Wednesday, 10 April 2019

Yake Badadadti Tamma-Lyrics

ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ, ಸಂಸಾರ ನೆಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ

ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ, ಸಂಸಾರ ನೆಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ.

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ
ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ, ಇದ್ರೆ ತಿಂಬೋ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ, ಮಣ್ಣು ಮುಚ್ಚೋ ತನಕ

ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ.

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲಿ ತನಕ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲಿ ತನಕ
ಬದುಕೀ ಬೆಳೆಯೋ ತನಕ, ಬದುಕೀ ಬೆಳೆಯೋತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ, ಮಣ್ಣು ಮುಚ್ಚೋ ತನಕ

ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ ಮಣ್ಣಮುಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ ಮಣ್ಣಮುಚ್ಚಿ.

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿ ತನಕ
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿ ತನಕ

ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ
ಕಳಚಯ್ಯ ಮಾಯದ ಪೊರೆಯ ಮುಕ್ತಿಹೊಂದಾಕ
ಕಳಚಯ್ಯ ಮಾಯದ ಪೊರೆಯ ಮುಕ್ತಿಹೊಂದಾಕ

ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣಮುಚ್ಚಿ..

Ee Bhoomi Bannada Buguri-Lyrics

Ee Bhoomi Bannada Buguri


Film : Mahakshatriya
Actors : Vishnuvardhan,Ram kumar,Sudharani
Singer : S P B

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಬಾಷೆಯ ಕಲಿಸೊ
ಸರಿಯಾದ ದಾರಿಗೆ ನೆಡೆಸೊ
ಸಂಸ್ಕೃತಿಯೇ ಗುರುವು ಕಣೋ

ಮರೆತಾಗ ಜೀವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ

ಕಳಬೇಡ ಕೊಲ್ಲಲು ಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ..

Needu Shiva Needadiru Shiva-Lyrics

Needu Shiva -K. S. Chithra

ನೀಡು ಶಿವ ನೀಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ

ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ

ನೀಡು ಶಿವ ನೀಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ

ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ

- ಪಂಚಾಕ್ಷರಿ ಗವಾಯಿ.

Ello Hudukide Illada Devara-Lyrics

Ello Hudukide Illada- C. Ashwath

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಿಮ್ಮೊಳಗೆ ||

ಎಲ್ಲಿದೆ ನಂದನ, ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ ||

Kaliyugadolu Harinaamava Nenedare-Lyrics

ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವೋ  ರಂಗ  ||ಪ||

ಸುಲಭದ ಮುಕುತಿಗೆ ಸುಲಭನೆಂದೆನಿಸುವ

ಜಲರುಹನಾಭನ ನೆನೆಮನವೆ ||ಅ.ಪ||


ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ

ಜಾನಕಿ ವಲ್ಲಭ ದಶರಥನಂದನ

ಗಾನವಿನೋದನ ನೆನೆಮನವೆ ||1||


ಅರ್ಚಿಸಲರಿಯೆನು ಮೆಚ್ಚಿಸಲರಿಯೆನು 

ತುಚ್ಛನು ನಾನೆಂದೆನಬೇಡ 

ಅಚ್ಯುತಾನಂತ ಗೋವಿಂದ ಮುಕುಂದನ

ಇಚ್ಛೆಯಿಂದ ನೀ ನೆನೆಮನವೆ ||2||


👍 ಜಪವೊಂದರಿಯೇನು, ತಪವೊಂದರಿಯೆನು..

ಉಪದೇಶವಿಲ್ಲೆಂದೆನಬೇಡ

ಅಪಾರ ಮಹಿಮ ಶ್ರೀಪುರಂದರವಿಠಲನ

ಉಪಾಯದಿಂದಲಿ ನೆನೆಮನವೆ ||3||


Sada Enna Hrudayadalli -Lyrics

Sada Enna Hrudayadalli /
ಸದಾ ಎನ್ನ ಹೃದಯದಲ್ಲಿ....


ಸದಾ ಎನ್ನ ಹೃದಯದಲ್ಲಿ,
ವಾಸ ಮಾಡೋ ಶ್ರೀ ಹರೀ.
ನಾದ ಮೂರ್ತಿ ನಿನ್ನ ಚರಣ ,
ಮೋದದಿಂದ ಭಜಿಸುವೆನೋ..

ಜ್ಞಾನವೆಂಬ ನವರತ್ನದ
ಮಂಟಪದ ಮಧ್ಯದಲ್ಲಿ
ಗಾನ ಲೋಲನ ಕುಳ್ಳಿರಿಸಿ
ಧ್ಯಾನದಿಂದ ಭಜಿಸುವೇನೋ..

ಭಕ್ತಿರಸವೆಂಬ ಮುತ್ತು
ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದು
ಮುತ್ತಿನ ಆರತಿ ಎತ್ತುವೇನೋ..

ನಿನ್ನ ನಾನು ಬಿಡುವನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ
ನಿನ್ನ ಭಕ್ತರ ಕೇಳೋ ಸೊಲ್ಲ..