ಕನ್ನಡ ನಾಡಿನ ಜೀವನದಿ ಕಾವೇರಿ-ಜೀವನದಿ(ಗಂಡು ).
ಆ... ಆ... ಆ...ಆ ಆ ಆ ಆ ಆ ಆ ಆ ಆ..
ಆಆ ಆ ಆ ಆಆ ಆ ಆ ಆ...
ಆ.. ಆ.. ಆ.. ಆ....ಆಆಆ ಆಆಆ ಆಆಆ ಆಆ ಆ...
ಆ..ಆ.. ಆ.. ಆ..ಆ..ಆ.. ಆ.. ಆ..
ಗಂಗೆಯ.. ತುಂಗೆಯ..ಪ್ರೀತಿಯ ಸೋದರಿ..
ಪಾವನೆ ಪುಣ್ಯನದಿ..
ಬಳುಕುತ.. ಕುಲುಕುತ.. ಹರುಷವ ಚೆಲ್ಲುತ..
ಸಾಗುವ ಧನ್ಯ ನದಿ..
ತಾ ಹೆಜ್ಜೆಯ ಇಟ್ಟೆಡೆ..ಅಮೃತ ಹರಿಸಿ.. ಕಾಯುವ ಭಾಗ್ಯನದಿ..
ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೇ...
ಸಂತೋಷದಾ... ಸಕ್ಕರೇ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ.. ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಕೊಡಗಲಿ.. ನೀ ಹುಟ್ಟಿ ..ಹರಿಯುವೆ.. ನಲಿವಿನಿಂದ..
ತರುತಲಿ.. ಎಲ್ಲೆಲ್ಲೂ..ಆನಂದ ..
ಹಸಿರಿನ.. ಬೆಳೆ ತಂದು..ಕುಡಿಯುವ.. ಜಲ ತಂದು..
ಚೆಲ್ಲುವೆ..ನಗೆಯೆಂಬ..ಶ್ರೀಗಂಧ...
ಧುಮುಕುತ.. ವೇಗದ.. ಜಲಪಾತದಲಿ..ವಿದ್ಯುತ ನೀಡುವೆ..
ಬಯಲಲಿ..ಕಾಡಲಿ..ಕಲಕಲ ಹರಿಯುತ ನಾಟ್ಯವಾ ಮಾಡುವೆ
ಮಂದಗಾಮಿನಿ..ಶಾಂತಿವಾಹಿನಿ .
ಚಿರನೂತನ..ಚೇತನ..ಧಾತೆಯು.ನೀನೇ..ದಕ್ಷಿಣ ಮಂದಾಕಿನಿ
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಹುಟ್ಟುವ.. ಕಡೆಯೊಂದು..ಫಲ ಕೊಡೊ... ಕಡೆಯೊಂದು..
ಸಾಗರದಲಿ.. ನದಿಗೆಂದು.. ಸಂಗಮವು...
ತವರಿನ.. ಮನೆಯೊಂದು..ಗಂಡನ.. ಮನೆಯೊಂದು..
ಹೆಣ್ಣಿಗೆ..ಇದೆಯೆಂದು.. ಜೀವನವು..
ತಂದೆಯು..ತಾಯಿಯು..ಅಣ್ಣನು.. ತಂಗಿಯು..
ಎಲ್ಲಾ ದೂರವೂ ...
ಹೊಸ ಮನೆ.. ಹೊಸ ಜನ..ಹೊಸ-ಹೊಸ ಬಂಧವು..
ಅಲ್ಲೇ ಸಂತೋಷವು..
ಮನೆಯಾ.. ದೀಪವು..ಬಾಳ..ಸಂಗೀತವು..
ಮನ ಮೆಚ್ಚಿದ.. ಮಡದಿಯು.. ಸಿಕ್ಕಿದ ಮೇಲೆ..
ಸ್ವರ್ಗ ಸಂಸಾರವು..
ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾ..ರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೆ ...
ಸಂತೋಷದಾ... ಸಕ್ಕರೆ ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ..ಎಎ ಎಎ ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..
---------------------------------------------------------------------------
ಕನ್ನಡ ನಾಡಿನ ಜೀವನದಿ ಕಾವೇರಿ-ಜೀವನದಿ(ಹೆಣ್ಣು).
ಆ... ಆ... ಆ...ಆ ಆ ಆ ಆ ಆ ಆ ಆ ಆ..
ಆಆ ಆ ಆ ಆಆ ಆ ಆ ಆ...
ಆ.. ಆ.. ಆ.. ಆ....ಆಆಆ ಆಆಆ ಆಆಆ ಆಆ ಆ...
ಆ..ಆ.. ಆ.. ಆ..ಆ..ಆ.. ಆ.. ಆ..
ಗಂಗೆಯ.. ತುಂಗೆಯ..ಪ್ರೀತಿಯ ಸೋದರಿ..
ಪಾವನೆ ಪುಣ್ಯನದಿ..
ಬಳುಕುತ.. ಕುಲುಕುತ.. ಹರುಷವ ಚೆಲ್ಲುತ..
ಸಾಗುವ ಧನ್ಯ ನದಿ..
ತಾ ಹೆಜ್ಜೆಯ ಇಟ್ಟೆಡೆ..ಅಮೃತ ಹರಿಸಿ.. ಕಾಯುವ ಭಾಗ್ಯನದಿ..
ಕನ್ನಡ ನಾಡಿನ ಜೀವನದೀ.. ಈ ಕಾವೇರಿ...
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಅನ್ನವ ನೀಡುವ ದೇವನದಿ..ಈ ವಯ್ಯಾರಿ...
ಓ..ಹೋ.. ಹೋ.. ದೇವನದಿ ಈ ವಯ್ಯಾರಿ..
ಈ..ತಾಯಿಯೂ...ನಕ್ಕರೇ...
ಸಂತೋಷದಾ... ಸಕ್ಕರೇ..
ಮಮತೆಯಾ.. ಮಾತೆಗೆ..
ಭಾಗ್ಯದಾ.. ದಾತೆಗೆ..
ಮಾಡುವೆ.. ಭಕ್ತಿಯಾ.. ವಂದನೇ.. ಓ...ಓ ..ಓ ..ಓ ...
ಕನ್ನಡ ನಾಡಿನ ಜೀವನದೀ.. ಈ ಕಾವೇರಿ..
ಓ..ಹೋ..ಹೋ ಜೀವನದೀ.. ಈ ಕಾವೇರಿ..
ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ...
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ
ಲಜ್ಜೆಯು ಅಳಿಯದು
ಮೀರುತಾ ಸಾಗಿಸಿ
ಸಾಗರ ಹರಸಿದೆ
ತನ್ನನೆ ಮರೆತು, ಕಡಲಲೆ ಬೆರೆತು
ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮಾ ಹಾಡಾಗಿದೆ
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ
ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೇ
ಭಾಗ್ಯದಾ ದಾತೆಗೇ
ಮಾಡುವೆ ಭಕ್ತಿಯಾ ವಂದನೇ... ಏ... ಓ...