ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವೋ ರಂಗ ||ಪ||
ಸುಲಭದ ಮುಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆಮನವೆ ||ಅ.ಪ||
ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ
ಜಾನಕಿ ವಲ್ಲಭ ದಶರಥನಂದನ
ಗಾನವಿನೋದನ ನೆನೆಮನವೆ ||1||
ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆಮನವೆ ||2||
👍 ಜಪವೊಂದರಿಯೇನು, ತಪವೊಂದರಿಯೆನು..
ಉಪದೇಶವಿಲ್ಲೆಂದೆನಬೇಡ
ಅಪಾರ ಮಹಿಮ ಶ್ರೀಪುರಂದರವಿಠಲನ
ಉಪಾಯದಿಂದಲಿ ನೆನೆಮನವೆ ||3||
No comments:
Post a Comment