Friday, 15 November 2019

Kuchiku Kuchiku-Diggajaru Lyrics

ಓ ಗೆಳೆಯಾ! ಜೀವದ್ಗೆಳೆಯಾ!
ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
ಕುಚುಕು ಕುಚುಕು ಕುಚುಕು,
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು.
ಜೀವಕಿನ್ನ ಜಾಸ್ತಿ ಕಣೋ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ!
ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
ಕುಚುಕು ಕುಚುಕು ಕುಚುಕು
ಒಯ್ಯ್ ಕುಚುಕು ಕುಚುಕು ಕುಚುಕು
ನಾನು ಚಡ್ಡಿ ಜೋಸ್ತಿ ಕಣೋ ಕುಚುಕು.
ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ!
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ.

ನೆನಪೈತ ನಿಂಗೆ ಮರಕೋತಿ ಆಟ,
ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನ್ಸ್ಕೊಂದ್ರೆ ಈಗ್ಲೂ ಬಾಯ್ ತುಂಬ ಜೊಲ್ಲು
ಕುಚುಕು ಕುಚುಕು ಕುಚುಕು,
ಆ ಕಾಲ ಬರ್ತಯ್ತ ಕುಚುಕು...
ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ,
ನೀರು ಕುಡ್ದು ಹೆಂಗೋ ಮ್ಯಾಲಕ್ಕೆ ಎದ್ದೆ
ನೆನ್ಸ್ಕೊಂದ್ರೆ ಈಗ್ಲೂ ಎದೆ ತುಂಬ ದಿಗ್ಲು
ಕುಚುಕು ಕುಚುಕು ಕುಚುಕು
ಬರವಯ್ತ ಇದಕ್ಕೆ ಕುಚುಕು,
ಅಮ್ಮನೇ ಇಲ್ಲದ ಕೊರಗನೆ ಮರೆಸಿದೆ,
ತುತ್ತಿಡೋ ಕಯ್ಯಾದೆ ನೀ,
ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೋ ಹಾಗೆಯೇ
ನನ್ನ ನೀ ಕಾಯುವೆ,
ನನ್ನ ಸೇವೆಲೇ ನೀ ಸವೆಯುವೆ
ಕುಚುಕು ಕುಚುಕು ಕುಚುಕು,
ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು.
ಜೀವಕಿನ್ನ ಜಾಸ್ತಿ ಕಣೋ ಕುಚುಕು.

ನಿಂಗಾಗಿ ಕವಡೆ ಕೊಂಡಿದ್ದು ಕಾಣೆ,
ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ,
ನಂಗಾಗಿ ಎಲ್ಲ ನಿಂಗೇನೂ ಇಲ್ಲ
ಯಾರೋ ಯಾರೋ ನೀನು,
ಯಾವ ಜನ್ಮದ ಮಗನೋ ನೀನು,
ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು
ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
ಹೊತ್ತು ತಿರುಗುತೀನಿ ಋಣ ಮುಟಿಸುತೀನಿ
ಗೆಳೆಯಾ ಕುಚುಕು ಗೆಳೆಯಾ
ಆಗ ನೀನು ಒಡೆಯ ನಾನು ಗೆಳೆಯಾ
ನೆರಳಿಡೋ ಮರವಿದು ಮುಳ್ಳಿನ ಜಲ್ಮವ
ಬೇಡಲೇಬಾರ್ದಯ್ಯ 
ಮರ ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ
ನಾನುವೇ ಮನ್ಸ್ನಯ್ಯ, 
ಒಸಿ ನಂಗೂನೂ ಕುಸಿ ಉಳ್ಸಯ್ಯ
ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು
ನಾನು ಚಡ್ಡಿ ದೋಸ್ತಿ ಕಣೋ ಕುಚುಕು.
ದೋಸ್ತಿ ಮ್ಯಾಲೆ ಕ್ವಾಪ ಬೇಡ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ!
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ
ದೋಸ್ತಿ ಜಾಸ್ತಿ ಕಣೋ...

No comments:

Post a Comment