Friday, 25 October 2019

Aa Rathiye Dharegilidante-Dhruvatare Lyrics

ಆ ರತಿಯೇ ಧರೆಗಿಳಿದಂತೆ- ಚಿತ್ರ: ಧ್ರುವತಾರೆ.


ಗಂ: ಆ ರತಿಯೇ,ಧರೆಗಿಳಿದಂತೆ..ಆ ಮದನ,ನಗುತಿರುವಂತೆ..
      ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ..
      ಹೂ ಬಾಣವಾಯಿತೋ...ಎನಿಸುತಿದೆ...

      ಆ ರತಿಯೇ,ಧರೆಗಿಳಿದಂತೆ..ಆ ಮದನ,ನಗುತಿರುವಂತೆ..
      ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ..
      ಹೂ ಬಾಣವಾಯಿತೋ...ಎನಿಸುತಿದೆ...

ಗಂ: ಮಾಮರ ತೂಗುತ.. ಚಾಮರ ಹಾಕುತ..                            ಪರಿಮಳ ಎಲ್ಲೆಡೆ.. ಚೆಲ್ಲುತಿರೇ.. 
      ಗಗನದ ಅಂಚಲಿ.. ರಂಗನು ಚೆಲ್ಲುತ..                                ಸಂಜೆಯು ನಾಟ್ಯವ.. ಆಡುತಿರೇ..
      ಪ್ರಣಯದ ಕಾಲ.. ಬಂತು ನೋಡಿ.. ಎಂದು ಹಾಡಿ..              ಕೋಗಿಲೆಯೂ ನಲಿಯುತಿರೆ..

ಹೆ:   ಲಾ ಲ ಲ ಲಾ, ಲ ಲ ಲ ಲ ಲಾ...

ಗಂ: ಆ ರತಿಯೇ,ಧರೆಗಿಳಿದಂತೆ..ಆ ಮದನ,ನಗುತಿರುವಂತೆ..
      ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ..
      ಹೂ ಬಾಣವಾಯಿತೋ...ಎನಿಸುತಿದೆ...

ಗಂ: ಪ್ರೇಮದ ಭಾವಕೆ..ಪ್ರೀತಿಯ ರಾಗಕೆ..
       ಮೌನವೆ ಗೀತೆಯ.. ಹಾಡುತ್ತಿರೇ..
       ಸರಸದ ಸ್ನೇಹಕೆ..ಒಲವಿನ ಕಾಣಿಕೆ..
       ನೀಡಲು ಅದರವು.. ಅರಳುತಿರೇ..
       ಎಂದಿಗು ಹೀಗೆ..ಬಾಳುವಾಸೆ ತುಂಬಿ ಬಂದು..
       ಪ್ರೇಮಿಗಳೂ ನಲಿಯುತಿರೆ..
       ಪ್ರೇಮಿಗಳೂ ನಲಿಯುತಿರೆ..

ಗಂ: ಆ ರತಿಯೇ,ಧರೆಗಿಳಿದಂತೆ.. ಆ ಮದನ,ನಗುತಿರುವಂತೆ..
      ಕಲ್ಲು ಮುಳ್ಳೆಲ್ಲ.. ಬಳ್ಳಿ ಮೊಗ್ಗೆಲ್ಲ..
      ಹೂ ಬಾಣವಾಯಿತೋ...ಎನಿಸುತಿದೆ...
      ಹೂ ಬಾಣವಾಯಿತೋ......ಎನಿಸುತಿದೆ...
      ಹೂ ಬಾಣವಾಯಿತೋ...ಎನಿಸುತಿದೆ...
      ಹೂ ಬಾಣವಾಯಿತೋ...........ಎನಿಸುತಿದೆ...

No comments:

Post a Comment