಲ್ ಮೇಲೆ ಪಡೆಯಿರಿ. ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

      https://youtu.be/aTsqLnyJL50

Thursday, 19 October 2017

CSAS Exams 2017(ಸಿ.ಎಸ್.ಎ.ಎಸ್.ಪರೀಕ್ಷೆ)

ಎಲ್ಲರಿಗೂ ನಮಸ್ಕಾರ. ‌2017 ರ ನವೆಂಬರ್ 3&4 ರಂದು ರಾಜ್ಯಾದ್ಯಂತ ಸರ್ಕಾರಿ & ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ ವರ್ಷ 4 ರಿಂದ 9ನೇ ತರಗತಿಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಿ‌.ಎಸ್.ಎ.ಎಸ್.ಪರೀಕ್ಷೆ (ಸಂ.ಮೌ-1) ನಡೆಯಲಿದ್ದು, ಅದರ ಕುರಿತಾಗಿ ಈ ಕಿರು ವಿಡಿಯೋ ತಯಾರಿಸಲಾಗಿದೆ. ಎಲ್ಲರೂ ಈ ವಿಡಿಯೋ ನೋಡಿ, ಪರೀಕ್ಷೆ ಬಗ್ಗೆ ಪೂರ್ಣ ವಿವರ ಪಡೆಯಿರಿ. ಈ ವಿಡಿಯೋದಲ್ಲಿ ಮುಖ್ಯವಾಗಿ ಪರೀಕ್ಷೆ ನಡೆಸುವ ಅಧಿಕಾರಿ ವರ್ಗದವರ ಕಾರ್ಯಗಳು, ಜಿಲ್ಲಾ&ತಾಲ್ಲೂಕು ‌ಹಂತದ ಅಧಿಕಾರಿಗಳ ಕಾರ್ಯಗಳು, ಶಾಲಾ ಹಂತದಲ್ಲಿ ಮುಖ್ಯ ಗುರುಗಳ ಕಾರ್ಯಗಳು, ಕೊಠಡಿ ಮೇಲ್ವಿಚಾರಕರ ಕಾರ್ಯಗಳು, ಶಾಲಾ ಹಂತದಲ್ಲಿ ಅವಲೋಕನಕಾರರ ಕಾರ್ಯಗಳು, ಎಸ್.ಡಿ.ಎಂ.ಸಿ.ಕಾರ್ಯಗಳು, ಎಲ್ಲಾ ಸಿ.ಆರ್.ಪಿ ರವರ& ಇತರ ಅಧಿಕಾರಿಗಳ ಕಾರ್ಯ& ಜವಾಬ್ದಾರಿಗಳನ್ನು ಪ್ರತ್ಯೇಕವಾಗಿ ತಿಳಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಸ್ವರೂಪ, ಪರೀಕ್ಷೆ ನಡೆಸುವ ಬಗೆ, ಪ್ರಶ್ನೆ ಪತ್ರಿಕೆ ಸ್ವರೂಪ, ಓ.ಎಮ್.ಆರ್.ತುಂಬುವ ವಿಧಾನ, ಪ್ರಶ್ನೆ ಪತ್ರಿಕೆ& ಓ.ಎಮ್.ಆರ್. ವಿತರಿಸುವ ವಿಧಾನ, ಪರೀಕ್ಷೆಯಲ್ಲಿ ಆಸನಗಳ ವ್ಯವಸ್ಥೆ& ಇತರ ಮುಂಜಾಗ್ರತಾ ಕಾರ್ಯಗಳು,ಪರೀಕ್ಷೆ ಮುಗಿದ ಮೇಲೆ ಓ.ಎಮ್.ಆರ್. ಬಂಡಲಿಂಗ್ ವಿಧಾನ&ಇತರ ವಿಷಯಗಳ ಸಂಪೂರ್ಣವಾದ ವಿವರ ತಿಳಿಸಲಾಗಿದೆ.

        ಹಾಗಾದರೆ ಮತ್ತೇಕೆ ತಡ? ಕೂಡಲೇ ವಿಡಿಯೋ ನೋಡಿ& ವಿಡಿಯೋ ಶೇರ್ ಮಾಡಿ& ಈ ಯೂಟ್ಯೂಬ್ ಚ್ಯಾನಲ್ ಗೆ ಸಬಸ್ಚ್ರೈಬ್ ಆಗಿ.
ಈ‌ ವಿಡಿಯೋ‌ ಲಿಂಕ್ ಅನ್ನು ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ, ನಿಮ್ಮ ಇಲಾಖಾ ಅಧಿಕಾರಿ/ಇತರರಿಗೆ ಕಳುಹಿಸಿ,ಅವರಿಗೂ ಈ ಮಾಹಿತಿ ಮುಟ್ಟುವಂತೆ ಮಾಡಿ. ಈ ಪರೀಕ್ಷೆಯನ್ನು ಸೂಸುತ್ರವಾಗಿ ನಡೆಸಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ.

ಇದು ಅಪಲೋಡ್ ಆದ ಕೇವಲ 3 ದಿನಗಳಲ್ಲಿ ಈ ವಿಡಿಯೋ 13,000+ ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.ಇದರ ಸದುಪಯೋಗ ಎಲ್ಲಾ ಶಿಕ್ಷಕ ವರ್ಗ ಪಡೆಯಲು ಕೋರುತ್ತೆನೆ.ಈ ವಿಡಿಯೋ ಲಿಂಕ ನಿಮ್ಮ ಫ್ರೆಂಡ್ಸ್ &ಇತರರಿಗೂ ಶೇರ್ ಮಾಡಿ.ನನ್ನ ಚ್ಯಾನಲ್‌ಗೆ ಕೂಡಲೆ ಉಚಿತವಾಗಿ ಸಬಸ್ಕ್ರೈಬ್ ಆಗಿ.ಬೆಲ್ ಬಟನ್ ಕ್ಲಿಕ್ ಮಾಡಿ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಸೆಲೆಕ್ಟ್ ಮಾಡಿ,ಕಾಪಿ ಮಾಡಿ ಯಾವುದಾದರೂ ಬ್ರೌಸರ್ ಅಲ್ಲಿ ಕ್ಲಿಕ್ ಮಾಡಿ ಸರ್ಚ ಮಾಡಿ.👇

https://youtu.be/F-AUPrzz3zE

ಇಲ್ಲದಿದ್ದರೆ,ನೇರವಾಗಿ ಯೂಟ್ಯೂಬ್ ಓಪನ್ ಮಾಡಿ, ಸರ್ಚ್ ಬಾರ್ ಅಲ್ಲಿ Deepak Ganachari ಅಂತ ಟೈಪ್ ಮಾಡಿ.ನನ್ನ ಚ್ಯಾನಲ್ ಎಲ್ಲಾ ವಿಡಿಯೋಗಳು ಕಾಣ ಸಿಗುತ್ತವೆ.ಅಲ್ಲಿ ನಿಮಗೆ ಯಾವ ವಿಡಿಯೋ ಬೇಕೋ ಆ ವಿಡಿಯೋ ಕ್ಲಿಕ್‌ಮಾಡಿ ನೋಡಿ & ಅಲ್ಲಿ ಕಾಣಸಿಗುವ 'ಸಬಸ್ಕ್ರೈಬ್' ಕೆಂಪು ಬಣ್ಣದ ಬಟನ್ ಪ್ರೆಸ್ ಮಾಡಿ&'ಬೆಲ್' ಐಕಾನ್ ಕೂಡ ಕ್ಲಿಕ ಮಾಡಿ.

(Subscribe 'Deepak Ganachari' YouTube channel to get more educational,knowledge based& entertaining videos on the go.Get fast notifications by subscribing now for all my uploads on YouTube.

*Video Created By:
Deepak S Ganachari.
CRP Bilwar.Tq Jewargi.
Mob No:9972073906.

*You may also follow me on my twitter by following- @gklights .
It is the GK channel on twitter.

*You may also see my blog by searching Deepak.S.Ganachari.blogspot.com or deepak's inforum .
It is helpful to CET aspirants/Competitive exam preparators,Job seekers&others.

*You may also send your request personally to me to get add into my GKLIGHTS whatsapp group. It is the GK channel for all.

Let's stay connected to all my social media accounts to get lighten your life by getting knowledge by all these means. Share my videos/any updates to your friends&others to a better cause in spreading knowledge.Be a good one.

         Thank you& all the best.

Sunday, 15 October 2017

Vishwas Kiran Programme 2017

ವಿಶ್ವಾಸ ಕಿರಣ ಕಾರ್ಯಕ್ರಮ 2017:

ಕಲಿಕೆಯಲ್ಲಿ ಹಿಂದುಳಿದ ಸರಕಾರಿ&ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ನೆರವಾಗಲು ‘ವಿಶ್ವಾಸ ಕಿರಣ’ದ ಹೆಸರಿನಲ್ಲಿ ದಸರಾ ರಜೆ ವೇಳೆ ವಿಶೇಷ ಬೋಧನಾ ತರಗತಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದೆ.ಈ ವಿಶೇಷ ಕಲಿಕಾ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಎಲ್ಲಾ ಮಕ್ಕಳಿಗೆ& ಹಿಂದುಳಿದ ವರ್ಗಗಳ ಮಕ್ಕಳಿಗೆ ವಿಶೇಷ ನೆರವು ಸಿಗಲಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ 204 ಬ್ಲಾಕ್ ಗಳ ಆಯ್ದ 612 ಕೇಂದ್ರಗಳಲ್ಲಿ 11/10/2017 ಬುಧವಾರದಿಂದ 9&10ನೇ ತರಗತಿಯ ಮಕ್ಕಳಿಗೆ 25 ದಿನಗಳ ವಿಶೇಷ ಬೋಧನಾ ತರಗತಿ ಆರಂಭವಾಗಿವೆ. ಈ ಕಾರ್ಯಕ್ರಮದಡಿ ಜೇವರ್ಗಿ ತಾಲ್ಲೂಕಿನ ವ್ಯಾಪ್ತಿಯ ಆಯ್ದ ಶಾಲೆಗಳಲ್ಲಿ ಕಲಿಕಾ ಶಿಬಿರ ಆಯೋಜಿಸಲಾಗಿದೆ. ಜೇವರ್ಗಿ, ಮಂದೆವಾಲ, ಯಡ್ರಾಮಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮದ ಅನುಷ್ಠಾನ ಆಗಿದ್ದು,ಈ ಪ್ರತಿ ಕೇಂದ್ರಕ್ಕೆ ಹತ್ತಿರದ ಸರ್ಕಾರಿ& ಅನುದಾನಿತ ಪ್ರೌಢಶಾಲೆಗಳಿಂದ 200 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

‘ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಇದಾಗಿದೆ.ಇಂಗ್ಲೀಷ್ , ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ರಜಾ ದಿನಗಳಂದು ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, 9&10ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕಲಿಕಾಂಶಗಳ ವಿಷಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವಲ್ಲಿ ಹಾಗೂ ಪರೀಕ್ಷೆಯನ್ನು ಎದುರಿಸುವಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಯುಕ್ತ ವಿಶೇಷ ಬೋಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ರಜೆ ವೇಳೆ ಸತತ 12 ದಿನಗಳ ಕಾಲ ವಿಶೇಷ ತರಗತಿ ಆಯೋಜಿಸಿ ವಿಷಯ ತಜ್ಞರಿಂದ ಪಾಠ ಹೇಳಿಸಲಾಗುತ್ತದೆ. ದಸರಾ ರಜೆ ಮುಗಿದ ನಂತರ ಮುಂದೆ ಸತತ 13 ಭಾನುವಾರ ವಿಶೇಷ ತರಗತಿ ಆಯೋಜಿಸಲಾಗುವುದು ಎಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಹೇಳಿಕೆ ಆಗಿದೆ.

2016-17ನೇ ಸಾಲಿನಿಂದ ವಿಶ್ವಾಸ ಕಿರಣ ಯೋಜನೆ ಜಾರಿಯಾಗಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕಳೆದ ವರ್ಷಕ್ಕಿಂತ ಶೇಕಡವಾರು ಹೆಚ್ಚಿನ ಫಲಿತಾಂಶ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಈ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.

ಸಾಮಾನ್ಯ ವರ್ಗದ ಮಕ್ಕಳಿಗೆ ಅವಕಾಶವಿಲ್ಲ: ‘ವಿಶ್ವಾಸಕಿರಣ’ದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ಮಕ್ಕಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದು ಸಾಮಾನ್ಯ ವರ್ಗದ ಮಕ್ಕಳ ಪೋಷಕರ ಆಕ್ಷೇಪಕ್ಕೆ ಕಾರಣವಾಗಿದೆ. ಜೊತೆಗೆ ಕಡು ಬಡವರು ನಿಗದಿತ ಸ್ಥಳದಲ್ಲಿ ನಡೆಯುವ ಈ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಆರ್ಥಿಕ ಹೊರೆಯಾಗುತ್ತಿದೆ ಎನ್ನುವ ಕೂಗು ಸಾರ್ವಜನಿಕರಿಂದ ಕೆಲವು ಜಿಲ್ಲೆಗಳಲ್ಲಿ ಕೇಳಿ ಬರುತ್ತಿದೆ&ಮಧ್ಯಾಹ್ನದ ಬಿಸಿಯೂಟ ವಿವಿಧ ಜಿಲ್ಲೆಗಳ ಕೆಲವು ಕೇಂದ್ರಗಳಲ್ಲಿ ಲಭ್ಯವಿಲ್ಲದ್ದು ಕೂಡ ಈ ಕಾರ್ಯಕ್ರಮಕ್ಕೆ ಸ್ವಲ್ಪ ಹಿನ್ನೆಡೆ ಮಾಡುತ್ತಿದೆ.

‘ಸಾಮಾನ್ಯ ವರ್ಗದ ಮಕ್ಕಳಲ್ಲೂ ಕಲಿಕೆಯಲ್ಲಿ ಹಿಂದುಳಿದವರು ಇದ್ದಾರೆ. ಕೆಲವು ಪೋಷಕರು ಮಕ್ಕಳನ್ನು ಮನೆ ಪಾಠಕ್ಕೆ ಕಳುಹಿಸುವಷ್ಟು ಆರ್ಥಿಕವಾಗಿ ಉತ್ತಮವಾಗಿಲ್ಲ. ಯೋಜನೆಯಡಿ ಅವರಿಗೂ ಕಲಿಕೆಗೆ ಅವಕಾಶ ಮಾಡಿಕೊಡವಂತಾಗಲಿ ಎಂದು ಅನೇಕರ ಕೂಗು ಕೇಳಿಬರುತ್ತಿದೆ. ‘ಸರ್ಕಾರವೇ ಮಕ್ಕಳ ನಡುವೆ ಈ ರೀತಿಯ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಹಲವು ಪಾಲಕರು ಬೇಸರ ವ್ಯಕ್ತಪಡಿಸುತ್ತಾರೆ.

ಮೂರು ವಿಷಯಗಳ ಬೋಧನೆ:
‘ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ತರಲಾಗಿದೆ. ಹೆಚ್ಚಿನ ಮಕ್ಕಳು ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಮೂರು ವಿಷಯಗಳ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲು ಮೊದಲ ದಿನ ಪರೀಕ್ಷೆ ನಡೆಸಲಾಗಿದೆ. ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದಿರುವುದನ್ನು ಗುರುತಿಸಲಾಗುತ್ತದೆ.

ಶಿಕ್ಷಕರಿಗೂ ಗೌರವಧನ:
‘ರಜೆ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ಪಾಠ ಬೋಧನೆಗೆ ಬರುವ ಶಿಕ್ಷಕರಿಗೆ ಪ್ರತಿ ತರಗತಿಗೆ 400ರೂ.ರಂತೆ 25 ತರಗತಿಗಳಿಗೆ 10,000ರೂ. ಸಹಾಯಧನವನ್ನು ಇಲಾಖೆ ನೀಡಲಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಜೊತೆಗೆ ಅನುದಾನರಹಿತ ಶಾಲೆಗಳ ಶಿಕ್ಷಕರನ್ನೂ ಈ ವಿಶೇಷ ತರಗತಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’.

ವಿಷಯ ಸಂಗ್ರಹ:
ಶ್ರೀ ದೀಪಕ.ಎಸ್.ಗಣಾಚಾರಿ.
    ಸಿ.ಆರ್.ಪಿ.ಬಿಳವಾರ
ತಾ:ಜೇವರ್ಗಿ. ಜಿ: ಕಲಬುರಗಿ.
ಮೊಬೈಲ್ ನಂ: 9972073906.

Note:
ನೀವು ನನ್ನ ಯೂಟ್ಯೂಬ್ ಚ್ಯಾನಲ್ Deepak Ganachari ಗೆ ಸಬಸ್ಕ್ರೈಬರ್ ಆಗಿ ಕೂಡ ಅನೇಕ ಮಾಹಿತಿಗಳನ್ನು ವೀಡಿಯೋ ಮೂಲಕ  ನೋಡಬಹುದು. ಧನ್ಯವಾದಗಳು.

Sunday, 1 October 2017

MAHATMA GANDHI JAYANTI 2024

#ಮಹಾತ್ಮ ಗಾಂಧಿ ಜನ್ಮ ದಿನಾಚರಣೆ#

      *ಪ್ರತಿವರ್ಷ ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.*

       *ಈ ಅಕ್ಟೋಬರ್ 2, 2024 ರಂದು ನಾವೆಲ್ಲಾ ಗಾಂಧೀಜಿಯವರ 155 ನೇಯ ಹುಟ್ಟುಹಬ್ಬ ಆಚರಿಸಲಿದ್ದೇವೆ/ಆಚರಿಸುತ್ತಿದ್ದೇವೆ.

     *ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಇಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಇದರ ಜೊತೆಗೆ ಇಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಕಾರಣ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇಧಿಸಿರುವುದು ಹೆಮ್ಮೆಯ ಸಂಗತಿಯು ಹೌದು.

    * ನಮಗೆಲ್ಲಾ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು. ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ.ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13ನೇಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ . 19ನೇಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ 2 ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಸಹ ಅವರನ್ನು ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ.ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು.1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ದಂಡಿ ಯಾತ್ರೆ ಕೂಡ ಒಂದು. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.'ಭಾರತ ಬಿಟ್ಟು ತೊಲಗಿರಿ'/ 'ಕ್ವಿಟ್ ಇಂಡಿಯಾ' ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿದರು.

     *ಸತ್ಯ ಮತ್ತು ಅಹಿಂಸೆ ಅವರ ಮುಖ್ಯ ತತ್ವಗಳು ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೇಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಇವರು 'ತರುಣ ಭಾರತ' (YOUNG INDIA) ಎನ್ನುವ ಆಂಗ್ಲಭಾಷಾ ವಾರಪತ್ರಿಕೆಯನ್ನು (1919 ರಿಂದ 1931 ರವರೆಗೆ)ಹೊರಡಿಸುತ್ತಿದ್ದರು. 'ಸತ್ಯದೊಂದಿಗೆ ನನ್ನ ಪ್ರಯೋಗಗಳು' (Experiments With My Truth) ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಮಹಾತ್ಮ ಗಾಂಧಿ ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು.

** ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.ಅವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ ಕೂಡ ಅವರ ಆದರ್ಶಗಳು ನಮ್ಮೆಲ್ಲರ ಮನಗಳಲ್ಲಿ ರಾರಾಜಿಸುತ್ತಿರುತ್ತವೆ. ಇಂತಹ ಅಪೂರ್ವ ಚೇತನರನ್ನು ಇಂದು ಪೂಜಿಸುವ ಮೂಲಕ ನಾವೆಲ್ಲಾ ಅವರ ಉತ್ತಮ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸೋಣ.ಧನ್ಯತೆ ಮೆರೆಯೋಣ.

* ರಘುಪತಿ ರಾಘವ ರಾಜರಾಮ್...
  ಪತಿತ ಪಾವನ ಸೀತಾರಾಮ್....
  ಈಶ್ವರ್ ಅಲ್ಲಾ ತೇರೆ ನಾಮ್
  ಸಬಕೋ ಸನ್ಮತಿ ದೇ ಭಗವಾನ್......

#Message By:
Deepak.S.Ganachari.
Admission of TEAM 'GKLIGHTS'.
CRP BILWAR.TQ JEWARGI.