Wednesday, 16 October 2019

Elliruve Manava Kaduva Roopasiye..Lyrics

Elliruve Manava Kaaduva Roopasiye..

 ಚಿತ್ರ: ಬಯಲುದಾರಿ 



ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ 

ತೇಲುವ ಈ ಮೋಡದ ಮೇಲೆ ನೀನಿಂತ ಹಾಗಿದೆ
ನಗುನಗುತ ನಲಿನಲಿದು ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ 
ತನುವೆಲ್ಲ..ಹಗುರಾಗಿ..ತೇಲಾಡುವಂತಿದೆ..ಆಡುವಂತಿದೆ...
ಚೆಲುವೆ...ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ...
ಬಯಕೆಯ..ಬಳ್ಳಿಯ.. ನಗುವ ಹೂವಾದ ಪ್ರೇಯಸಿಯೇ
ನೀನು ಎಲ್ಲಿರುವೆ.. ಮನವ ಕಾಡುವ ರೂಪಸಿಯೇ...

ಕಣ್ಣಲ್ಲಿ ಒಲವಿನ ಗೀತೆ ನೀನು ಹಾಡಿದಂತಿದೆ 
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ...
ನಲ್ಲೆ...ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯ..ಬಳ್ಳಿಯ.. ನಗುವ ಹೂವಾದ ಪ್ರೇಯಸಿಯೇ
ಬಯಕೆಯ..ಬಳ್ಳಿಯ.. ನಗುವ ಹೂವಾದ ಪ್ರೇಯಸಿಯೇ
ನೀನು ಎಲ್ಲಿರುವೆ.. ಮನವ ಕಾಡುವ ರೂಪಸಿಯೇ...

No comments:

Post a Comment